ಮನೋರಂಜನೆ

ಬಿಗ್‌ಬಾಸ್ ನಲ್ಲಿ ಧಮ್‌ ಎಳೆಯುತ್ತಾ ಪ್ರಿಯಾಂಕಾ ಮೇಲೆ ‘ಕುರಿ’ ಬೆಟ್ಟಿಂಗ್‌..!

Pinterest LinkedIn Tumblr


ಯಾರು ಉಳಿಯುತ್ತಾರೆ, ಯಾರು ಉಳಿಯಲ್ಲ ಅನ್ನೋ ಲೆಕ್ಕಾಚಾರಗಳು ನಡೀತಾನೇ ಇರುತ್ತೆ. ಬಿಗ್‌ಬಾಸ್‌ ಮನೆಯಲ್ಲಿ ಖುಲ್ಲಾಂಖುಲ್ಲಾ ಆಗಿ ನಡೆಯೋದು ತುಂಬಾ ರೇರ್‌. ಬಿಗ್‌ಬಾಸ್ ವೀಕ್ಷಕರು ಮಾತ್ರ ಯಾರು ಉಳಿಯಬಹುದು, ಉಳಿಯಲ್ಲ ಅಂತಾ ಚರ್ಚೆ ನಡೆಸ್ತಾರೆ. ಆದ್ರೆ, ಬೆಟ್ಟಿಂಗ್ ಮಾಡೋ ಮಟ್ಟಕ್ಕೆ ಯಾರೂ ಹೋಗಲ್ಲ. ಆದ್ರೆ, ಬಿಗ್‌ಬಾಸ್‌ ಮನೆಯಲ್ಲಿ ಇನ್ನು ಫೈನಲ್‌ಗೆ ಎಷ್ಟೋ ವಾರ ಬಾಕಿಯಿರುವಾಗಲೇ ಬೆಟ್ಟಿಂಗ್‌ ಶುರುವಾಗಿಬಿಟ್ಟಿದೆ.
ಫೈನಲ್‌ ನಲ್ಲಿ ಯಾರು ಇರ್ತಾರೆ, ಯಾರು ಇರಲ್ಲ ಅನ್ನೋ ಚರ್ಚೆ ಆರಂಭವಾಗಿದೆ. ಆಶ್ಚರ್ಯ ಅಂದ್ರೆ, ಇದು ನಡೆದಿರೋದು ಬಿಗ್‌ಹೌಸ್‌ನ ಸ್ಮೋಕಿಂಗ್‌ ಝೋನ್​ನಲ್ಲಿ. ಅದು ಯಾರ ಯಾರ ನಡುವೆ ಗೊತ್ತಾ? ಕುರಿ ಪ್ರತಾಪ್‌ ಮತ್ತು ರಾಜು ತಾಳಿ ಕೋಟೆ ನಡುವೆ.

ಪ್ರಿಯಾಂಕಾ ಫೈನಲ್‌ಗೆ ಬರ್ತಾರೋ..? ಬರೋಲ್ವಾ..?
ಕುರಿ ಪ್ರತಾಪ್‌ ಮತ್ತು ರಾಜು ತಾಳಿ ಕೋಟೆ ಇಬ್ಬರು ಧಮ್‌ ಫ್ರೆಂಡ್ಸ್‌. ಇಬ್ರು ಜೊತೆ ಜೊತೆಯಲ್ಲಿಯೇ ಧಮ್‌ ಹೊಡ್ಕೊಂಡು ಮಾತನಾಡ್ತಿರ್ತಾರೆ. ಇಷ್ಟು ದಿನ ಏನ್ ಮಾತನಾಡಿದ್ರು ಗೊತ್ತಿಲ್ಲ. ಆದ್ರೆ, ಮೊನ್ನೆ ಮಾತನಾಡಿರೋದು ಇಂಟರೆಸ್ಟಿಂಗ್‌ ವಿಷ್ಯವಾಗಿದೆ. ಧಮ್‌ ಹೊಡೀತಾ ಮತಾನಾಡುತ್ತಿದ್ದ ರಾಜು ತಾಳಿ ಕೋಟೆ, ಪ್ರಿಯಾಂಕಾ ಸೇಫ್ ಆಗ್ತಾಳೆ ಅಂತಾ ನಾನು ಮೊದ್ಲೆ ಹೇಳಿದ್ದೆ ಅಂತಾ ಹೇಳಿದರು. ಅದಕ್ಕೆ ಕುರಿ ಪ್ರತಾಪ್‌, ಅವಳು ಫೈನಲ್‌ವರೆಗೂ
ಹೋಗ್ತಾಳೆ ಅಂತಾ ಭವಿಷ್ಯ ನುಡಿದರು.

ಇದಕ್ಕೆ ನೋ ಎಂದ ರಾಜು ತಾಳಿ ಕೋಟೆ, ಇಲ್ಲ ಪ್ರಿಯಾಂಕಾ ಫೈನಲ್‌ಗೆ ಹೋಗಲ್ಲ. ಎಷ್ಟೆಷ್ಟು ಒಂದು ಎಕರೆ ಜಮೀನು.. ಅದಕ್ಕೆ ಕುರಿ ಪ್ರತಾಪ್‌ ಇಲ್ಲ, ಇಲ್ಲ ಅಂತಾರೆ. ಮಾತು ಮುಂದುವರೆಸೋ ರಾಜು ತಾಳಿ ಕೋಟೆ, ಇಲ್ಲಿ ಏನ್ ವಿಚಾರ ಬೇಕೋ ಅದು ಆಕೆಯಲ್ಲಿ ಇಲ್ಲ ಅಂತಾರೆ. ಇದಕ್ಕೆ ಕುರಿ ಪ್ರತಾಪ್‌ ಪ್ಲಾನ್ ಮಾಡ್ಕೊಂಡು ಬಂದಿರ್ತಾರೆ ಎಂದರು. ಇದಕ್ಕೆ ಒಪ್ಪದ ರಾಜು ತಾಳಿಕೋಟೆ, ಪ್ಲಾನ್ ಮಾಡಿಕೊಂಡು ಬಂದರೆ ಇಲ್ಲಿ ವರ್ಕೌಟ್ ಆಗೋಲ್ಲ. ಅದು ಇಲ್ಲಿ ನಡೆಯೋದಿಲ್ಲ ಅಂತಾ ಹೇಳ್ತಾರೆ. ಒಟ್ನಲ್ಲಿ ಪ್ರಿಯಾಂಕಾ ಫೈನಲ್‌ಗೆ ಬರ್ತಾರೆ ಅನ್ನೋ ವಿಷ್ಯ, ಬೆಟ್ಟಿಂಗ್‌ವರೆಗೂ ಹೋಗಿದೆ.

Comments are closed.