ಮನೋರಂಜನೆ

250 ಕೋಟಿ ವೆಚ್ಚದ “ಸೈರಾ” ಬಿಡುಗಡೆ ಮೊದಲೇ ನೂಕುನುಗ್ಗಲು!

Pinterest LinkedIn Tumblr


“ಸೈರಾ” ಸಿನಿಮಾ ಬಿಡುಗಡೆಯ ಮುನ್ನವೇ ನೂಕುನುಗ್ಗಲು. ಇದು ಕಂಡುಬಂದಿದ್ದು ಉದ್ಯಾನ ನಗರಿಯಲ್ಲಿ. ಅ.2 ರಂದು ಚಿತ್ರ ಬಿಡುಗಡೆಯ ಪ್ರಯುಕ್ತ ಚಿತ್ರತಂಡ ಬೆಂಗಳೂರಿನಲ್ಲಿ ಪ್ರಮೋಷನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಬಹುಭಾಷಾ ನಟಿ ತಮನ್ನಾ, ಸೈರಾ ನರಸಿಂಹ ರೆಡ್ಡಿ ಚಿತ್ರದ ನಿರ್ಮಾಪಕ ರಾಮ್ ಚರಣ್ ತೇಜಾ, ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮುಂತಾದ ಗಣ್ಯರು ಭಾಗವಹಿಸಿದ್ದರು.

250 ಕೋಟಿಗೂ ಭಾರಿ ವೆಚ್ಚದಲ್ಲಿ ಪಂಚ ಭಾಷೆಯಲ್ಲಿ ತೆರೆ ಕಾಣುತ್ತಿರುವ “ಸೈರಾ” ದ ಬಗ್ಗೆ ಚಿತ್ರತಂಡ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿತು. ಆಂಗ್ಲರ ವಿರುದ್ಧ ಸ್ವತಂತ್ರ ಹೋರಾಟಗಾರ ನಡೆಸಿದ ಕ್ರಾಂತಿಕಾರಿ ಚಳವಳಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ನಟ ಶಿವಣ್ಣ ಕೂಡ ಸಿನಿಮಾದ ಜೊತೆಗೆ ಚಿರಂಜೀವಿಯ ಕರ್ನಾಟಕದ ಪ್ರೇಮವನ್ನು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದರು. ತಮ್ಮ ನೆಚ್ಚಿನ ನಟರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ವೇದಿಕೆಗೆ ಜಮಾಯಿಸತೊಡಗಿದರು. ನೂಕುನುಗ್ಗಲು ಆರಂಭವಾಗಿತ್ತು. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಆದರೂ ಕೆಲವು ಅಭಿಮಾನಿಗಳು ಪಟ್ಟುಬಿಡದೆ ಚಿರಂಜೀವಿ, ತಮನ್ನಾ, ರಾಮ್ ಚರಣ್,ಶಿವಣ್ಣ ಅವರನ್ನು ನೋಡಿ ತೃಪ್ತಿಪಟ್ಟುಕೊಂಡರು. ದೇಶಾದಾದ್ಯಂತ “ಸೈರಾ” ಅಬ್ಬರ ಭರ್ಜರಿಯಾಗಿ ಶುರುವಾಗಿದೆ. ವಾರದ ಟಿಕೆಟ್ ಗಳು ಆನ್ ಲೈನಿನಲ್ಲಿ ಈಗಾಗಲೇ ಮಾರಾಟ ವಾಗಿಬಿಟ್ಟಿವೆ. ಸಿನಿಮಾದಲ್ಲಿ ಚಿರಂಜೀವಿ, ಅಮಿತಾಭ್ ಬಚ್ಚನ್, ಸುದೀಪ್, ತಮನ್ನಾ, ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧ ಭಾಷೆಯ ಹಲವು ನಟರು ಅಭಿನಯಿಸಿದ್ದಾರೆ.

Comments are closed.