ಮನೋರಂಜನೆ

ತೂಕ ಇಳಿಸಿಕೊಳ್ಳಲು ಹೋಗಿ ಮಾತುಬಾರದ ಸ್ಥಿತಿಯಲ್ಲಿ ಅನುಷ್ಕಾ ಶೆಟ್ಟಿ!

Pinterest LinkedIn Tumblr


ಅನುಷ್ಕಾ ಶೆಟ್ಟಿ ತಮ್ಮ ಸರಳತೆಗೆ ಹೆಸರಾದ ನಟಿ. ಕರಾವಳಿಯ ಈ ಬೆಡಗಿ ಕನ್ನಡತಿಯಾದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಟಾಲಿವುಡ್​ನ ಸಿನಿಮಾಗಳು. ಪ್ರಯೋಗಾತ್ಮಕ ಸಿನಿಮಾ ‘ಸೈಜ್​ ಝೀರೊ’ದಲ್ಲಿ ಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್​ ಸ್ವೀಟಿ ನಂತರ, ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್​ಗಳನ್ನು ಕಳೆದುಕೊಂಡಿದ್ದರು.

ಅವರು ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಯಾವುದೂ ಫಲ ನೀಡಲಿಲ್ಲ. ಕಡೆಗೆ ‘ಬಾಹುಬಲಿ’ ಸಿನಿಮಾಗಾಗಿ ಹೇಳುಕೊಳ್ಳುವಷ್ಟು ಅಲ್ಲವಾದರೂ, ತಕ್ಕಮಟ್ಟಿಗೆ ತೆಳ್ಳಗಾಗಿದ್ದರು. ನಂತರ ‘ಭಾಗಮತಿ’ ಸಿನಿಮಾದಲ್ಲೂ ಅವರು ಕೊಂಚ ದಪ್ಪವಾಗಿಯೇ ಕಾಣುತ್ತಿದ್ದರು. ಇದಾದ ನಂತರ ಅವರಿಗೆ ಯಾವುದೇ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಗಲೇ ಇಲ್ಲ.

ಇದರಿಂದಾಗಿ ನಟಿ ಅನುಷ್ಕಾ ಶೆಟ್ಟಿ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಳ್ಳುವ ಚಿಕಿತ್ಸೆ ಪಡೆದು ನಂತರ ಭಾರತಕ್ಕೆ ಮರಳಿದ್ದರು. ಅವರು ಭಾರತಕ್ಕೆ ಮರಳುವ ಮುನ್ನವೇ ಅವರಿಗೆ ಹಾಲಿವುಡ್​ ಅಂದರೆ ಇಂಗ್ಲಿಷ್​ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊಂದು ಅರಸಿ ಬಂದಿತ್ತು. ಆ ಸಿನಿಮಾಗಾಗಿ ಫೋಟೋಶೂಟ್​ ಸಹ ಮಾಡಿಸಲಾಗಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಅನುಷ್ಕಾ ಮಾತನಾಡದ ಸ್ಥಿತಿ ತಲುಪಿದ್ದಾರಂತೆ.

ಹೌದು, ಅವರ ಈ ಸ್ಥಿತಿಗೆ ಕಾರಣ ಅವರು ದೇಹದ ತೂಕ ಇಳಿಸಿಕೊಂಡಿದ್ದೇ ಎಂದು ಹೇಳಲಾಗುತ್ತಿದೆ. ಅವರು ಚಿಕಿತ್ಸೆ ಪಡೆದ ಕಾರಣದಿಂದಲೇ ಅವರಿಗೆ ಈಗ ಮಾತನಾಡಲು ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಅನುಷ್ಕಾ ದೇಹದ ತೂಕ ಇಳಿಸಿಕೊಳ್ಳದೆ ಹೋಗಿದ್ದರೆ, ಹೊಸ ಸಿನಿಮಾದಲ್ಲಿ ಮಾತು ಬಾರದ ಪಾತ್ರ ಅವರಿಗೆ ಸಿಗುತ್ತಿರಲಿಲ್ಲ. ಐದು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಅಭಿನಯಿಸಲಿದ್ದಾರೆ.

ಈ ಸಿನಿಮಾದಲ್ಲಿ ಅನುಷ್ಕಾ ಮಾತು ಬಾರದ ಕಲಾವಿದೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಅಭಿನಯಿಸುತ್ತಿರುವ ಪಾತ್ರದ ಹೆಸರು ಸಾಕ್ಷಿ.

ಈ ಸಿನಿಮಾದಲ್ಲಿ ಆರ್​ ಮಾಧವನ್​, ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು ಹಾಗೂ ಮೈಕೆಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ ಇಂಗ್ಲಿಷ್​, ಹಿಂದಿ​, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿದೆ.

Comments are closed.