ಮನೋರಂಜನೆ

ಟ್ರಾಫಿಕ್‌ ದಂಡ ವಿರೋಧಿಸಿ ಚಾಲಕರ ಪರ ನಿಂತ ಕಿರಿಕ್ ಬೆಡಗಿ!

Pinterest LinkedIn Tumblr


ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲಾ ಒಂದು ಸುದ್ದಿಯಿಂದ ಸದ್ದು ಮಾಡುತ್ತಿದ್ದ ಸ್ಯಾಂಡಲ್ ವುಡ್ ಕಿರಿಕ್ ಚೆಲುವೆ ಸಂಯುಕ್ತ ಹೆಗಡೆ ಇದೀಗ ಟ್ರಾಫಿಕ್ ರೂಲ್ಸ್ ವಿರುದ್ದ ಧ್ವನಿ ಎತ್ತಿದ್ದಾರೆ.

ಕೇಂದ್ರ ಸರ್ಕಾರ ಹೊರಡಿಸಿರುವ ಮೋಟಾರು ವಾಹನ ಕಾಯ್ದೆ ನಿಯಮ ವಿಚಾರವಾಗಿ ಪರ ವಿರೋಧಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ. ಸದ್ಯ ಈ ವಿಚಾರವಾಗಿ ‘ಕಿರಿಕ್ ಪಾರ್ಟಿ’ ನಟಿ ಸಂಯುಕ್ತಾ ಹೆಗ್ಡೆ ಚಾಲಕರ ಪರ ಧ್ವನಿಯೆತ್ತಿದ್ದಾರೆ. ಭ್ರಷ್ಟಚಾರ ವ್ಯವಸ್ಥೆಯಲ್ಲಿ ದಂಡದ ನಿಯಮ ಯಾವ ರೀತಿಯಾಗಿ ಜಾರಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ದಂಡ ಪಾವತಿಸುವಾಗ ಫೈನ್ ಮೊತ್ತ ಎಷ್ಟು ದುಬಾರಿಯಾಗಿದೆ ಎಂದು ಜನರು ನಿಯಮ ಪಾಲಿಸುತ್ತಾರೆ. ಇದಕ್ಕಿಂತ ಬೇರೆ ದೇಶಗಳಲ್ಲಿಯೂ ಕೂಡ ಫೈನ್ ಮೊತ್ತ ದುಬಾರಿಯಾಗಿದೆ. ಆದರೆ ಆ ದೇಶಗಳಲ್ಲಿ ಪೊಲೀಸರು ಭ್ರಷ್ಟಚಾರದಲ್ಲಿ ತೊಡಗುವುದಿಲ್ಲ . ಆದರೆ ಭಾರತದಲ್ಲಿ ಮೋಟಾರು ವಾಹನ ಕಾನೂನಿನಲ್ಲಿ ಹೆಚ್ಚಿನ ದಂಡ ವಿಧಿಸಿರುವುದರಿಂದ ಬದಲಾವಣೆ ಆಗುತ್ತಿರುವುದು ಟ್ರಾಫಿಕ್ ಪೊಲೀಸರ ಲಂಚ ಅಷ್ಟೇ. ಅತೀ ಹೆಚ್ಚು ದಂಡ ವಿಧಿಸಿದರೆ ಪೊಲೀಸರು 100 ರಿಂದ 500 ಲಂಚದ ಅಮೀಷ ಒಡ್ಡುತ್ತಾರೆ. ಜನರು ಕೂಡ ಪೈನ್ ಗಿಂತ ಲಂಚದ ಮೊತ್ತವೆ ಕಡಿಮೆ ಎಂದು ಪಾವತಿಸಲು ಮುಂದಾಗುತ್ತಾರೆ ಎಂಬುದಾಗಿ ನಟಿ ಸಂಯುಕ್ತ ಹೆಗ್ಡೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಿಜವಾಗಿಯೂ ಶಿಕ್ಷೆಯ ಭಯವಿದ್ದರೆ ತಪ್ಪು ಮಾಡುವ ಸಂಭವ ಕಡಿಮೆ. ಹಾಗೆಯೇ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಸಹ ಕೆಲಸ ನಿರ್ವಹಿಸಬೇಕಲ್ಲವೇ. ಶಿಕ್ಷೆಯ ಭಯವು ಲಂಚದ ರೂಪಕ್ಕೆ ಮಾರ್ಪಡುವುದು ಕೂಡ ಕಾನೂನುಬಾಹಿರ. ಇಂತಹ ನಿಯಮಗಳಿಂದ ಲಂಚಕ್ಕೆ ಮತ್ತಷ್ಟು ಆಹ್ವಾನ ನೀಡಿದಂತಾಗುತ್ತದೆ ಎಂದು ಸಂಯುಕ್ತಾ ಹೆಗ್ಡೆ ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆ ಸ್ಯಾಂಡಲ್ ವುಡ್ ನಟಿ ಸೋನು ಗೌಡ ಕೂಡ ನೂತನ ಟ್ರಾಫಿಕ್ ರೂಲ್ಸ್ ನಿಂದ ಬಡ ವಾಹನ ಸವಾರರು ಹೆಚ್ಚಿನ ದಂಡ ಪಾವತಿಸಬೇಕಾಗಿದೆ. ಹಾಗೆಯೇ ರಸ್ತೆ ಸರಿ ಮಾಡದ ಸರ್ಕಾರಕ್ಕೆ ದಂಡ ಎಷ್ಟು ಹಾಕಬೇಕು ಎಂದು ಪ್ರಶ್ನಿಸಿದ್ದರು.

Comments are closed.