
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್ ಇದೇ ತಿಂಗಳ 12 ರಂದು 9 ಭಾಷೆಗಳಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ 3000 ಥಿಯೇಟರ್ ಗಳಲ್ಲಿ ತೆರೆ ಮೇಲೆ ಬರಲು ರೆಡಿಯಾಗಿದೆ. ಸದ್ಯ ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿರುವ ಪೈಲ್ವಾನ್ ಚಿತ್ರದ ಬಗ್ಗೆ ಕಿಚ್ಚ ತಮ್ಮ ಟ್ವೀಟರ್ ಖಾತೆಯಲ್ಲಿ ಖುಷಿ ಸಂಗತಿಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದು ಏನು ಗೊತ್ತಾ?
ಹೌದು ಸ್ಯಾಂಡಲ್ ವುಡ್ ನಲ್ಲಿ ಬೇಸ್ ವಾಯ್ಸ್ ಹೊಂದಿರುವ ನಟ ಎಂದರೆ ಅದು ಕಿಚ್ಚ ಸುದೀಪ್, ಈಗಾಗಲೇ ತಮ್ಮ ಖಡಕ್ ವಾಯ್ಸ್ ಮೂಲಕ ಹಲವು ನಟರ ಚಿತ್ರಗಳಿಗೆ ಧ್ವನಿ ನೀಡಿದ್ದಾರೆ. ಇದೀಗ ತಾವು ನಟಿಸಿರುವ ಪೈಲ್ವಾನ್ ಪರಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಕನ್ನಡ ಸೇರಿದಂತೆ ಪರಭಾಷೆಗಳಾದ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾಕ್ಕೆ ಸ್ವತಃ ಸುದೀಪ್ ಡಬ್ ಮಾಡಿರುವುದಾಗಿ ಟ್ವಿಟರ್ ಇಂಡಿಯಾ ಟ್ವಿಟರ್ ಖಾತೆಯ ಬ್ಲೂ ರೂಮ್ ನಿಂದ ಲೈವ್ ನಲ್ಲಿ ಬಂದು ಖುದ್ದಾಗಿ ಹಂಚಿಕೊಳ್ಳುವ ಮೂಲಕ ಕಿಚ್ಚ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಇದೇ ವೇಳೆ ಕನ್ನಡ ನಮ್ಮ ಆಡು ಭಾಷೆ ಹಾಗಾಗಿ ಡಬ್ಬಿಂಗ್ ಕೊಡುವುದು ತುಂಬಾ ಸುಲಭ, ಆದರೆ ಏಕಾಗ್ರತೆಯಿಂದ ವಾಯ್ಸ್ ಡಬ್ಬಿಂಗ್ ಕೊಟ್ಟರೆ ಮತ್ತಷ್ಟು ಚೆನ್ನಾಗಿರುತ್ತದೆ. ನನಗೆ ತಮಿಳ್ ಡಬ್ಬಿಂಗ್ ಕೂಡ ಸುಲಭವಾಗಿತ್ತು. ಆದರೆ ಹಿಂದಿ ಭಾಷೆಯಲ್ಲಿ ಮಾತ್ರ ಧ್ವನಿ ನೀಡುವಾಗ ಬಹಳ ಕಷ್ಟವಾಯಿತು. ಏಕೆಂದರೆ ದಕ್ಷಿಣ ಭಾರತದ ಭಾಷೆಗಳ ಪ್ರಭಾವ ದಿನನಿತ್ಯ ಆಗುತ್ತಲೇ ಇರುತ್ತದೆ. ಆದರೆ ಹಿಂದಿ ಉತ್ತರಭಾರತ ಭಾಷೆಯಾದರಿಂದ ಹಿಂದಿ ಡಬ್ಬಿಂಗ್ ನನಗೆ ಕಷ್ಟವಾಯಿತು. ಆದರೆ ನಾನಂತೂ ಮಾಲಯಾಳಂ ಭಾಷೆಯನ್ನು ಪ್ರಯತ್ನಿಸಲು ಹೋಗಲೇ ಇಲ್ಲ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಆಕಾಂಕ್ಷಾ ಸಿಂಗ್ ನಟಿಸಿದ್ದು, ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಮುಂತಾದ ತಾರಾಬಳಗವೇ ಇದೆ. ಅಲ್ಲದೆ ಚಿತ್ರಕ್ಕೆ ಹೆಬ್ಬುಲಿ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದು, ಸ್ವಪ್ನಾ ಕೃಷ್ಣ ಬಂಡವಾಳ ಹೂಡಿದ್ದಾರೆ.
Comments are closed.