
ನಟ-ನಟಿಯರು ಸಾಮಾನ್ಯವಾಗಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾಗ ಕೆಲವರು ಅಭಿನಯಿಸುವಾಗ ಪಾತ್ರಗಳಲ್ಲಿ ಮುಳುಗಿ ಹೋಗುತ್ತಾರೆ. ಈ ಬಗ್ಗೆ ಸಾಕಷ್ಟು ಬಾರಿ ಕೇಳಿದ್ದೇವೆ. ಆದರೆ ಇಲ್ಲೊಬ್ಬರು ನಟಿ ಹಾಡೊಂದಕ್ಕೆ ಹೆಜ್ಜೆ ಹಾಕುವಾಗ ಮೈ ಮರೆತು ತೊಟ್ಟಿದ್ದ ಟಿ-ಶರ್ಟ್ ಅನ್ನೇ ತೆಗೆದು ಎಸೆದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಅಭಿನಯಿಸಿರುವ ನಟಿ ಇಂತಹ ಕೆಲಸ ಮಾಡಿದ್ದಾರೆ. ಅವರು ಕನ್ನಡದ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಈ ಲೆಟೆಸ್ಟ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಡಿಬಾಸ್ ದರ್ಶನ್ ಜೊತೆ ‘ಐರಾವತಾ’ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಊರ್ವಶಿ ರೌಟೇಲ, ಹಿಂದಿ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಫೋಟೋಶೂಟ್ಗಳಿಗೂ ಪೋಸ್ ಕೊಟ್ಟಿರುವ ಊರ್ವಶಿ ಅವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಬಿಜಲಿ ಕೆ ತಾರ್….’ ಹಾಡಿಗೆ ಸೊಂಟ ಬಳುಕಿಸಿದ್ದು, ಡಾನ್ಸ್ ಮಾಡುತ್ತಾ ತಮ್ಮ ಟಿ-ಶರ್ಟ್ ಅನ್ನು ತೆಗೆದು ಎಸೆದಿದ್ದಾರೆ. ಈ ವಿಡಿಯೋವನ್ನು ಖುದ್ದು ಊರ್ವಶಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಪ್ಯಾಷನ್ನಿಂದ ಡಾನ್ಸ್ ಮಾಡುವ ಐವರಿಗೆ ಟ್ಯಾಗ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಸದ್ಯ ಊರ್ವಶಿ ‘ಪಾಗಲ್ಪಂತಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅನೀಸ್ ಬಾಜ್ಮಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇದೇ ನವೆಂಬರ್ಗೆ ತೆರೆ ಕಾಣಲಿರುವ ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ಇಲಿಯಾನಾ, ಅನಿಲ್ ಕಪೂರ್, ಪುಲಕಿತ್ ಸಾಮ್ರಾಟ್, ಕೃತಿ ಕರಬಂಧ ಸಹ ತಾರಾಗಣದಲ್ಲಿದ್ದಾರೆ.
Comments are closed.