ಮನೋರಂಜನೆ

ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ‘ಮಗಳು ಜಾನಕಿ’ ನಟಿ ಪೂಜಾ

Pinterest LinkedIn Tumblr


ಟಿಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಚಂಚಲಾ ಪಾತ್ರ ಪೋಷಿಸುತ್ತಿರುವ ನಟಿ ಪೂಜಾ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ರಂಜಿತ್ ಕೆಕುನ್ನಾಯ ಜೊತೆಗೆ ಬದುಕಿನ ಹೊಸ ಎಪಿಸೋಡ್ ಆರಂಭಿಸಿದ್ದಾರೆ.

ತನ್ನ ಅಮೋಘ ನಟನೆಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ ಪೂಜಾ. ಈ ಮದುವೆ ಗುರುಹಿರಿಯರು ನಿಶ್ಚಿಯಿಸಿದ ಮದುವೆ. ಇವರ ಮದುವೆ ಸಮಾರಂಭಕ್ಕೆ ಕಿರುತೆರೆಯ ಹಲವಾರು ಕಲಾವಿದರು ಆಗಮಿಸಿ ಶುಭ ಕೋರಿದ್ದಾರೆ.

ವಿಚಿತ್ರ ಎಂದರೆ ಮಗಳು ಜಾನಕಿ ಧಾರಾವಾಹಿಯಲ್ಲಿ ಚಂಚಲಾ ಪಾತ್ರಧಾರಿ ಪೂಜಾ ಮದುವೆ ಮುರಿದು ಬೀಳುತ್ತದೆ. ಚಂಚಲಾರನ್ನು ಕೈಹಿಡಿಯಬೇಕಿದ್ದ ಚಿರಂತನ್ ಜೈಲು ಸೇರಿದ್ದು ಧಾರಾವಾಹಿ ರೋಚಕವಾಗಿ ಸಾಗುತ್ತಿದೆ.

ಧಾರಾವಾಹಿಯಲ್ಲಿ ಪೂಜಾ ಮದುವೆ ಮುರಿದುಬಿದ್ದಕ್ಕೆ ಕಿರುತೆರೆ ವೀಕ್ಷಕರು ಬೇಸರಿಸಿಕೊಂಡಿದ್ದರು. ಆದರೆ ಈಗ ರಿಯಲ್ ಲೈಫ್‌ನಲ್ಲಿ ಮದುವೆಯಾಗಿದ್ದು ವೀಕ್ಷಕರು ಸಂತಸಪಟ್ಟಿದ್ದಾರೆ. ಸಂತೋಷ್ ಕೌಲಗಿ ಮತ್ತು ಗೀತಾ ಕೌಲಗಿ ದಂಪತಿಗಳ ಮಗಳು ಪೂಜಾ. ಇವರ ಮದುವೆ ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿದೆ.

“ಸದಾ ನಗುಮೊಗದಿಂದಿರುವ, ಸರಳ ಜೀವಿ, ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುವ ನಿಮ್ಮ ಮುಂದಿನ ಜೀವನ ಅತ್ಯಂತ ಸುಖಮಯವಾಗಿರಲಿ, ನೂರ್ಕಾಲ ಸಂತೋಷ ನೆಮ್ಮದಿಯಿಂದ ಬಾಳುವಂತಾಗಲಿ” ಎಂದು ಮಗಳು ಜಾನಕಿ ಫೇಸ್‍ಬುಕ್ ಬಳಗ ಶುಭ ಹಾರೈಸಿದೆ.

Comments are closed.