ಮನೋರಂಜನೆ

ಜನವರಿ 1ರಂದು ಹೊಸ ಸಿನಿಮಾ ಘೋಷಿಸದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ ಶಾರುಖ್ ಖಾನ್ ಅಭಿಮಾನಿ

Pinterest LinkedIn Tumblr

ಬಾಲಿವುಡ್​ ಸ್ಟಾರ್​ ಶಾರುಖ್​ ಖಾನ್​ ನಟನೆಯ ‘ಜೀರೋ’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತ್ತು. ಶಾರುಖ್​ ಹೀರೋಯಿಸಂ ಬಿಟ್ಟು ಭಿನ್ನ ಅವತಾರ ತಾಳಿದ್ದು ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ. ‘ಜೀರೋ’ ತೆರೆಕಂಡು ವರ್ಷವಾದರೂ ಶಾರುಖ್​ ಮುಂದಿನ ಸಿನಿಮಾ ಘೋಷಿಸಿಲ್ಲ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಚ್ಚರಿಯ ವಿಚಾರ ಎಂದರೆ, ಮುಂದಿನ ಸಿನಿಮಾ ಘೋಷಿಸದ ಕಾರಣ ಶಾರುಖ್​ ಅಭಿಮಾನಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ!

2013ರಲ್ಲಿ ತೆರೆಕಂಡ ‘ಚೆನ್ನೈ ಎಕ್ಸ್​​ಪ್ರೆಸ್​’ ಚಿತ್ರವೇ ಕೊನೆ. ನಂತರ ಶಾರುಖ್​ ತಮ್ಮ ಮೂಲ ಚಾರ್ಮ್​ ಕಳೆದುಕೊಳ್ಳಲು ಆರಂಭಿಸಿದ್ದರು. ಸೋಲು ಅವರ ಬೆನ್ನು ಬಿದ್ದಿತ್ತು. ‘ಹ್ಯಾಪಿ ನ್ಯೂ ಇಯರ್​’ ಚಿತ್ರ ಕಮಾಯಿ ಮಾಡಿತ್ತಾದರೂ, ವಿಮರ್ಷೆಯಲ್ಲಿ ಸೋತಿತ್ತು. ಇನ್ನು, ‘ಡಿಯರ್​ ಜಿಂದಗಿ ಚಿತ್ರವನ್ನು ಜನ ಮೆಚ್ಚಿಕೊಂಡರಾದರೂ ಅದರಲ್ಲಿ ಹೈಲೈಟ್​ ಆಗಿದ್ದು, ನಟಿ ಆಲಿಯಾ ಭಟ್​. ಇನ್ನು, ಶಾರುಖ್​ ಅಭಿನಯದ ‘ಫ್ಯಾನ್​’ ಚಿತ್ರವಂತೂ ಹೇಳ ಹೆಸರಿಲ್ಲದೆ ನೆಲಕಚ್ಚಿತ್ತು. ‘ರಾಯೀಸ್’, ‘ಜಬ್​ ಹ್ಯಾರಿ ಮೆಟ್ ​ಸೇಜಲ್​’ ಸಾಮಾನ್ಯ ಸಿನಿಮಾ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡಿತು.

ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ ‘ಜೀರೋ’ ಚಿತ್ರದ ಮೂಲಕ ಶಾರುಖ್​ಗೆ ಮತ್ತೆ ಸೋಲಾಗಿತ್ತು. ಈ ಮಧ್ಯೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ಶಾರುಖ್​ಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಹೀಗಾಗಿ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ನವೆಂಬರ್​ 2 ಶಾರುಖ್​ ಜನ್ಮದಿನ. ಅಂದು ಅವರ ಮುಂದಿನ ಸಿನಿಮಾ ಕುರಿತು ಘೋಷಣೆ ಆಗಲಿದೆ ಎನ್ನಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಘೋಷಣೆ ಆಗಿಲ್ಲ. ಹೀಗಾಗಿ #WeWantAnnouncementSRK ಎನ್ನುವ ಹ್ಯಾಶ್​ಟ್ಯಾಗ್​ ಒಂದಿಗೆ ಅಭಿಮಾನಿಗಳು ಟ್ವೀಟ್​ ಮಾಡುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಯೋರ್ವ ‘ಶಾರುಖ್​ ಖಾನ್​ ಜನವರಿ 1ರಂದು ಹೊಸ ಸಿನಿಮಾ ಘೋಷಿಸಲಿ. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.

ಅಟ್ಲಿ ಈಗಾಗಲೇ, ‘ರಾಜ ರಾಣಿ’, ‘ತೇರಿ’, ‘ಮರ್ಸೆಲ್​’, ‘ಬಿಗಿಲ್’ ನಂಥ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಈಗ ಅಟ್ಲಿ ವಿಶೇಷ ಕಥೆಯೊಂದನ್ನು ಶಾರುಖ್​ಗಾಗಿ ಸಿದ್ಧಪಡಿಸಿದ್ದಾರೆ. ಈ ಕಥೆಯನ್ನು ಶಾರುಖ್​ ಕೇಳಿ ಇಷ್ಟಪಟ್ಟಿದ್ದಾರಂತೆ. ಶಾರುಖ್​ಗೆ ಕಂಬ್ಯಾಕ್​ ಮಾಡಲು ಈ ಸಿನಿಮಾ ಹೇಳಿ ಮಾಡಿಸಿದಂತಿರಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಿಲ್ಲ ಎನ್ನುವುದು ಫ್ಯಾನ್ಸ್​ಗೆ ಬೇಸರ ತರಿಸಿದೆ.

Comments are closed.