ಮನೋರಂಜನೆ

ಕನ್ನಡದ ಬಿಗ್ ಬಾಸ್ ಸೀಸನ್ – 7ರ ಸ್ಪರ್ಧಿಗಳ ಹೊಸ ಪಟ್ಟಿ

Pinterest LinkedIn Tumblr


ಕನ್ನಡದ ಬಿಗ್ ಬಾಸ್ ಸೀಸನ್ – 7 ಆರಂಭಕ್ಕೆ ಇನ್ನೂ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಈಗಾಗಲೇ ಬಿಗ್ ಬಾಸ್ ಸೀಸನ್ -7 ಗೆ ಯಾವ ಯಾವ ಸೆಲೆಬ್ರೆಟಿಗಳು ಎಂಟ್ರಿಕೊಡಲಿದ್ದಾರೆ ಎಂಬ ಕುತೂಹಲ ದಿನೇ ದಿನೇ ಪ್ರೇಕ್ಷಕರಲ್ಲಿ ಹೆಚ್ಚಾಗುತ್ತಿದೆ. ಸದ್ಯ ಈ ಸೀಸನ್ ನಲ್ಲಿ ಬರಲಿರುವ ಕೆಲವು ಸ್ಪರ್ಧಿಗಳ ಹೊಸ ಪಟ್ಟಿ ಸದ್ದು ಮಾಡುತ್ತಿದೆ.

ಕಳೆದ ಆರು ಸೀಸನ್ ಗಳಿಂದ ಮನೆ ಮನೆಯ ಮಾತಾಗಿರುವ ಬಿಗ್ ಬಾಸ್ ಸೀಸನ್ 7 ಮತ್ತೊಮ್ಮೆ ಕಿರುತೆರೆ ಮೇಲೆ ಬರಲು ರೆಡಿಯಾಗುತ್ತಿದೆ. ಈ ಹಿಂದೆ ಆರು ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದ ನಟ ಕಿಚ್ಚ ಸುದೀಪ್ ರವರೇ ಈ ಸೀಸನ್ ಕೂಡ ನಡೆಸಿಕೊಡಲಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೆ ಬಿಗ್ ಬಾಸ್ ಸೀಸನ್ -7 ಪ್ರೊಮೋ ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೆದಿತ್ತು.

ಇನ್ನೂ ಈ ಪ್ರೋಮೊದಲ್ಲಿ ಹೇಳುವಂತೆ ಅಕ್ಟೋಬರ್ ತಿಂಗಳಿಂದ ಬಿಗ್ ಬಾಸ್ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಸದ್ಯ ಮುಂದಿನ ತಿಂಗಳು ಯಾವ ದಿನಾಂಕದಿಂದ ಬಿಗ್ ಬಾಸ್ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಮಾತ್ರ ಅಧಿಕೃತವಾಗಿ ಬಹಿರಂಗ ಪಡಿಸಬೇಕಾಗಿದೆ.

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ , ‘ಬಿಗ್ ಬಾಸ್ 7’ ಸ್ಪರ್ಧಿಗಳ ಬಗ್ಗೆ ಚರ್ಚೆ ಜೋರಾಗಿದ್ದು, ಯಾರ್ಯಾರು ಈ ಬಾರಿ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಈ ನಡುವೆ ಕಲರ್ಸ್ ಕನ್ನಡದ ‘ರಾಧಾ ರಮಣ’ ಧಾರಾವಾಹಿಯಲ್ಲಿ ಮಿಂಚಿದ್ದ ನಟಿ ಶ್ವೇತಾ ಪ್ರಸಾದ್ ಬಿಗ್ ಬಾಸ್ ಸ್ಪರ್ಧಿಯಾಗಿ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಶ್ವೇತಾ ಪ್ರಸಾದ್ ಈ ಬಾರಿಯ ಬಿಗ್ ಬಾಸ್​ನಲ್ಲಿ ಸ್ಪರ್ಧಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಅವರು ಈ ಆಫರ್ ಒಪ್ಪಿದ್ದಾರೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ಮಾತ್ರ ಸಿಕ್ಕಿಲ್ಲ.

ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಾಸ್ಯ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿರುವ ಶಿವರಾಜ್ ಕೆಆರ್ ಪೇಟೆ ಈ ಬಾರಿಯ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬರಲಿದ್ದು, ಬಿಗ್ ಮನೆಯಲ್ಲಿಯೂ ಹಾಸ್ಯದ ರಸದೌತಣ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈಗಾಗಲೇ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವುದರಿಂದ ಶಿವರಾಜ್ ಕೆಆರ್ ಪೇಟೆ ಬಿಗ್ ಬಾಸ್ ಮನೆ ಪ್ರವೇಶಿಸುವುದು ಇನ್ನೂ ಖಚಿತವಾಗಿಲ್ಲ.

ಇನ್ನೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಮೂಲಕ ಎಲ್ಲರ ಮನೆ ಮಾತಗಿದ್ದ ಹಳ್ಳಿ ಹೈದ ಹನುಮಂತಪ್ಪ.-ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರಂತೆ. ಈಗಾಗಲೇ ಸಾಕಷ್ಟು ಫೇಮಸ್ ಆಗಿರುವ ಹನುಮಂತಣ್ಣ ಬಿಗ್ ಮನೆ ಸೇರಲಿದ್ದಾರಾ ಕಾದು ನೋಡಬೇಕಾಗಿದೆ.

ಹಲವು ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸುತ್ತಾ, ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಖ್ಯಾತಿಯ ​ಕುರಿ ಪ್ರತಾಪ್​ ಕೂಡ ಈ ಬಾರಿಯ ಬಿಗ್​ ಬಾಸ್​ ಸ್ಪರ್ಧಿಗಳ ಸಾಲಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ನಟ ವಿಜೆ ಅಗ್ನಿ ಕೂಡ ಬಿಗ್​ ಬಾಸ್​ 7 ಸ್ಪರ್ಧಿ ಎನ್ನುವ ಮಾತಿದೆ.

ಅಲ್ಲದೆ ಈ ಹಿಂದೆ ನಟಿ ಶರ್ಮಿಳಾ ಮಾಂಡ್ರೆ ಕೂಡ ಬಿಗ್ ಬಾಸ್ ಸ್ಪಧಿಯಾಗಿ ಬಿಗ್ ಬಾಸ್ ಮನೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ವಿಚಾರವಾಗಿ ಮಾತನಾಡಿದ ಶರ್ಮಿಳಾ ಮಾಂಡ್ರೆ ಈ ಸುದ್ದಿ ಸುಳ್ಳು ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಆಗಿ ಸೀಸನ್ 7 ರಲ್ಲಿ ಭಾಗವಹಿಸುವ 15 ಮಂದಿ ಯಾರ್ಯಾರು ಎಂಬ ಚರ್ಚೆಗೆ ಬಿಗ್​ ಬಾಸ್​ ಓಪನಿಂಗ್​ ದಿನವೇ ತೆರೆ ಬೀಳಲಿದೆ.

Comments are closed.