ಮನೋರಂಜನೆ

4 ಕೋಟಿ ರೂಪಾಯಿ ಮಾನನಷ್ಟ ಭರಿಸಲು ನಟಿ ಸಂಜನಾಗೆ ಲೀಗಲ್ ನೋಟಿಸ್

Pinterest LinkedIn Tumblr

ಗಂಡ ಹೆಂಡತಿ ಖ್ಯಾತಿಯ ನಟಿ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ನಡುವಿನ ಜಟಾಪಟಿ ಮುಂದುವರಿದಿದ್ದು, ಸಂಜನಾಗೆ ಲೀಗಲ್ ನೋಟಿಸ್ ನೀಡಲಾಗಿದೆ

ನಿರ್ಮಾಪಕಿ ವಂದನಾ ಅವರು ವಕೀಲ ಬ್ರಿಜೇಶ್ ಕಾಳಪ್ಪ ಮೂಲಕ ಲೀಗಲ್ ನೋಟಿಸ್ ರವಾನಿಸಿದ್ದು, 4 ಕೋಟಿ ರೂಪಾಯಿ ಮಾನನಷ್ಟ ಭರಿಸಲು ತಾಕೀತು ಮಾಡಿದ್ದಾರೆ ಹಾಗೂ ಡಿ 24ರಂದು ಪಂಚತಾರಾ ಹೋಟೆಲ್‍ನ ಪಾರ್ಟಿಯಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ

ಇದಲ್ಲದೆ ಸಂಜನಾ ಮಾಡಿದ ಆರೋಪಗಳಿಗೆ ವಂದನಾ ಉತ್ತರನೀಡಿದ್ದು 8 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿ ಸಂಜನಾ ಆರೋಪಗಳಿಗೆಲ್ಲ ಪ್ರತ್ಯುತ್ತರವನ್ನು ನೀಡಿದ್ದಾರೆ.

ಘಟನೆ ವಿವರ….
ಗಂಡ-ಹೆಂಡತಿ ಚಿತ್ರದ ಮೂಲಕ ಹಲ್ ಚಲ್ ಸೃಷ್ಠಿಸಿದ್ದ ನಟಿ ಸಂಜನಾ ಗಲ್ರಾನಿ ಅವರು ಪಾರ್ಟಿ ಗುಂಗಲ್ಲಿ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮೇಲೆ ಹಲ್ಲೆ ನಡೆಸಿದ್ದರು. ಬೆಂಗಳೂರಿನ ಖಾಸಗಿ ಪಬ್ ವೊಂದರಲ್ಲಿ ಡಿಸೆಂಬರ್ 24ರಂದು ಒಂದೇ ಟೇಬಲ್ ನಲ್ಲಿ ಕುಳಿತಿದ್ದ ಸಂಜನಾ ಹಾಗೂ ವಂದನಾ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಗ ಮಾತಿನ ಚಕಮಿಕಿ ವಿಕೋಪಕ್ಕೆ ತಿರುಗಿದಾಗ ಸಂಜನಾ ಅವರು ವಿಸ್ಕಿ ಗ್ಲಾಸ್ ತೆಗೆದುಕೊಂಡು ವಂದನಾ ಮೂಗಿಗೆ ಹೊಡೆದಿದ್ದರು. ಈ ಸಂಬಂಧ ವಂದನಾ ನಟಿ ಸಂಜನಾ ವಿರುದ್ಧ ಕ್ರಮ ತೆಗೆದುಕೊಳ್ಲಬೇಕೆಂದು ಆಗ್ರಹಿಸಿ ಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಆದರೆ ಕಡೆಗೆ ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿದಿತ್ತು.

Comments are closed.