ಮನೋರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Pinterest LinkedIn Tumblr


ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಹುಕಾಲದ ಗೆಳತಿ ಪ್ರೇರಣಾರೊಂದಿಗೆ ಇಂದು (ರವಿವಾರ) ಮುಂಜಾನೆ ವೃಶ್ಚಿಕ ಶುಭ ಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಜೆ. ಪಿ ನಗರದ ಸಂಸ್ಕೃತ ಬೃಂದಾವನ ಕನ್ವೇಷನ್ ಹಾಲ್ ನಲ್ಲಿ ಬೆಳಗ್ಗೆ 7:15 ರಿಂದ 7:45ರ ಶುಭ ಸಮಯದಲ್ಲಿ ಗೌಡ ಸಂಪ್ರದಾಯದಂತೆ ನಡೆದ ವಿವಾಹ ಮಹೋತ್ಸವದಲ್ಲಿ ಪ್ರೇರಣಾರಿಗೆ ಮಾಂಗ್ಯಲ್ಯಧಾರಣೆ ಮಾಡಿದ್ದಾರೆ.

ಸ್ಯಾಂಡಲ್ ವುಡ್ ಗೆ ಅದ್ದೂರಿಯಾಗಿ ಎಂಟ್ರಿ ಕೊಟ್ಟು , ಬಹದ್ದೂರ್ , ಭರ್ಜರಿ , ಸಿನಿಮಾಗಳ ಮೂಲಕ ಸಿನಿಪ್ರಿಯರ ಮನಗೆದ್ದು , ಪೊಗರು ಮೂಲಕ ಹೊಸ ಭಾಷ್ಯ ಬರೆಯಲು ಮುಂದಾಗಿರುವ ನಟ ಧ್ರುವ ಸರ್ಜಾ ವಿವಾಹ ಸಂಪ್ರದಾಯಂತೆ ನೆರವೇರಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು.

ವಿವಾಹದ ಶುಭ ಸಂಧರ್ಭಕ್ಕೆ ಸ್ಯಾಂಡಲ್ ವುಡ್ ತಾರೆಯರು ಸೇರಿದಂತೆ ಗಣ್ಯಾತೀಗಣ್ಯರು ಆಗಮಿಸಿದ್ದರು.

Comments are closed.