ಮನೋರಂಜನೆ

ತನ್ನ ಫಿಟ್‌ನೆಸ್ ರಹಸ್ಯ ಬಯಲು ಮಾಡಿದ ಪುನೀತ್ ರಾಜ್‌ಕುಮಾರ್

Pinterest LinkedIn Tumblr


ಪುನೀತ್‌ ರಾಜ್‌ಕುಮಾರ್‌ ತಮ್ಮ ಫಿಟ್ನೆಸ್‌ ಗುಟ್ಟನ್ನು ರಟ್ಟು ಮಾಡಿದ್ದಾರೆ. ದೇಹ ಹುರಿಗೊಳಿಸಿಕೊಳ್ಳಲು ಏನೆಲ್ಲಕಸರತ್ತು ಮಾಡುತ್ತಾರೆ ಎಂಬುದನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.

‘ಯುವರತ್ನ’ ಸಿನಿಮಾದ ಶೂಟಿಂಗ್‌ ಬಿಝಿಯಲ್ಲೂ ಮಾಡಿರುವ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿಅಪ್‌ಲೋಡ್‌ ಆಗಿದ್ದು, ವೈರಲ್‌ ಕೂಡ ಆಗಿದೆ. ಕ್ರಾಸ್‌ ಫಿಟ್ನೆಸ್‌ ಮತ್ತು ರೋಪ್‌ ಫಿಟ್ನೆಸ್‌ ಮಾಡಿರುವ ಈ ವಿಡಿಯೋ ಕುರಿತಾಗಿ ಪುನೀತ್‌ ಅವರ ಪರ್ಸನಲ್‌ ಟ್ರೇನರ್‌ ಶುಭಕರ್‌ ಶೆಟ್ಟಿ ಲವಲvಕೆ ಜತೆ ಮಾತನಾಡಿದ್ದಾರೆ.

‘ಪುನೀತ್‌ ಅವರು ಪ್ರತಿ ದಿನ ಮಿನಿಮಮ್‌ 10 ಕಿಮೀ ಓಡುತ್ತಾರೆ. ಸಮಯ ಸಿಕ್ಕಾಗ ಮಾರ್ಷಲ್‌ ಆರ್ಟ್‌್ಸ ಮಾಡುತ್ತಾರೆ. ಶೂಟಿಂಗ್‌ ಇರಲಿ ಬಿಡಲಿ ಒಂದು ಗಂಟೆ ಕಾಲ ವರ್ಕೌಟ್‌ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಸಂಜೆ ಹೊತ್ತು ಫ್ರೀ ಇದ್ದಾಗ ವಾಕಿಂಗ್‌ ಮಾಡುತ್ತಾರೆ. ಈಗ ಸೋಷಿಯಲ್‌ ಮೀಡಿಯಾದಲ್ಲಿಅಪ್‌ಲೋಡ್‌ ಮಾಡಿರುವ ವಿಡಿಯೋ ಎರಡ್ಮೂರು ದಿನದ ಹಿಂದೆ ಮಾಡಿರುವುದು’ಎನ್ನುತ್ತಾರೆ ಅವರು.

‘ರನ್ನಿಂಗ್‌ ಮಾಡಲು ಪಾರ್ಕ್ಗೆ ಹೋಗುತ್ತಾರೆ. ಮನೆಯಲ್ಲೇ ಇರುವ ಚಿಕ್ಕ ಜಿಮ್‌ನಲ್ಲಿಕ್ರಾಸ್‌ ಫಿಟ್‌ನೆಸ್‌ನಂತಹ ವ್ಯಾಯಾಮ ಮಾಡುತ್ತಾರೆ. ಬೇರೆ ರೀತಿಯ ವರ್ಕೌಟ್‌ಗಳಿಗೆ ಜಿಮ್‌ಗೆ ಹೋಗುತ್ತಾರೆ. ಸೈಕ್ಲಿಂಗ್‌ ಕೂಡಾ ಮಾಡುತ್ತಾರೆ’ಎನ್ನುವುದು ಶುಭಕರ್‌ ಮಾತು.

Comments are closed.