ಮನೋರಂಜನೆ

ಕಾಜಲ್ ನಂತರ ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ಸಮಂತಾ

Pinterest LinkedIn Tumblr


ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಮೇಕಪ್ ಇಲ್ಲದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಮೇಕಪ್ ಇಲ್ಲದ ಫೋಟೋವನ್ನು ಹಾಕಿ ಅದಕ್ಕೆ, “ಫೋಟೋವನ್ನು ಫಿಲ್ಟರ್ ಮಾಡಿಲ್ಲ. ಈಗ ನನ್ನ ಕೈಯಿಂದ ನಾನು ಏನೂ ಮಾಡುತ್ತಿದ್ದೇನೆ ಎಂದು ಕೇಳಬೇಡಿ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಸದ್ಯ ಸಮಂತಾ ಅವರ ಮೇಕಪ್ ಇಲ್ಲದ ಫೋಟೋ ನೋಡಿದ ಅಭಿಮಾನಿಗಳು ಕ್ಯೂಟ್, ಬ್ಯೂಟಿಫುಲ್ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ನಟಿ ಕಾಜಲ್ ಅಗರ್ ವಾಲ್ ಅವರು ಸಹ ಮೇಕಪ್ ಇಲ್ಲದ ಫೋಟೋವನ್ನು ಇನ್‍ಸ್ಟಾದಲ್ಲಿ ಹಾಕಿ ಅದಕ್ಕೆ, ಜನರು ತಮ್ಮನ್ನು ಹೆಚ್ಚು ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಜನರು ತೋರಿಕೆಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಸೌಂದರ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಪರಿಪೂರ್ಣ ದೇಹವನ್ನು ಕಂಡುಕೊಳ್ಳುವ ಭರವಸೆಯಿಂದ ಜನರು ಲಕ್ಷಂತಾರ ರೂ. ಖರ್ಚು ಮಾಡಿ ಕಾಸ್‍ಮೆಟಿಕ್ಸ್ ಗಳನ್ನು ಹಾಗೂ ಸೌಂದರ್ಯದ ಉತ್ಪನ್ನಗಳನ್ನು ಖರೀದಿಸುತ್ತಾರೆ ಎಂದು ಬರೆದುಕೊಂಡಿದ್ದರು.

ಅಲ್ಲದೆ ಮೇಕಪ್ ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಮೇಕಪ್ ಹಾಕಿಕೊಳ್ಳುವುದರಿಂದ ನಾವು ಯಾರು? ಮತ್ತು ನಮ್ಮ ವ್ಯಕ್ತಿತ್ವ ಏನು ಎಂಬುದನ್ನು ಹೇಳಲ್ಲ. ನಾವು ನೋಡಲು ಹೇಗೆ ಇದ್ದೇಯೋ ಹಾಗೆ ಪ್ರೀತಿಸಿದರೆ, ಅದೇ ನಮ್ಮ ನಿಜವಾದ ಸೌಂದರ್ಯ ಎಂದು ಕಾಜಲ್ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಮಜಿಲಿ, ಓ ಬೇಬಿ ಚಿತ್ರಗಳ ಬಳಿಕ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಸಮಂತಾ ಇತ್ತೀಚೆಗೆ ತಮ್ಮ ಕುಟುಂಬದ ಜೊತೆಗೆ ಸ್ಪೇನ್‍ನ ಐಬಿಜಾ ದ್ವೀಪದ ಪ್ರವಾಸ ಕೈಗೊಂಡಿದ್ದರು. ಪತಿ ನಾಗಚೈತನ್ಯ, ಮಾವ ನಾಗಾರ್ಜುನ, ಅಮಲಾ ಹಾಗೂ ಅಖಿಲ್ ಅವರ ಜೊತೆಗೆ ಸಮಂತಾ ಫುಲ್ ಎಂಜಾಯ್ ಮಾಡಿದ್ದರು. ನಾಗಾರ್ಜುನ ಅವರ ಬರ್ತ್ ಡೇ ಪಾರ್ಟಿಯಲ್ಲಿ ಸಮಂತಾ ಸುಮಾರು 2 ಲಕ್ಷ ರೂ. ಬಾರ್ಬಿ ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ್ದರು.

Comments are closed.