ಮನೋರಂಜನೆ

ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ನಿಂದ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಸಾಧ್ಯವಿಲ್ಲ : ಕಮಲ್ ಹಾಸನ್

Pinterest LinkedIn Tumblr

ಚೆನ್ನೈ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಯತ್ನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಕ್ಕಳ ನೀಧಿ ಮಯ್ಯಂ ಸಂಸ್ಥಾಪಕ ಹಾಗೂ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು, ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ನಿಂದ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ್ದಾರೆ.

‘ರಾಷ್ಟ್ರ ನಿರ್ಮಾಣದ ಸಮಯದಲ್ಲಿ ನೀಡಲಾದ ವಚನವನ್ನು ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ಹಿಂಪಡೆಯಲು ಸಾಧ್ಯವಿಲ್ಲ’ ಎಂದು ಕಮಲ್ ಹಾಸನ್ ಅವರು ಪರೋಕ್ಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟಾಂಗ್ ನೀಡಿದ್ದಾರೆ.

ವೈವಿಧ್ಯತೆಯಿಂದ ಕೂಡಿದ ಭಾರತದಲ್ಲಿ ಹಬ್ಬದ ವಾತಾವರಣವಿದೆ, ಒಂದು ವೇಳೆ ಹಿಂದಿ ಹೇರಿಕೆಯಾದ್ರೆ ವಾಕರಿಕೆ ಆಗುತ್ತೆ’ ಎಂದು ಕಮಲ್ ಹೇಳಿದ್ದಾರೆ.

ಭಾರತ ಸಾಂವಿಧಾನಿಕ ಗಣರಾಜ್ಯವಾದಾಗ, ಸರ್ಕಾರವೂ ಸಹ ಜನರಿಗೆ ಅದೇ ರೀತಿ ಭರವಸೆ ನೀಡಿತ್ತು. ಯಾವುದೇ ಶಾ ಅಥವಾ ಸುಲ್ತಾನ ಅಥವಾ ಸಾಮ್ರಾಟ ಇದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ 2017ರ ಜಲ್ಲಿ ಕಟ್ಟು ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಕಮಲ್ ಹಾಸನ್ ಅವರು, “ಜಲ್ಲಿಕಟ್ಟು ಕೇವಲ ಪ್ರತಿಭಟನೆಯಾಗಿತ್ತು, ನಮ್ಮ ಭಾಷೆಯ ಪರವಾದ ಯುದ್ಧ ಅದಕ್ಕಿಂತ ದೊಡ್ಡದಾಗಿರಲಿದೆ ಎಚ್ಚರಿಸಿದ್ದಾರೆ. ಅಲ್ಲದೆ ಭಾರತ ಅಥವಾ ತಮಿಳ್ ನಾಡಿಗೆ ಅಂತಹ ಯುದ್ಧ ಎದುರಿಸುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ನಮ್ಮ ರಾಷ್ಟ್ರಗೀತೆಯನ್ನು ಪ್ರಸ್ತಾಪಿಸಿದ ಕಮಲ್, ರಾಷ್ಟ್ರಗೀತೆ ಬಂಗಾಳಿ ಭಾಷೆಯಲ್ಲಿದೆ. ಏಕೆಂದರೆ ಅದನ್ನು ರಚಿಸಿದ್ದೇ ಬಂಗಾಳಿ ಭಾಷೆಯಲ್ಲಿ. ಅದು ಭಾರತದ ಬಹುತೇಕ ಜನರ ಮಾತೃಭಾಷೆಯಲ್ಲ. ಆದ್ರೂ ನಾವೆಲ್ಲರೂ ಬಂಗಾಳಿ ಭಾಷೆಯಲ್ಲಿರೋ ರಾಷ್ಟ್ರಗೀತೆಯನ್ನೇ ಸಂತೋಷದಿಂದ ಹಾಡುತ್ತಿದ್ದೇವೆ. ಮುಂದೆಯೂ ಹಾಡುತ್ತಿರುತ್ತೇವೆ ರಾಷ್ಟ್ರಗೀತೆಯನ್ನು ರಚಿಸಿದ ಕವಿ ರವೀಂದ್ರನಾಥ್ ಠಾಗೋರ್ ಎಲ್ಲ ಭಾಷೆಗಳನ್ನು, ಸಂಸ್ಕೃತಿಯನ್ನೂ ಗೌರವಿಸುತ್ತಾರೆ. ರಾಷ್ಟ್ರಗೀತೆಯಲ್ಲಿ ಅಡಕಗೊಳಿಸಿದ್ದಾರೆ, ಹೀಗಾಗಿ ಅದು ನಮ್ಮ ರಾಷ್ಟ್ರಗೀತೆಯಾಗಿದೆ ಎಂದು ವಿವರಿಸಿದ್ದಾರೆ.

Comments are closed.