ಮನೋರಂಜನೆ

ಬಸ್​ ಸ್ಟಾಪ್​ಗಳಲ್ಲಿ ಬಸ್​ಗಿಂತ ಹೆಚ್ಚು ಹುಡುಗಿಯರಿಗಾಗಿ ಕಾಯುತ್ತಿದ್ದಾರಂತೆ ನಟ ಅಮಿತಾಭ್​ ಬಚ್ಚನ್ !

Pinterest LinkedIn Tumblr

ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ತುಂಬಾನೇ ಸೋಷಿಯಲ್​ ಆಗಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಹಾಗೂ ಅಭಿಮಾನಿಗಳ ಜತೆ ಆರಂಭಿಕ ದಿನಗಳ ನೆನಪುಗಳನ್ನು ಅವರು ಹಂಚಿಕೊಂಡಿದ್ದಿದೆ. ಈಗ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಅಮಿತಾಭ್​ ಕಾಲೇಜು ದಿನಗಳನ್ನು ಮೆಲುಕು ಹಾಕಿದ್ದಾರೆ.

ಇಲ್ಲೊಂದು ಅಚ್ಚರಿಯ ವಿಚಾರವಿದೆ. ಅದೇನೆಂದರೆ ಅಮಿತಾಭ್​ ಕಾಲೇಜ್​ಗೆ ತೆರಳುವ ಬಸ್​ನಲ್ಲಿ ಸುಂದರ ಹುಡುಗಿಯರು ಪ್ರಯಾಣ ಮಾಡುತ್ತಿದ್ದರಂತೆ. ಅವರನ್ನು ಹಿಂಬಾಲಿಸುವುದೇ ಅಮಿತಾಭ್​ ಕಾಯಕವಾಗಿತ್ತಂತೆ! ವಿಶೇಷ ಎಂದರೆ ಅನೇಕ ಬಾರಿ ಸುಂದರ ಯುವತಿಯರನ್ನು ನೋಡಲೆಂದೇ ಬಸ್​ ಏರುತ್ತಿದ್ದರಂತೆ ಅಮಿತಾಭ್​.

ನಾನು ನಿತ್ಯ ಕಾಲೇಜ್​ಗೆ ತೆರಳಲು ಬಸ್​ ಏರುತ್ತಿದ್ದೆ. ವಿಶೇಷ ಎಂದರೆ, ಕೆಲ ಬಸ್​ಸ್ಟಾಪ್​ಗಳಲ್ಲಿ ಸುಂದರ ಯುವತಿಯರು ಬಸ್​ ಏರುತ್ತಿದ್ದರು. ಕೆಲ ಬಸ್​ ಸ್ಟಾಪ್​ಗಳಲ್ಲಿ ಬಸ್​ಗಿಂತ ಹೆಚ್ಚು ಹುಡುಗಿಯರಿಗಾಗಿ ಕಾಯುತ್ತಿದ್ದುದೇ ಹೆಚ್ಚು,” ಎಂದಿದ್ದಾರೆ ಅಮಿತಾಭ್​.

ಪದವಿ ಮುಗಿದ ನಂತರ ಅದೇ ಬಸ್​ನಲ್ಲಿ ಓಡಾಡಿದ್ದರು ಅಮಿತಾಭ್​. ಈ ವೇಳೆ ಕಾಲೇಜು ದಿನಗಳಲ್ಲಿ ಇವರು ಸಂಚಾರ ಮಾಡುತ್ತಿದ್ದ ಬಸ್​ನಲ್ಲೇ ಓಡಾಡುತ್ತಿದ್ದ ಯುವತಿಯೊಬ್ಬಳ ಭೇಟಿ ಆಗಿತ್ತು. ಈವೇಳೆ ಅವಳು ಕಾಲೇಜು ದಿನಗಳಲ್ಲಿ ಅಮಿತಾಭ್​ ಮೇಲೆ ಕ್ರಶ್ ಇದ್ದ ವಿಚಾರವನ್ನು ಹೇಳಿಕೊಂಡಿದ್ದಳಂತೆ. ಈ ವಿಚಾರ ಅಮಿತಾಭ್​ ಖುಷಿಯನ್ನು ಹೆಚ್ಚಿಸಿತ್ತು. ಈ ಬಗ್ಗೆ ಅಮಿತಾಭ್​ ಹೇಳಿಕೊಂಡಿದ್ದಾರೆ.

Comments are closed.