ಮನೋರಂಜನೆ

ನೃತ್ಯ​ ಮಾಡುತ್ತಲೇ ತಮ್ಮನಿಗೆ ಚಪ್ಪಲಿ ತೋರಿಸಿದ ಬಾಲಿವುಡ್​ ಗಾಯಕಿ!

Pinterest LinkedIn Tumblr


ಬಾಲಿವುಡ್​ ಗಾಯಕಿ ನೇಹಾ ಕಕ್ಕರ್​ ಯಾರಿಗೆ ಗೊತ್ತಿಲ್ಲ ಹೇಳಿ? ಸ್ಟೇಜ್​ ಮೇಲೆ ಬಂದರಂತೂ ನೇಹಾ ಹಾಡಿಗೆ ಹೆಜ್ಜೆ ಹಾಕದವರಿಲ್ಲ. ಕೆಲವೊಮ್ಮೆ ನೇಹಾ ಕೂಡ ಹಾಡು ಹಾಡುತ್ತಾ ಸ್ಟೇಜ್​ ಮೇಲೆ ಹೆಜ್ಜೆ ಹಾಕೋದುಂಟು. ಇದೀಗ ನೇಹಾ ಡ್ಯಾನ್ಸ್​ ಮಾಡುತ್ತಲೇ ಸಹೋದರನಿಗೆ ಚಪ್ಪಲಿ ತೋರಿಸಿದ್ದಾರೆ! ಯಾಕೆ ಗೊತ್ತೇ?

ನೇಹಾ ಅವರ ತಮ್ಮ ಟೋನಿ ಕಕ್ಕರ್​ ‘ನಾಗಿನ್ ಜೈಸಿ‘​ ವಿಡಿಯೋ ಹಾಡೊಂದನ್ನು ರಚಿಸಿ ಯ್ಯೂಟೂಬ್​ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ನೇಹಾ ಕಕ್ಕರ್​ ಕೂಡ ಹೆಜ್ಜೆ ಹಾಕಿದ್ದಾರೆ. ವಿಡಿಯೋದ ಕೊನೆಯಲ್ಲಿ ಸಹೋದರ ಹುಡುಗಿಯ ಜೊತೆ ಡ್ಯಾನ್ಸ್​ ಮಾಡುತ್ತಾರೆ. ಇದನ್ನು ನೋಡಿದ ನೇಹಾ ತಮಾಷೆಗಾಗಿ ಚಪ್ಪಲಿ ತೋರಿಸುತ್ತಾರೆ.

ಇದೊಂದು ತಮಾಷೆ ಹಾಡಗಿದ್ದು, ಈ ಹಾಡಿನಲ್ಲಿ ಎಲ್ಲಾ ವಯಸ್ಸಿನವರು ಇದ್ದಾರೆ. ಮಾತ್ರವಲ್ಲದೆ, ಚಿಕ್ಕವರಿಂದ ಅತಿ ದಪ್ಪದವರು ಕೂಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ನೇಹಾ ಕಕ್ಕರ್​ ಅವರ ತಮ್ಮ ಟೋನಿ ಕಕ್ಕರ್​ ಕೂಡ ಗಾಯಕರಾಗಿದ್ದು, ಹಾಡುಗಳನ್ನು ರಚಿಸುತ್ತಾ ಯ್ಯೂಟೂಬ್​ನಲ್ಲಿ ಬಿಡುಗಡೆ ಮಾಡುತ್ತಿರುತ್ತಾರೆ. ಈ ಹಿಂದೆ ‘ಕಾಂತ ಬಾಯಿ‘ ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಇದೀಗ ಅ.15 ರಂದು ‘ನಾಗಿನ್​ ಜೈಸಿ‘ ಹಾಡನ್ನು ಬಿಡುಗಡೆ ಮಾಡಿದ್ದಾರೆ.

Comments are closed.