ಮನೋರಂಜನೆ

ತನ್ನ ಮನೆಯ ಅಡುಗೆ ಕೋಣೆಯಲ್ಲಿ ಪ್ರಖ್ಯಾತ ಕಿರುತೆರೆ ನಟಿ ಶವವಾಗಿ ಪತ್ತೆ

Pinterest LinkedIn Tumblr


ತಿರುವನಂತಪುರಂ: ಪ್ರಖ್ಯಾತ ಕಿರುತೆರೆ ನಟಿ, ರೂಪದರ್ಶಿ ಜಗೀ ಜಾನ್ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕೇರಳದ ಕುರವಕೋಣಂನಲ್ಲಿರುವ ಮನೆಯಲ್ಲಿ ನಟಿ ಜಗೀ ಜಾನ್ ಮೃತದೇಹ ಪತ್ತೆಯಾಗಿದೆ. ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಜಗೀ ಜಾನ್ ಗೆಳತಿ ಮನೆಗೆ ಭೇಟಿ ನೀಡಿದಾಗ ಘಟನೆ ಅರಿವಿಗೆ ಬಂದಿದ್ದು ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ.

ಜಗೀ ಜಾನ್ ದೇಹದ ಮೇಲೆ ಯಾವುದೇ ಹಲ್ಲೆ ಗುರುತುಗಳಿಲ್ಲ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದರು.

ಜಗೀ ಜಾನ್ ಅವರು ‘ಜಗ್ಗೀ ಕುಕ್ ಬುಕ್’ ಎಂಬ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ವ್ಯಕ್ತಿತ್ವ ಪ್ರದರ್ಶನ ಮತ್ತು ಸೌಂದರ್ಯ ಕಾರ್ಯಕ್ರಮದ ತೀರ್ಪುಗಾರರಾಗಿಯೂ ಪ್ರಸಿದ್ದರಾಗಿದ್ದರು.

Comments are closed.