ಮನೋರಂಜನೆ

ಕಿಸ್ಸಿಂಗ್ ಸೀನ್‌ಗಳ ಅವಕಾಶ ನನಗೆ ಸಿಗಲಿಲ್ಲ; ಅನಿಲ್ ಕಪೂರ್

Pinterest LinkedIn Tumblr


ಹುಣಸೆ ಮರ ಮುಪ್ಪಾದರೆ ಹಣ್ಣು ಮುಪ್ಪೆ ಎಂಬ ಗಾದೆ ಮಾತಿದೆ. ಬಾಲಿವುಡ್ ನಟ ಅನಿಲ್ ಕಪೂರ್ ಈ ಗಾದೆಯನ್ನು ಮತ್ತೊಮ್ಮೆ ನೆನಪಿಸಿದ್ದಾರೆ. ಅರುವತ್ತು ವರ್ಷ ವಯಸ್ಸಲ್ಲೂ ಕಿಸ್ಸಿಂಗ್ ಸೀನ್‌ಗಾಗಿ ಸಾಕಷ್ಟು ತಾಪತ್ರಯಪಡುತ್ತಿದ್ದಾರೆ.

ಅನಿಲ್ ಕಪೂರ್ ಅಭಿನಯಿಸಿರುವ ಸಿನಿಮಾ ‘ಮಲಂಗ್’. ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ ಜೋಡಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಆದಿತ್ಯ ಹಾಗೂ ದಿಶಾ ನಡುವಿನ ಗಾಢವಾದ ಪ್ರೀತಿಯನ್ನು ತೋರಿಸಲು ಇದರಲ್ಲಿ ಸಿಕ್ಕಾಪಟ್ಟೆ ಕಿಸ್ಸಿಂಗ್ ಸೀನ್‌ಗಳನ್ನು ತೋರಿಸಲಾಗಿದೆ.

ಈ ಬಗ್ಗೆ ಪತ್ರಕರ್ತರೊಬ್ಬರು ಅನಿಲ್ ಕಪೂರ್ ಅವರನ್ನು ಪ್ರಶ್ನಿಸಿದರು. “ನಿಮ್ಮೊಂದಿಗೆ ನಟಿಸಿರುವ ಆದಿತ್ಯ, ದಿಶಾ ನಡುವೆ ಸಾಕಷ್ಟು ಕಿಸ್ಸಿಂಗ್ ಸೀನ್ಸ್ ಇವೆ. ನಿಮಗೆ ಆ ಚಾನ್ಸ್ ಸಿಗಲಿಲ್ಲ ಎಂಬ ಬೇಸರ ಕಾಡುತ್ತಿದೆಯೇ?” ಎಂದು ಕೇಳಿದರು.

ಅನಿಲ್ ಕಪೂರ್ ಈ ಪ್ರಶ್ನೆಗೆ ಉತ್ತರಿಸುತ್ತಾ, “ಮನೆಯಲ್ಲಿ ಮಕ್ಕಳು, ಪತ್ನಿ ಇದ್ದಾರೆ. ಈ ಪ್ರಶ್ನೆಗೆ ಉತ್ತರಿಸಿ ನಾನು ಮನೆಗೆ ಹೋದ ಕೂಡಲೆ ಅವರ ಕೈಲಿ ಒದೆ ತಿನ್ನಬೇಕು ಎಂದು ಬಯಸುತ್ತಿದ್ದೀರಾ? ನಿಜ ಹೇಳಬೇಕು ಎಂದರೆ ನನಗೆ ಕಿಸ್ಸಿಂಗ್ ಸೀನ್ ಸನ್ನಿವೇಶಗಳಲ್ಲಿ ನಟಿಸುವ ಅವಕಾಶ ಸಿಗದೆ ಇರಲು ಬೇಸರವಿದೆ. ಸಿನಿಮಾದಲ್ಲಿ ಆದಿತ್ಯ, ದಿಶಾ ಬೈಕ್ ರೈಡ್ಸ್‌ನೊಂದಿಗೆ ತುಂಬಾ ಎಂಜಾಯ್ ಮಾಡುತ್ತಾರೆ. ನಾನೂ ಸಹ ಯುವಕನಾಗಿದ್ದರೆ ಅವರಂತೆ ಎಂಜಾಯ್ ಮಾಡಬಹುದಿತ್ತು” ಎಂದಿದ್ದಾರೆ.

ಈ ಚಿತ್ರದಲ್ಲಿ ಅನಿಲ್ ಕಪೂರ್ ಪೊಲೀಸ್ ಆಗಿ ವಿಲನ್ ಪಾತ್ರದಲ್ಲಿ ಕಾಣಿಸುತ್ತಾರೆ. ಆಷಿಕಿ 2, ಏಕ್ ವಿಲನ್‌ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಮೋಹಿತ್ ಸೂರಿ ನಿರ್ದೇಶನದ ಸಿನಿಮಾ ಇದು. ಫೆಬ್ರವರಿ 7ರಂದು ಈ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.

ಇನ್ನು ಈ ಸಿನಿಮಾದಲ್ಲಿ ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ ಅಂಡರ್ ವಾಟರ್ ಕಿಸ್ಸಿಂಗ್ ಸೀನ್ ಹೈಲೈಟ್ ಆಗಿದೆ. ಈ ಸನ್ನಿವೇಶಕ್ಕಾಗಿ ಹೀರೋ ಹಿರೋಯಿನ್‍‌ಗೆ ಎರಡು ದಿನಗಳ ಕಾಲ ವಿಶೇಷ ತರಬೇತಿ ನೀಡಲಾಗಿತ್ತು. ಸರಿಸುಮಾರು ಒಂದು ನಿಮಿಷ ಕಾಲಾವಧಿಯ ಈ ಸೀನ್‌ನಲ್ಲಿ ನಟಿಸಲು ಹೀರೋ ಹೀರೋಯಿನ್‌ಗೆ ವಿಶೇಷ ತರಬೇತಿ ನೀಡಲಾಗಿತ್ತು. ಅಷ್ಟು ಹೊತ್ತು ನೀರಿನಲ್ಲಿ ನಟಿಸಲು ಅವರ ಲಂಗ್ ಕೆಪಾಸಿಟಿ ಹೆಚ್ಚಿಸಲು ಈ ಟ್ರೇನಿಂಗ್ ನೀಡಲಾಗಿತು. ಸಿಂಗಲ್ ಶಾಟ್‌ನಲ್ಲೇ ಈ ಚುಂಬನ ಸನ್ನಿವೇಶ ಸೆರೆಹಿಡಿಯಲಾಯಿತಂತೆ.

Comments are closed.