ಮನೋರಂಜನೆ

ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ದುನಿಯಾ ರಶ್ಮಿ ಕುರಿತು ಒಂದಿಷ್ಟು…

Pinterest LinkedIn Tumblr


‘ದುನಿಯಾ’ ಸಿನಿಮಾದ ನಾಯಕಿ ನಟಿಯಾಗಿ ಜನರ ಮನಸ್ಸಿನಲ್ಲಿ ದುನಿಯಾ ರಶ್ಮಿ ಎಂದೇ ಉಳಿದುಕೊಂಡ ರಶ್ಮಿ ಮಾಡಿದ್ದು ಕೆಲವೇ ಕೆಲವು ಸಿನಿಮಾಗಳು. ಮುರಾರಿ, ಅಕ್ಕ ತಂಗಿ, ಮಂದಾಕಿನಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಕಳೆದ ವರ್ಷ ಅವರ ಅಭಿನಯದ ‘ಕಾರ್ನಿ’ ಸಿನಿಮಾ ಫ್ಲಾಪ್ ಆಯ್ತು. ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾದಲ್ಲೂ ರಶ್ಮಿ ನಟಿಸಿದ್ದರು.

ಟೀನೇಜ್‌ನಲ್ಲಿ ದುನಿಯಾ ಸಿನಿಮಾ ನಾಯಕಿಯಾಗಿ ನಟಿಸಿ ಜನಪ್ರಿಯರಾದ ರಶ್ಮಿಗೆ ನಂತರ ಚಿತ್ರರಂಗದ ಗ್ರಾಫ್‌ ಅಷ್ಟೇನೂ ಚೆನ್ನಾಗಿರಲಿಲ್ಲ ಎಂದೇ ಹೇಳಬಹುದು. ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ನಟಿಸುತ್ತಾ ಬಂದ ರಶ್ಮಿ ಈಗ ಸ್ವಲ್ಪ ಸಣ್ಣಗಾಗಿದ್ದಾರೆ. ಇವರ ಅಭಿನಯದ ‘ಜಗ್ಗಿ ಜಗನ್ನಾಥ್’ ಸಿನಿಮಾ ಇನ್ನೇನು ತೆರೆ ಕಾಣಬೇಕಿದೆ.

Comments are closed.