
ಸ್ಯಾಂಡಲ್ ವುಡ್ ನಲ್ಲಿ ‘ಯೂ ಟರ್ನ್’ ಎಂಬ ಹಿಟ್ ಸಿನಿಮಾ ನೀಡಿದ ಶ್ರದ್ಧಾ ಶ್ರೀನಾಥ್ ಇತ್ತೀಚಿಗೆ ಬಹುಭಾಷೆಯಲ್ಲಿ ಸಖತ್ ಬ್ಯೂಸಿಯಾಗಿರುವ ನಟಿ. ಸದಾ ತಮ್ಮ ಗಂಭೀರವಾದ ಮಾತುಗಳಿಂದಲೇ ಮನಸೆಳೆಯುವ ಶೃದ್ಧಾಶ್ರೀನಾಥ್, ಸಂದರ್ಶನವೊಂದರಲ್ಲಿ ಶಾಕಿಂಗ್ ಹೇಳಿಕೆ ನೀಡುವ ಸುದ್ದಿಯಾಗಿದ್ದಾರೆ.
ಹೌದು ಸ್ಯಾಂಡಲ್ವುಡ್ ನಟಿಯರೆಲ್ಲ ಮದುವೆ ಮಕ್ಕಳು ಎಂಬ ಕನಸುಗಳನ್ನು ಹಂಚಿಕೊಳ್ಳುವ ಹೊತ್ತಿನಲ್ಲಿ ನಟಿ ಶ್ರದ್ಧಾ ಶ್ರೀನಾಥ್, ನನಗೆ ಮಕ್ಕಳೇ ಬೇಡ ಎಂದು ನಾನು ನಿರ್ಧರಿಸಿದ್ದೇನೆ ಎನ್ನುವ ಮೂಲಕ ಅಚ್ಚರಿ ಹಾಗೂ ಶಾಕ್ ನೀಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡಿದ ಶೃದ್ಧಾ, ನನ್ನ ಅಜ್ಜ-ಅಜ್ಜಿಯರಿಗೆ 15 ಮಂದಿ ಮಕ್ಕಳು. ನಮ್ಮ ಪೋಷಕರಿಗೆ ಇಬ್ಬರು ಮಕ್ಕಳಿದ್ದೇವೆ. ಆದರೆ ನಾನು ಮಕ್ಕಳೇ ಬೇಡ ಎಂಬ ನಿರ್ಣಯ ತೆಗೆದುಕೊಂಡಿದ್ದೇನೆ ಎಂದರು.
ಶ್ರದ್ಧಾ ತಮಗೆ ಮಕ್ಕಳೆ ಬೇಡ ಎನ್ನುವ ನಿರ್ಧಾರ ಮಾಡಿದ್ದು ಏಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೂ ವಿವರಣೆ ನೀಡಿರುವ ಶ್ರದ್ಧಾ ಸಮಾಜದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಘಟನೆಯಿಂದ ಬೇಸರಗೊಂಡಿದ್ದೇನೆ. ”ಕಾಲ ಬದಲಾಗುತ್ತಾ ಇದ್ದರೂ, ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿ ಬದಲಾಗಿಲ್ಲ” ಹೀಗಾಗಿ ನಾನು ಈ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.
ನಟ-ನಟಿಯರನ್ನು ಜನರು ಆದರ್ಶ ಹಾಗೂ ಮಾದರಿ ಎಂದು ಆರಾಧಿಸುತ್ತಾರೆ. ಹೀಗಾಗಿ ನಟಿ ಶ್ರದ್ಧಾ ಶ್ರೀನಾಥ್ ಈ ನಿರ್ಧಾರ ಅಭಿಮಾನಿಗಳ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇರುತ್ತೆ. ಇದಕ್ಕೂ ಉತ್ತರಿಸಿರುವ ಶೃದ್ಧಾ ಶ್ರೀನಾಥ್, ತನ್ನ ರೀತಿ ಯಾರೂ ನಿರ್ಣಯ ಕೈಗೊಳ್ಳಬೇಡಿ. ನನ್ನ ಜ್ಞಾನ, ಶಿಕ್ಷಣ ಮೇಲೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ. ಆದರೆ ಶೃದ್ಧಾ ಶ್ರೀನಾಥ್, ಈ ಹೇಳಿಕೆ ಇದೀಗ ಚಿತ್ರರಂಗದಾದ್ಯಂತ ಸುದ್ದಿ ಮಾಡಿದ್ದು, ಜನ ಇದ್ಯಾಕೆ ಹಿಂಗೆ ಅಂತ ಹುಬ್ಬೇರಿಸುತ್ತಿದ್ದಾರೆ. ಅಲ್ಲದೇ ಮಕ್ಕಳು ಬೇಕು ಎಂದು ಹರಕೆ ಹೊತ್ತು ಮಗು ಪಡೆಯುವ ಈ ದೇಶದಲ್ಲಿ ಮಕ್ಕಳೇ ಬೇಡ ಎಂಬ ಶೃದ್ಧಾ ಚರ್ಚೆ ಹುಟ್ಟುಹಾಕಿದೆ.
Comments are closed.