ಮನೋರಂಜನೆ

ಬಿಗ್‌ಬಾಸ್ ಖ್ಯಾತಿಯ ನಟಿ ಜಯಶ್ರೀಗೆ ಸೋದರ ಮಾವನಿಂದ ದೈಹಿಕ ಮತ್ತು ಮಾನಸಿಕ ಹಿಂಸೆ

Pinterest LinkedIn Tumblr


ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ಜಯಶ್ರೀಗೆ ಸೋದರ ಮಾವ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದರೆಂದು ಆರೋಪಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನಟಿ ಜಯಶ್ರಿಯ ಸ್ವಂತ ಸೋದರ ಮಾವ ಕಾಟ ನೀಡುತ್ತಿದ್ದು, ರಾತ್ರೋ ರಾತ್ರಿ ಮನೆಯಿಂದ ಹೊರದಬ್ಬಿದ್ದಾರೆಂದು ಆರೋಪಿಸಲಾಗಿದೆ. ಜಯಶ್ರಿ ಮತ್ತು ಅವರ ತಾಯಿಯನ್ನು ಸೋದರಮಾವ ಗಿರೀಶ್ ಎಂಬುವರು ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿದ್ದು, ಅಮ್ಮ ಮಗಳನ್ನ ಮನೆಯಿಂದ ಹಾರಹಾಕಿದ್ದಾರಂತೆ.

ಅಲ್ಲದೇ, ಸೆಪ್ಟೆಂಬರ್ 10ರಂದು ಜಯಶ್ರೀ ಮೇಲೆ ಹಲ್ಲೆ ಮಾಡಿದ್ದಾರೆಂದು ಸೋದರಮಾವ ಗಿರೀಶ್ ವಿರುದ್ಧ ಆರೋಪಿಸಲಾಗಿದೆ. ಅಜ್ಜಿಯ ಆರೋಗ್ಯ ವಿಚಾರಿಸಿದ್ದಕ್ಕೆ ಹಲ್ಲೆ ಮಾಡಿರುವ ಮಾವ, ಅಜ್ಜಿಯನ್ನೂ ನೋಡಿಕೊಳ್ಳೋಕ್ಕೂ ಬಿಡಲ್ಲ ಅನ್ನೋದು ಜಯಶ್ರೀ ಅಳಲು.

ಹೀಗಾಗಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಜಯಶ್ರೀ ಮತ್ತು ಅವರ ತಾಯಿ ಗಿರೀಶ್ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆಂದು ದೂರು ದಾಖಲಿಸಿದ್ದಾರೆ.

Comments are closed.