
ಚೆನ್ನೈನಲ್ಲಿ ನಡೆದ 66ನೇ ಫಿಲಂಫೇರ್ ಸೌತ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸೌತ್ ಸಿನಿದುನಿಯಾದ ತಾರ ದಂಡು ನೆರೆದಿತ್ತು. 2018ರಲ್ಲಿ ತೆರೆಕಂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳಿಗಾಗಿ ವಿವಿಧ ವಿಭಾಗಗಳಲ್ಲಿ ವಿಂಗಡಿಸಿ, ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಕನ್ನಡದ ಕೆಜಿಎಫ್ ಚಿತ್ರ ಅತ್ಯುತ್ತಮ ಚಿತ್ರವಾಗಿದ್ದು ರಾಕಿಂಗ್ ಸ್ಟಾರ್ ಯಶ್ ಅತ್ಯುತ್ತಮ ನಟನಾಗಿದ್ದಾರೆ. ಮಾನ್ವಿತಾ ಹರೀಶ್ ಗೆ ಟಗರು ಸಿನಿಮಾಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ರೆ , ಟಗರು ಚಿತ್ರಕ್ಕಾಗಿ ಡಾಲಿ ಧನಂಜಯ್ ಅತ್ಯುತ್ತಮ ಸಹ ಕಲಾವಿದ ಪ್ರಶಸ್ತಿ ಪಟ್ಟಕ್ಕೆ ಭಾಜನರಾಗಿದ್ದಾರೆ.
2018ರಲ್ಲಿ ತೆರೆಕಂಡ ಶೃತಿ ಹರಿಹರನ್ , ಸಂಚಾರಿ ವಿಜಯ್ ನಟನೆಯ ನಾತಿಚರಾಮಿ ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿದೆ. ವಿಮರ್ಶಕರ ಅತ್ಯುತ್ತಮ ನಟಿ ಶೃತಿ ಹರಿಹರನ್, ಅತ್ಯುತ್ತಮ ನಿರ್ದೇಶಕ ಮನ್ಸೂರೆ, ಅತ್ಯುತ್ತಮ ಸಹಾ ಕಲಾವಿದೆಯಾಗಿ ಶರಣ್ಯ ಹಾಗೂ ಅತ್ಯುತ್ತಮ ಹಿನ್ನಲೆ ಗಾಯಕಿಯಾಗಿ ಬಿಂದುಮಾಲಿನಿಗೆ ಪ್ರಶಸ್ತಿ ಒಲಿದಿದೆ. ಅಯೋಗ್ಯ ಸಿನಿಮಾಗಾಗಿ ನಟ ಸತೀಶ್ಗೆ ವಿಮರ್ಶಕರ ಅತ್ಯುತ್ತಮ ನಟನಾಗಿ ಕಪ್ಪು ಸುಂದರಿಗೆ ಮುತ್ತಿಟ್ಟಿದ್ದಾರೆ.
ಇನ್ನೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಚಿತ್ರದ ಸಂಗೀತ ನಿರ್ದೇಶಕಕ್ಕಾಗಿ ವಾಸುಕಿ ವೈಭವ್ ಅವರಿಗೆ ಪ್ರಶಸ್ತಿ ಬಂದಿದೆ. ಶಾಕುಂತಲೆ ಸಿಕ್ಕಳು ಹಾಡಿಗಾಗಿ ಸಚಿತ್ ಹೆಗ್ಡೆಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ಸಿಕ್ಕಿದ್ರೆ, ಹಸಿರು ರಿಬ್ಬನ್ ಚಿತ್ರದ ಸಕ್ಕರೆಯ ಪಾಕದಲ್ಲಿ ಸಾಹಿತ್ಯಕ್ಕಾಗಿ ಡಾ. ಹೆಚ್.ಎಸ್ ವೆಂಕಟೇಶ್ ಮೂರ್ತಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಸಿಕ್ಕಿದೆ.
ಭರಾಟೆ ಮತ್ತು ಕಿಸ್ ಖ್ಯಾತಿಯ ಬೆಡಗಿ ಶ್ರೀಲೀಲಾ ಕೆಜಿಎಫ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನೆರೆದವರನ್ನು ರಂಜಿಸಿದ್ರು. ಇನ್ನೂ ತೆಲುಗಿನ ರಂಗಸ್ಥಳ ಚಿತ್ರದ ನಟನೆಗಾಗಿ ರಾಮ್ಚರಣ್ ಮತ್ತು ತಮಿಳಿನ ವಡ ಚೆನ್ನೈ ಚಿತ್ರದ ನಟನೆಗೆ ಧನುಷ್ಗೆ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಒಟ್ಟಾರೆಯಾಗಿ 66ನೇ ಫಿಲಂಫೇರ್ ಸೌತ್ ಪ್ರಶಸ್ತಿ ಕಾರ್ಯಕ್ರಮ ಅದ್ದೂರಿಯಾಗಿ ನೇರವೇರಿತ್ತು.
Comments are closed.