ಮನೋರಂಜನೆ

ಕನ್ನಡ ಬಿಗ್ ಬಾಸ್ ನಲ್ಲಿ ದೀಪಿಕಾ ಹಿಂದೆ ಬಿದ್ದಿರುವ ಇಬ್ಬರು ಸ್ಪರ್ಧಿಗಳು

Pinterest LinkedIn Tumblr


ಎಪ್ಪತ್ತೆರಡನೇ ದಿನ ಬಿಗ್ ಬಾಸ್ ಹೊಸ ಫರ್ಮಾನು ಹೊರಡಿಸಿದರು. ಅದರ ಪ್ರಕಾರ, ಕುರಿ ಪ್ರತಾಪ್ ಹಾಗೂ ಹರೀಶ್ ರಾಜ್ ಅಡುಗೆ ಮಾಡಬೇಕು. ಆದರೆ ಹರೀಶ್ ರಾಜ್ ಅವರು ಯಾವುದೇ ಕಾರಣಕ್ಕೂ ಈರುಳ್ಳಿ ಬಾತ್ ಮಾಡುವಂತಿಲ್ಲ ಎಂದೂ ಆದೇಶಿಸಿದರು. ಅದರಂತೆ ಅಡುಗೆ ಮನೆಯಲ್ಲಿ ಕುರಿ ಮತ್ತು ಹರೀಶ್ ರಾಜ್ ಅವರ ನಳಪಾಕ ಶುರುವಾಗಿದೆ. ಈ ಜೋಡಿಗೆ ಯಾರೂ ಸಹಾಯ ಮಾಡುವಂತಿರಲಿಲ್ಲ.

ಸಾಂಬಾರ್ ಪ್ಯಾಕೆಟ್ ಮೇಲೆ ಬರೆದಂತೆ ಸಾಂಬಾರ್ ತಯಾರಿಸಲು ಸಿದ್ಧರಾದರು. ಒಟ್ಟಾರೆ ಇವರ ಅಡುಗೆಗಾಗಿ ಬಿಗ್ ಬಾಸ್ ಮನೆಯ ಸದಸ್ಯರು ಕಾಯುವಂತಾಯಿತು. ಬೆಳ್ಳುಳ್ಳಿ, ಈರುಳಿ, ಕೊತ್ತಂಬರಿ ಸೊಪ್ಪನ್ನು ಹೆಚ್ಚುತ್ತಾ ಏನೇನೇ ಮಾಡುತ್ತಿದ್ದರು. ಇವರು ಏನು ಮಾಡುತ್ತರೋ ಏನೋ ಎಂದು ಎಲ್ಲರೂ ಕಾಯುವಂತಾಯಿತು

ಈ ನಡುವೆ ಕ್ಯಾಪ್ಟನ್ ಆಯ್ಕೆಗಾಗಿ ಬಿಗ್ ಬಾಸ್ ಟಾಸ್ಕ್‌ ಒಂದನ್ನು ನೀಡಿದರು. ಆ ಚಟುವಟಿಕೆಯಲ್ಲಿ ಪ್ರಿಯಾಂಕಾ, ಕಿಶನ್, ಭೂಮಿ ಶೆಟ್ಟಿ ಹಾಗೂ ಹರೀಶ್ ರಾಜ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಿತು. ಈ ವಾರ ನಾನು ಕ್ಯಾಪ್ಟನ್ ಆಗಬೇಕೆಂದಿದ್ದೇನೆ, ಸ್ವಲ್ಪ ರೆಸ್ಟ್ ಬೇಕಾಗಿದೆ ಎಂದು ಪ್ರಿಯಾಂಕಾರಿಗೆ ಹರೀಶ್ ರಾಜ್ ಹೇಳಿದರೆ, ಇಲ್ಲ ನೀನೇ ಈ ಟಾಸ್ಕ್ ಬಿಟ್ಟುಬಿಡು ಈ ಸಲ ನಾನು ಕ್ಯಾಪ್ಟನ್ ಆಗಬೇಕೆಂದಿದ್ದೇನೆ ಎಂದರು. ಕೊನೆಗೆ ಹರೀಶ್ ರಾಜ್ ಈ ಟಾಸ್ಕ್ ಗೆದ್ದು ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಈ ವಾರದ ಕ್ಯಾಪ್ಟನ್ಸಿ ತಪ್ಪಿದ್ದರಿಂದ ಪ್ರಿಯಾಂಕಾ ಸ್ವಲ್ಪ ಬೇಸರಗೊಂಡಿದ್ದರು. ಹರೀಶ್ ರಾಜ್‌ಗೆ ಅಷ್ಟೆಲ್ಲಾ ವಯಸ್ಸಾಗಿತ್ತು ಆದರು ಬೇಗ ಸುಸ್ತಾಗುತ್ತಾರೆ ಅನ್ನಿಸಿತು. ಅದಕ್ಕಾಗಿ ಬಿಟ್ಟೆ ಎಂದರು. ಟಾಸ್ಕ್ ಬಿಟ್ಟುಬಿಡಿ ಎಂದು ನನ್ನನ್ನು ಪ್ರಿಯಾಂಕಾ ನೇರವಾಗಿ ಕೇಳಿದ್ದರಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಿ ಆಡಬೇಕಾಯಿತು ಎಂದಿದ್ದಾರೆ ಹರೀಶ್ ರಾಜ್.

ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಹಿಂದೆ ಇಬ್ಬರು ಸ್ಪರ್ಧಿಗಳು ಬಿದ್ದಿದ್ದಾರೆ. ಒಬ್ಬರು ಕಿಶನ್ ಹಾಗೂ ಇನ್ನೊಬ್ಬರು ಶೈನ್ ಶೆಟ್ಟಿ. ಇಬರಿಬ್ಬರೂ ಸಮಯ ಸಿಕ್ಕಾಗಲ್ಲೆಲ್ಲಾ ದೀಪಿಕಾ ದಾಸ್‌ರನ್ನು ತಬ್ಬಿಕೊಳ್ಳುವುದು, ಚುಂಬಿಸುವುದನ್ನು ಮಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಚಂದನಾ ಅತ್ತಿಗೆ ಎಂದು, ಶೈನ್ ಅಣ್ಣ ತುಂಬಾ ಲವ್ ಮಾಡುತ್ತಾರೆ ಎಂದು ರೇಗಿಸುವುದು ಎಲ್ಲವನ್ನೂ ಮಾಡುತ್ತಿದ್ದಾರೆ.

ಈ ವಾರ ನಾಮಿನೇಟ್ ಆದ ಸದಸ್ಯರು ಚೈತ್ರಾ ಕೋಟೂರ್, ಚಂದನ್ ಆಚಾರ್, ಶೈನ್ ಶೆಟ್ಟಿ, ವಾಸುಕಿ ವೈಭವ್ ಹಾಗೂ ಹರೀಶ್ ರಾಜ್. ಈ ವಾರ ಇಮ್ಯುನಿಟಿ ಪಡೆದ ಸದಸ್ಯರು ಕುರಿ ಪ್ರತಾಪ್ ಹಾಗೂ ದೀಪಿಕಾ ದಾಸ್. ಈ ಇಬ್ಬರ ಹೆಸರನ್ನು ಹೊರತುಪಡಿಸಿ ಒಬ್ಬರ ಹೆಸರನ್ನು ಸೂಚಿಸಿ ಕ್ಯಾಪ್ಟನ್ ಆಗಿರುವ ಹರೀಶ್ ರಾಜ್ ತಮ್ಮ ನಾಮಿನೇಷನ್ ವರ್ಗಾಯಿಸಬಹುದು ಎಂದಾಗ. ಅವರು ವರ್ಗಾಯಿಸಿದ್ದು ಭೂಮಿ ಶೆಟ್ಟಿಗೆ. ಹಾಗಾಗಿ ಈ ವಾರ ಐದು ಮಂದಿ ನಾಮಿನೇಟ್ ಆಗಿದ್ದಾರೆ.

ಏತನ್ಮಧ್ಯೆ ಲಗ್ಜುರಿ ಬಜೆಟ್ ಟಾಸ್ಕ್‌ಗೆ ಚಾಲನೆ ನೀಡಿದ್ದಾರೆ ಬಿಗ್ ಬಾಸ್. ಇದಕ್ಕಾಗಿ ಮನೆಯಲ್ಲಿ ಎರಡು ತಂಡಗಳು ರಚನೆಯಾಗಿವೆ. ಬೆಳ್ಳಿ ನಾಣ್ಯ ಪಡೆದಿದ್ದ ತಂಡವರು ಕಿಶನ್‌ರನ್ನು ನಾಯಕ ನಟನನ್ನಾಗಿ ಆಯ್ಕೆ ಮಾಡಿದರೆ, ಚಿನ್ನದ ನಾಣ್ಯ ಪಡೆದಿದ್ದ ತಂಡ ಶೈನ್‌ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಈ ಎರಡೂ ತಂಡಗಳ ನಡುವೆ ಲಗ್ಜುರಿ ಬಜೆಟ್‌ಗಾಗಿ ಟಾಸ್ಕ್ ನಡೆಯಲಿದೆ.

ಈ ವಾರ ಚೈತ್ರಾ ಕೋಟೂರ್ ನೀವು ಸೇಫ್ ಆದರೆ ಇನ್ನೂ ಮೂರು ವಾರ ಈಸಿಯಾಗಿ ಮುಂದೆ ಹೋಗುವಷ್ಟು ಸ್ಟ್ರಾಂಗ್ ಆಗ್ತೀರಾ ಎಂದು ಹೇಳಿದರು ಶೈನ್. ಫಿಜಿಕಲ್ ಟಾಸ್ಕ್‌ನಲ್ಲಿ ನೀನು ಸ್ವಲ್ಪ ವೀಕ್ ಇದ್ದೀಯಾ, ಅದನ್ನು ನಿಭಾಯಿಸಿಕೋ ಎಂದು ಹಿತಮಾತನ್ನು ಹೇಳಿದ್ದಾರೆ ಶೈನ್. ಇದಕ್ಕೆ ಚೈತ್ರಾ ಇಲ್ಲಾ ಈ ವಾರವೇ ಕೊನೆ ಎಂದಿದ್ದಾರೆ.

Comments are closed.