
ಬುಧವಾರ ತೆರೆಕಂಡ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾಗೆ ಎಲ್ಲ ಕಡೆಗಳಲ್ಲೂ ಅಭೂತಪೂರ್ವ ಜನಮನ್ನಣೆ ಸಿಕ್ಕಿದೆ. ಸಿನಿಮಾ ತೆರೆಕಾಣುವುದಕ್ಕೆ ಮೊದಲೇ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ನಿರೀಕ್ಷೆಯನ್ನು ಸಿನಿಮಾ ಹುಸಿ ಮಾಡಿಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಪರಿಣಾಮ ‘ಸೈರಾ’ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗಳಿಕೆಯನ್ನೇ ಮಾಡಿದೆ.
ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ‘ಸೈರಾ’ ತೆರೆಗೆ ಬಂದಿತ್ತು. ಐದೂ ಭಾಷೆಗಳಿಂದ ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಬರೋಬ್ಬರಿ 59 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬುದು ತಜ್ಞರ ಅಭಿಪ್ರಾಯ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ.
ಇನ್ನು ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ದಿನೇ ಹೆಚ್ಚುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಸಾಲು ಸಾಲು ರಜೆಗಳು. ವೀಕೆಂಡ್ ವೇಳೆ ಸಹಜವಾಗಿಯೇ ಸಿನಿಮಾ ನೋಡಲು ಜನರು ಆಗಮಿಸುತ್ತಾರೆ. ಇನ್ನು, ನವರಾತ್ರಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿರುವುದರಿಂದ ಸಹಜವಾಗಿಯೇ ಕಲೆಕ್ಷನ್ ಹೆಚ್ಚಲಿದೆ.
ಸಿನಿಮಾ ಬಗ್ಗೆ ಟ್ವಿಟ್ಟರ್ನಲ್ಲಿ ಸಾಕಷ್ಟು ಜನರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾ ಅತ್ಯದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು, ಕಿಚ್ಚ ಸುದೀಪ್ ಪಾತ್ರದ ಬಗ್ಗೆಯೂ ಸಾಕಷ್ಟು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ಪಾತ್ರವನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಇದು ಸುದೀಪ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.
ತೆಲುಗು ಸ್ಟಾರ್ ನಟ ಚಿರಂಜೀವಿ ಮುಖ್ಯಭೂಮಿಕೆ ನಿರ್ವಹಿಸಿರುವ ‘ಸೈರಾ’ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್, ಹಿಂದಿಯ ಅಮಿತಾ ಬಚ್ಚನ್, ಕಾಲಿವುಡ್ನ ವಿಜಯ್ ಸೇತುಪತಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ವಿವಿಧ ಭಾಷೆಯ ಸ್ಟಾರ್ ನಟರು ಬಣ್ಣ ಹಚ್ಚಿರುವುದರಿಂದ ಚಿತ್ರದ ಮೈಲೇಜ್ ಹೆಚ್ಚಿದೆ.
Comments are closed.