ಮನೋರಂಜನೆ

ಸಾರಾಗೆ ದಿಢೀರ್ ಮುತ್ತು ನೀಡಲು ಮುಂದಾದ ಅಭಿಮಾನಿ…!

Pinterest LinkedIn Tumblr


ಮುಂಬೈ: ಬಾಲಿವುಡ್ ಚೆಲುವೆ, ನಟಿ ಸಾರಾ ಅಲಿ ಖಾನ್ ಬಳಿ ದಿಢೀರನೆ ಬಂದ ಅಭಿಮಾನಿಯೊಬ್ಬ ಆಕೆಯ ಕೈಗೆ ಮುತ್ತುಕೊಡಲು ಪ್ರಯತ್ನಿಸಿದಾಗ ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ.

ಪ್ರತಿದಿನ ಜಿಮ್ ಗೆ ಹೋಗುವ ಸಾರಾ ಅಭಿಮಾನಿಗಳಿಗೆ ವಿಶ್ ಮಾಡುವುದು ಪದ್ಧತಿಯಾಗಿತ್ತು. ಶುಕ್ರವಾರ ಜಿಮ್ ಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ಅಭಿಮಾನಿಯೊಬ್ಬ ಸಾರಾ ಬಳಿ ಕೈಯನ್ನು ನೀಡುವಂತೆ ಹೇಳಿ ಮುತ್ತು ಕೊಡಲು ಮುಂದಾಗಿದ್ದ ಎಂದು ವರದಿ ತಿಳಿಸಿದೆ.

ಸಾರಾ ಕೈಕುಲುಕುತ್ತಿದ್ದಂತೆಯೇ ಅಭಿಮಾನಿ ಮುತ್ತು ಕೊಡಲು ಮುಂದಾಗಿದ್ದ. ಕೂಡಲೇ ಸಾರಾ ಕೈಯನ್ನು ಹಿಂದಕ್ಕೆ ಎಳೆದುಕೊಂಡಿದ್ದು, ಇದನ್ನು ಗಮನಿಸಿದ ಬಾಡಿಗಾರ್ಡ್ ಆ ವ್ಯಕ್ತಿಯನ್ನು ಹಿಂದೆ ತಳ್ಳಿರುವುದು ವಿಡಿಯೋದಲ್ಲಿಯೂ ದಾಖಲಾಗಿದೆ.

Comments are closed.