ಮನೋರಂಜನೆ

ಬಹುದಿನದ ಕನಸು ನನಸು ಮಾಡಿಕೊಂಡ ಗುಳಿಕೆನ್ನೆ ನಟಿ ರಚಿತಾ ರಾಮ್

Pinterest LinkedIn Tumblr


ಬೆಂಗಳೂರು: ಗುಳಿಕೆನ್ನೆ ಬೆಡಗಿ ರಚಿತಾರಾಂ ಬಿಡುವಿನ ಸಮಯದಲ್ಲಿ ಏನಾದರೊಂದು ಮಾಡುತ್ತಲೇ ಇರ್ತಾರೆ. ಸೋಮವಾರ ಅವರು ಜನದಟ್ಟಣೆ ಇರುವ ಬೆಂಗಳೂರಿನ ಮೆಟ್ರೋದಲ್ಲಿ ಅಭಿಮಾನಿಗಳ ಕಿರಿಕಿರಿ ಇಲ್ಲದೇ ಪ್ರಯಾಣ ಮಾಡಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ತೆಗೆದ ಫೋಟೋಗಳನ್ನು ರಚಿತಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಬಹುದಿನದ ಕನಸನ್ನು ನನಸು ಮಾಡಿದ ತೇಜಕ್ರಾಂತಿ ಎಂಬುವರಿಗೆ ಧನ್ಯವಾದವನ್ನೂ ಹೇಳಿದ್ದಾರೆ.

Comments are closed.