ಮನೋರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಿಕ್‍ಟಾಕ್ ಖ್ಯಾತಿ ಪಡೆದಿರುವ ಜೋಡಿ

Pinterest LinkedIn Tumblr


ಬೆಂಗಳೂರು: ಟಿಕ್‍ಟಾಕ್ ಮೂಲಕ ಖ್ಯಾತಿ ಪಡೆದಿರುವ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಜೋಡಿಯ ಮದುವೆಯಲ್ಲಿ ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭಾಗವಹಿಸಿದ್ದು, ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.

ಟಿಕ್ ಟಾಕ್ ಮಾಡುವ ಮೂಲಕ ಅಲ್ಲು ರಘು ಮತ್ತು ಸುಷ್ಮಿತಾ ಶೇಷಗಿರಿ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿತ್ತು. ಈ ಜೋಡಿ ಗುರುವಾರ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವರ ರಘು, ಧ್ರುವ ಸರ್ಜಾ ಅವರ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟನನ್ನು ಮದುವೆಗೆ ಆಹ್ವಾನಿಸಿದ್ದರು. ಅಭಿಮಾನಿಯ ಆಹ್ವಾನವನ್ನು ಸ್ವೀಕರಿಸಿದ್ದ ಧ್ರುವ ಅವರು ವಿವಾಹ ಕಾರ್ಯಕ್ರಮಕ್ಕೆ ತೆರಳಿ ವಿಶ್ ಮಾಡಿದ್ದಾರೆ.

ರಘು ಮತ್ತು ಸುಷ್ಮಿತಾ ಸ್ನೇಹಿತರಾಗಿದ್ದರು. ನಂತರ ಡಬ್‍ಸ್ಮಾಶ್ ಮಾಡಲು ಶುರು ಮಾಡಿದರು. ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದವು. ಈ ಮೂಲಕ ಇವರಿಬ್ಬರಿಗೆ ಫಾಲೋವರ್ಸ್‍ಗಳ ಸಂಖ್ಯೆಗಳ ಕೂಡ ಹೆಚ್ಚಾಯಿತು. ಇದರಿಂದ ಈ ಜೋಡಿ ಖ್ಯಾತಿ ಪಡೆದುಕೊಂಡಿದೆ.

ರಘು ‘ಒಂದೊಪ್ಪತ್ತು’ ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ‘ಆರ್ಯಶಿವ’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ.

Comments are closed.