ಮನೋರಂಜನೆ

ಅನುಪಮ್ ಖೇರ್-ನಾಸಿರುದ್ದೀನ್ ಶಾ ಮಧ್ಯೆ ಮುಂದುವರಿದ ವಾಕ್ಸಮರ !

Pinterest LinkedIn Tumblr

ನವದೆಹಲಿ: ಬಾಲಿವುಡ್ ನ ಹಿರಿಯ ನಟರಾದ ‘ದ ವೆಡ್ ನೆಸ್ ಡೇ’ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದ ನಾಸಿರುದ್ದೀನ್ ಶಾ ಮತ್ತು ಅನುಪಮ್ ಖೇರ್ ಪರಸ್ಪರ ದೋಷಾರೋಪ ಮಾಡಿ ಸುದ್ದಿಯಾಗಿದ್ದಾರೆ.

ನಾಸಿರುದ್ದೀನ್ ಶಾ ಅವರಿಗೆ ಅಮಲು ಪದಾರ್ಥಗಳನ್ನು ಸೇವಿಸುವ ಅಭ್ಯಾಸವಿರುವುದರಿಂದ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರದ ನೀತಿಗಳನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಳ್ಳುವ ಅನುಪಮ್ ಖೇರ್ ವಿರುದ್ಧ ನಿನ್ನೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ನಾಸಿರುದ್ದೀನ್ ಶಾ ಅವರೊಬ್ಬ ಹಾಸ್ಯಗಾರ, ಕೋಡಂಗಿ, ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದಿದ್ದರು.

ಅನುಪಮ್ ಖೇರ್ ನಂತಹ ವ್ಯಕ್ತಿಗಳು ಮುಕ್ತವಾಗಿ ಎಲ್ಲವನ್ನೂ ಹೇಳುತ್ತಾರೆ, ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಅವರೊಬ್ಬ ಹಾಸ್ಯಗಾರನಿದ್ದಂತೆ. ಎಫ್ ಟಿಐ ಮತ್ತು ಎನ್ಎಸ್ಡಿಯಲ್ಲಿರುವ ಅವರ ಸಮಕಾಲಿನರು ಸಹಿತ ಖೇರ್ ಅವರ ಸೈಕೋ ಫಾಂಟಿಕ್ ವ್ಯಕ್ತಿತ್ವದ ಬಗ್ಗೆ ಹೇಳಬಲ್ಲರು, ಅದು ಅವರ ರಕ್ತದಲ್ಲಿದೆ, ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು.

ಇದಕ್ಕೆ ಟ್ವಿಟ್ಟರ್ ನಲ್ಲಿ ವಿಡಿಯೊ ಸಂದೇಶ ಮಾಡಿ ತಿರುಗೇಟು ನೀಡಿರುವ ಅನುಪಮ್ ಖೇರ್, ಚಿತ್ರೋದ್ಯಮದಲ್ಲಿ ಬೇರೆಯವರನ್ನು ಟೀಕಿಸುವುದೇ ನಾಸಿರುದ್ದೀನ್ ಶಾ ಕೆಲಸವಾಗಿದೆ. ಇಷ್ಟು ದಿನ ನಿಮ್ಮ ಬಗ್ಗೆ ಏನೂ ಕೆಟ್ಟದಾಗಿ ಹೇಳಿರಲಿಲ್ಲ, ಆದರೆ ಈಗ ಹೇಳುತ್ತಿದ್ದೇನೆ, ಇಷ್ಟೊಂದು ಸಾಧನೆ ಮಾಡಿದರೂ ನೀವು ಜೀವನವಿಡೀ ಗೊಂದಲದಲ್ಲಿಯೇ ಕಳೆದಿದ್ದೀರಿ, ನೀವು ದಿಲೀಪ್ ಕುಮಾರ್, ಅಮಿತಾಬ್ ಬಚ್ಚನ್, ರಾಜೇಶ್ ಖನ್ನಾ, ಶಾರೂಕ್ ಖಾನ್, ವಿರಾಟ್ ಕೊಹ್ಲಿ ಅವರನ್ನು ಕೂಡ ಟೀಕೆ ಮಾಡಿದರೆ ನಾನು ಮಹಾನ್ ಜನತೆ ಮಧ್ಯೆ ಇದ್ದೇನೆ ಎಂದು ಅಂದುಕೊಳ್ಳುತ್ತೇನೆ. ನೀವು ಅಮಲು ಪದಾರ್ಥ ವ್ಯಸನಿಯಾಗಿರುವುದರಿಂದ ಇವರ್ಯಾರು ನಿಮ್ಮ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಿಮಗೆ ಸರಿ ಯಾವುದು, ತಪ್ಪು ಯಾವುದು ಗೊತ್ತಿಲ್ಲ ಎಂದು ಅನುಪಮ್ ಖೇರ್ ಟೀಕಿಸಿದ್ದಾರೆ,

ನನ್ನ ರಕ್ತದಲ್ಲಿರುವುದು ಹಿಂದೂಸ್ತಾನ, ಅದನ್ನು ನೀವು ಅರ್ಥ ಮಾಡಿಕೊಳ್ಳಿ ಎಂದು ಖೇರ್ ಶಾಗೆ ತಿರುಗೇಟು ಕೊಟ್ಟಿದ್ದಾರೆ.

Comments are closed.