ಮನೋರಂಜನೆ

ಪುರುಷರ ಬಾತ್ ರೂಮ್ ಒಳಹೊಕ್ಕ ’ಡ್ರೀಮ್ ಗರ್ಲ್’

Pinterest LinkedIn Tumblr


ಡ್ರೀಮ್ ಗರ್ಲ್ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿರುವ ಬಾಲಿವುಡ್ ನಟಿ ನುಶ್ರತ್ ಭರುಚಾ ಚಿತ್ರದಂತೆಯೇ ಕನ್ಫ್ಯೂಸ್ ಮಾಡಿಕೊಂಡು ಗಂಡಸರ ಬಾತ್ ರೂಂ ಒಳ ಹೊಕ್ಕಿದ್ದಾರೆ.

ನುಶ್ರತ್ ಭರುಚಾ ಕನ್ಫ್ಯೂಸ್ ಆಗಿ ಗಂಡಸರ ಬಾತ್ ರೂಮ್ ಒಳಗೆ ಹೊಕ್ಕು ಮುಜುಗರ ಅನುಭವಿಸಿರುವ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಕ್ರಾಸ್ ಎಂಟ್ರಿ ಬಗ್ಗೆ ಮಾತನಾಡುತ್ತಾ, ಹೌದು. ನನಗೂ ಒಮ್ಮೆ ಹೀಗಾಗಿತ್ತು. ಥ್ಯಾಂಕ್ ಗಾಡ್ ಸದ್ಯ ಅಲ್ಲಿ ಯಾರೂ ಇರಲಿಲ್ಲ. ಕೆಲವು ರೆಸ್ಟೊರೆಂಟ್ ಗಳಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ. ಬರೀ ಚಿತ್ರವೊಂದನ್ನು ಮಾತ್ರ ಹಾಕಿರುತ್ತಾರೆ. ಅಲ್ಲಿ ಯಾರನ್ನೂ ಕೇಳಲು ಸಾಧ್ಯವಾಗುವುದಿಲ್ಲ. ನನಗೂ ಹೀಗೆ ಕನ್ಫ್ಯೂಸ್ ಆಗಿ ಒಳಕ್ಕೆ ಹೋದೆ ಎಂದಿದ್ದಾರೆ.

ನುಶ್ರತ್ ಭರುಚಾ ಡ್ರೀಮ್ ಗರ್ಲ್ ಸಿನಿಮಾದಲ್ಲಿ ಆಯುಶ್ಮಾನ್ ಖುರಾನಾ ಜೊತೆ ನಟಿಸಿದ್ದಾರೆ. ಸೆಪ್ಟೆಂಬರ್ 13 ರಂದು ತೆರೆಗೆ ಬರಲಿದೆ.

Comments are closed.