ಮನೋರಂಜನೆ

ಕನ್ನಡದ ‘ಶ್ರೀಮನ್ನಾರಾಯಣ’ನ ತಡೆದ ಮರಾಠಿಗರಿಗೆ ‘ತಾನಾಜಿ’ ತಡೆದು ಪ್ರತ್ಯುತ್ತರ

Pinterest LinkedIn Tumblr


ಗಡಿ ವಿವಾದಕ್ಕೆ ಸಂಬಂಧಿಸಿದಂತೆ ‘ಅವನೇ ಶ್ರೀಮನ್ನಾರಾಯಣ’ ಚಲನಚಿತ್ರ ಮಹಾರಾಷ್ಟ್ರದಲ್ಲಿ ಪ್ರದರ್ಶನಕ್ಕೆ ತಡೆ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಮರಾಠಿ ಇತಿಹಾಸ ಆಧಾರಿತ ಹಿಂದಿಯ ತಾನಾಜಿ ಚಿತ್ರ ಪ್ರದರ್ಶನಕ್ಕೆ ಕರ್ನಾಟಕ ನವನಿರ್ಮಾಣ ಸೇನೆ ತಡೆದು ಪ್ರತಿಭಟಿಸಿತು.

ಇತ್ತೀಚೆಗೆ ಕನ್ನಡದ ಚಿತ್ರ ಅವನೇ ಶ್ರೀಮನ್ನಾರಾಯಣ ಚಲನಚಿತ್ರ ಬಿಡುಗಡೆಯಾಗಿದ್ದಾಗ ಶಿವಸೇನೆ ಪಕ್ಷದ ಕಾರ್ಯಕರ್ತರು ಕೋಲ್ಹಾಪುರ ಜತ್ತ ಗಡಹಿಂಗ್ಲಜ್‌ಗಳಲ್ಲಿ ಪ್ರದರ್ಶನಕ್ಕೆ ತಡೆದು, ಕಳೆದ ವಾರ ಕನ್ನಡಿಗರ ಸ್ವಾಭಿಮಾನಿ ಕೆರಳಿಸುವ ಕೆಲಸ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸೇನೆ ಕಾರ್ಯಕರ್ತರು ಶೆಟ್ಟಿ ಚಲನಚಿತ್ರ ಮಂದಿರದಲ್ಲಿ ತಾನಾಜಿ ಚಲನಚಿತ್ರ ಪ್ರದರ್ಶನ ತಡೆಹಿಡಿದು ಪ್ರತಿಭಟನೆ ನಡೆಸಿದರು.

ರಾಜ್ಯದ ಅನ್ನ, ನೀರು ಕುಡಿದು ಇಲ್ಲಿಯ ಎಲ್ಲ ಸವಲತ್ತುಗಳನ್ನು ಪಡೆದು ರಾಜ್ಯಕ್ಕೆ ದ್ರೋಹ ಬಗೆಹರಿಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಅದನ್ನು ಬೆಂಬಲಿಸುತ್ತಿರುವ ಶಿವಸೇನೆಯನ್ನು ಬೇರು ಸಹಿತ ರಾಜ್ಯದಿಂದ ಕಿತ್ತು ಹಾಕಬೇಕೆಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ರವಿ ದೇಗಾಂವ್‌, ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ ಪಾಟೀಲ್‌ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

ತಾಜಾಜಿ ಸಿನಿಮಾ ಕುರಿತು
ಮರಾಠರ ವೀರ ನಾಯಕ ತಾನಾಜಿ ಮಾಲುಸಾರೆಯ ಶೌರ್ಯ ಮತ್ತು ಆತನ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲಲಿರುವ ಈ ಸಿನಿಮಾವನ್ನು ಸುಮಾರು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಅಜಯ್‌ ದೇವಗನ್‌ ನಟನೆಯ ಐತಿಹಾಸಿಕ ಸಿನಿಮಾ ತಾನಾಜಿ: ದ ಅನ್‌ಸಂಗ್‌ ವಾರಿಯರ್‌ನಲ್ಲಿ ನಟಿ ಕಾಜೊಲ್‌ ತಾನಾಜಿ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ತಾನಾಜಿ ಪಾತ್ರದಲ್ಲಿ ಅಜಯ್‌ ದೇವಗನ್‌ ನಟಿಸಿದ್ದು ಇವರಿಬ್ಬರು ಬಹುವರ್ಷಗಳ ನಂತರ ಮತ್ತೆ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ಸಿನಿಮಾ ಇದು.

Comments are closed.