ಅಂತರಾಷ್ಟ್ರೀಯ

ಮಗು ಹೊಂದಲು ವೀರ್ಯ ದಾನಿಗಳನ್ನು ಎದುರುನೋಡುತ್ತಿರುವ ಗಾಯಕಿ

Pinterest LinkedIn Tumblr


ಬ್ರಿಟನ್‌ನ ಖ್ಯಾತ ಪಾಪ್‌ ಗಾಯಕಿ ಮತ್ತು ಟಿವಿ ಸಿಲೆಬ್ರಿಟಿ ಚೆರ್ಲಿ ಆ್ಯನ್‌ ಟ್ವೀಡಿಯವರು ಇನ್ನಷ್ಟು ಮಕ್ಕಳನ್ನು ಹೊಂದಲು ವೀರ್ಯ ದಾನಿಗಳನ್ನು ಎದುರು ನೋಡುತ್ತಿದ್ದಾರೆ. ಅದರಲ್ಲೂ ಬ್ರಿಟನ್‌ನಿಂದ ಹೊರತಾದ ದೇಶಗಳ ಸ್ಪಮ್‌ರ್‍ ಡೋನರ್‌ಗಳಿಂದ ಮಕ್ಕಳನ್ನು ಪಡೆಯಲು ಅವರು ಬಯಸುತ್ತಿದ್ದಾರೆ.

ತಮ್ಮ ಮಾಜಿ ಸಂಗಾತಿ ಲಿಯಾಮ್‌ ಪಯ್ನೆ ಅವರೊಂದಿಗೆ ಈಗಾಗಲೇ ಒಂದು ಗಂಡು ಮಗುವನ್ನು ಹೊಂದಿರುವ ಚೆರ್ಲಿಗೆ ಈಗ ಒಂದಕ್ಕಿಂತ ಹೆಚ್ಚು ಮಗು ಬೇಕೆನಿಸಿದೆಯಂತೆ. ಆದರೆ ಇದಕ್ಕಾಗಿ ಸಂಗಾತಿಯನ್ನು ಹುಡುಕಲು ಸಿದ್ಧರಿರದ ಅವರು ವೀರ್ಯಾಣು ದಾನಿಗಳಿಗೆ ಆದ್ಯತೆ ನೀಡಿದ್ದಾರೆ. ನಾನು 20ರ ಹರೆಯದಲ್ಲಿರುತ್ತಿದ್ದರೆ ಇನ್ನಷ್ಟು ಕಾದು ಮಕ್ಕಳನ್ನು ಹೊಂದುವ ಬೇರೆ ಬೇರೆ ಆಪ್ಷನ್‌ಗಳನ್ನು ಅಥವಾ ನನಗೆ ಸರಿಯೆನಿಸಿದ ಬೇರೆ ವ್ಯಕ್ತಿಗಳನ್ನು ನೋಡುತ್ತಿದ್ದೆ. ಆದರೆ ಈಗ ನನಗೆ 36 ವರ್ಷ.

ಈ ಪ್ರಾಯದಲ್ಲಿಆರೋಗ್ಯದಲ್ಲಿ ಏರಿಳಿತಗಳಾಗುವ ಸಾಧ್ಯತೆ ಇರುವ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇನೆ. ಅಲ್ಲದೆ ನನಗೆ ನಮ್ಮ ದೇಶದ ಮತ್ತು ನಾನಿರುವ ನಗರದ ಸ್ಪಮ್‌ರ್‍ ಡೋನರ್‌ಗಳು ಬೇಡ. ಯಾಕೆಂದರೆ ನಾಳೆ ಇಲ್ಲಿನವರು ಯಾರಾದರೂ ಬಂದು ಇದು ನನ್ನ ಮಗು ಎಂದು ಹೇಳುವುದು ನನಗಿಷ್ಟವಿಲ್ಲ. ಆದ್ದರಿಂದ ವಿದೇಶದ ದಾನಿಗಳನ್ನು ನೋಡುತ್ತಿದ್ದೇನೆ ಎಂದು ಚೆರ್ಲಿ ವಿವರಿಸಿದ್ದಾರೆ.

Comments are closed.