ಮನೋರಂಜನೆ

‘ಅವನೇ ಶ್ರೀಮನ್ನಾರಾಯಣ’ನಿಗೂ ಕಾಡಿದ ಪೈರಸಿ ಭೂತ

Pinterest LinkedIn Tumblr


ಬೆಂಗಳೂರು: ಬರೋಬ್ಬರಿ ಮೂರು ವರ್ಷದ ಕಾಯುವಿಕೆಯ ನಂತರ ರಕ್ಷಿತ್ ಶೆಟ್ಟಿ ಅಭಿನಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ತೆರೆಗಪ್ಪಳಿಸಿದೆ. ಶುಕ್ರವಾರ ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿರುವ ಅವನೇ ಶ್ರೀಮನ್ನಾರಾಯಣ’ ಚಿತ್ರ ವಿಮರ್ಷಕರ ಬಳಗದಲ್ಲೂ ಉತ್ತಮ ಅಂಕ ಪಡೆದಿದೆ. ಅಷ್ಟರಲ್ಲೇ ಪೈರಸಿ ಭೂತ ಕಾಡಿದ್ದು, ಆನ್ ಲೈನ್ ನಲ್ಲಿ ಸಂಪೂರ್ಣ ಚಿತ್ರ ಲೀಕ್ ಆಗಿದೆ.

ಬಹುನಿರೀಕ್ಷಿತ ಕನ್ನಡ ಚಿತ್ರ ಬಿಡಿಗಡೆಯಾಗಿ ಗಂಟೆ ಕಳೆಯುವಷ್ಟರಲ್ಲಿ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ಚಿತ್ರಗಳನ್ನು ಕದ್ದು ಬಿಡುಗಡೆ ಮಾಡುವ ಕುಖ್ಯಾತಿ ಹೊಂದಿರುವ ತಮಿಳ್ ರಾಕರ್ಸ್ ವೆಬ್ ಸೈಟ್ ಈ ಚಿತ್ರವನ್ನೂ ಲೀಕ್ ಮಾಡಿದೆ.

ಮೊದಲ ದಿನವೇ ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿರುವುದು ಚಿತ್ರ ತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ.

ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಸುಮಾರು ಮೂರು ವರ್ಷದ ಗ್ಯಾಪ್ ಪಡೆದಿದ್ದ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ’ ಚಿತ್ರ ಮೂಲಕ ಬಂದಿದ್ದಾರೆ. ಶಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಚಿನ್ ರವಿ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನ್ ಬಂಡವಾಳ ಹೂಡಿದ್ದಾರೆ.

Comments are closed.