ಮನೋರಂಜನೆ

‘ಭಜರಂಗಿ 2’ ಫಸ್ಟ್‌ಲುಕ್ ರಿಲೀಸ್

Pinterest LinkedIn Tumblr


ಡಾ.ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ ಸಿನಿಮಾ 2013ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಐಂದ್ರಿತಾ ರೈ ಅವರು ಶಿವಣ್ಣನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ನಿರ್ದೇಶನ ಹೇಳಿದ್ದವರು ಹರ್ಷ. ತೆರೆ ಕಂಡ 25 ದಿನದಲ್ಲೇ ಒಳ್ಳೆಯ ಗಳಿಕೆ ಕಂಡಿತ್ತು ‘ಭಜರಂಗಿ’ ಸಿನಿಮಾ. ಈಗ ಇದೇ ಟೈಟಲ್‌ ಇಟ್ಟುಕೊಂಡು ‘ಭಜರಂಗಿ 2’ ಸಿನಿಮಾ ಸೆಟ್ಟೇರಿದೆ. ಇದರ ಫಸ್ಟ್‌ಲುಕ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ.

ಸಂಕ್ರಾಂತಿ ಹಬ್ಬಕ್ಕೆ ‘ಭಜರಂಗಿ 2’ ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಆಗತ್ತೆ ಎಂದು ಈ ಮೊದಲೇ ಹೇಳಲಾಗಿತ್ತು. ಅಂತೆಯೇ ‘ಭಜರಂಗಿ 2’ ಸಿನಿಮಾದ ಲುಕ್ ಹೊರಬಿದ್ದಿದೆ. ಶಿವಣ್ಣನ ಕಣ್ಣು ಈ ಪೋಸ್ಟರ್‌ನ ಹೈಲೇಟ್ ಆಗಿದೆ. ಜೊತೆಯಲ್ಲಿ ಚಾಣಾಕ್ಯನಂತಿರುವ ಮತ್ತೊಂದು ವ್ಯಕ್ತಿ ಈ ಪೋಸ್ಟರ್‌ನಲ್ಲಿದ್ದಾರೆ. ಹೀಗಾಗಿ ಈ ವ್ಯಕ್ತಿ ಯಾರು? ಶಿವಣ್ಣನ ಪಾತ್ರಕ್ಕೂ, ಈ ಸಿನಿಮಾದ ಕಥೆಗೂ ಇವರಿಗೂ ಏನು ಸಂಬಂಧ ಮುಂತಾದ ಪ್ರಶ್ನೆಗಳು ಎದ್ದಿವೆ. ನಟಿ ಭಾವನಾ ಮೆನನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸೇರಿದಂತೆ ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಭಜರಂಗಿ ಸಿನಿಮಾಕ್ಕಿಂತ ‘ಭಜರಂಗಿ 2’ ಸಿನಿಮಾದ ಕಥೆಯೇ ತುಂಬ ವಿಭಿನ್ನವಾಗಿರುತ್ತದೆ. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರಕ್ಕಿದೆ ಎನ್ನೋದನ್ನು ಬಿಟ್ಟರೆ ಉಳಿದ ತಾರಾಗಣ ಮತ್ತು ತಂತ್ರಜ್ಞರ ಬಗ್ಗೆ ಹರ್ಷ ಯಾವ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ.

Comments are closed.