ಮನೋರಂಜನೆ

ಮಾವ ನಾಗಾರ್ಜುನ ಹುಟ್ಟುಹಬ್ಬದಲ್ಲಿ ದುಬಾರಿ ಕಾಸ್ಟ್ಯೂಮ್‍ನಲ್ಲಿ ನಟಿ ಸಮಂತಾ

Pinterest LinkedIn Tumblr


ಸ್ಪೇನ್: ಮಾವ, ನಟ ನಾಗಾರ್ಜುನ ಅವರ 60ನೇ ಹುಟ್ಟುಹಬ್ಬದಂದು ನಟಿ ಸಮಂತಾ ದುಬಾರಿ ಕಾಸ್ಟ್ಯೂಮ್‍ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅಕ್ಕಿನೇನಿ ಸಕ್ರಿಯವಾಗಿದ್ದಾರೆ. ಕಳೆದ ಏಪ್ರಿಲ್‍ನಲ್ಲಿ ಬಿಡುಗಡೆಯಾದ ಮಜಿಲಿ ಸಿನಿಮಾದಲ್ಲಿ ಪತಿ, ನಾಗಚೈತನ್ಯ ಜೊತೆಗೆ ನಟಿಸಿದ್ದರು. ತಮ್ಮ ಅದ್ಭುತ ನಟನೆ ಮೂಲಕ ಸಮಂತಾ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಚಿತ್ರವೂ ಕೇವಲ 28 ದಿನಗಳಲ್ಲಿ 68 ಕೋಟಿ ರೂ. ಗಳಿಸಿತ್ತು. ಈ ಬೆನ್ನಲ್ಲೇ ಬಿಡುಗಡೆಯಾದ ಓ ಬೇಬಿ ಸಿನಿಮಾ ಬಾಕ್ಸ್ ಕೂಡ ಆಫೀಸ್‍ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು.

ಮಜಿಲಿ, ಓ ಬೇಬಿ ಚಿತ್ರಗಳ ಬಳಿಕ ರಿಲೀಪ್ ಮೂಡ್‍ನಲ್ಲಿರುವ ಸಮಂತಾ ಇತ್ತೀಚೆಗೆ ಕುಟುಂಬದ ಜೊತೆಗೆ ಸ್ಪೇನ್‍ನ ಐಬಿಜಾ ದ್ವೀಪದ ಪ್ರವಾಸ ಕೈಗೊಂಡಿದ್ದರು. ಪತಿ ನಾಗಚೈತನ್ಯ, ಮಾವ ನಾಗಾರ್ಜುನ, ಅಮಲಾ ಹಾಗೂ ಅಖಿಲ್ ಅವರ ಜೊತೆಗೆ ಸಮಂತಾ ಫುಲ್ ಎಂಜಾಯ್ ಮಾಡಿದ್ದಾರೆ.

ನಾಗಾರ್ಜುನ ಅವರ ಬರ್ತ್ ಡೇ ಪಾರ್ಟಿಯಲ್ಲಿ ಬಾರ್ಬಿ ಪಿಂಕ್ ಡ್ರೆಸ್ ಧರಿಸಿ ಸಮಂತಾ ಸಖತ್ ಮಿಂಚಿದ್ದಾರೆ. ಸಮಂತಾ ಉಡುಗೆ ಎಲ್ಲರ ಗಮನಸೆಳೆದಿದೆ.

ಸಮಂತಾ ಒನ್ ಶೋಲ್ಡರ್ ಶಿಮ್ಮರಿ ಡ್ರೆಸ್ ಹಾಗೂ ಗುಸ್ಸಿ ಬ್ಯಾಗ್ ಸೇರಿದಂತೆ ದುಬಾರಿ ಕಾಸ್ಟ್ಯೂಮ್ಸ್ ಧರಿಸಿದ್ದರು. ಸ್ವಿಮಿಂಗ್ ಬಳಿ ಸಿಂಗಲ್ ಆಗಿ ನಿಂತಿರುವ ಫೋಟೋ, ನಾಗಚೈತನ್ಯ ಹಾಗೂ ಕುಟುಂಬದ ಜೊತೆಗೆ ನಿಂತಿರುವ ಫೋಟೋಗಳನ್ನು ಸಮಂತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪಾರ್ಟಿಗಾಗಿ ಸಮಂತಾ ಧರಿಸಿದ್ದ ಡ್ರೆಸ್ ಬೆಲೆ ಬೆಲೆ ಸುಮಾರು 2 ಲಕ್ಷ ರೂ. ಎನ್ನಲಾಗಿದೆ. ಪಿಂಕ್ ಬಣ್ಣದ ಪಾರ್ಟಿ ಡ್ರೆಸ್ ಬೆಲೆ ಅಂದಾಜು 40 ಸಾವಿರ ರೂ. ಹಾಗೂ ಚಿಕ್ಕ ಬ್ಯಾಗ್‍ನ ಬೆಲೆ ಸುಮಾರು 1.38 ಲಕ್ಷ ರೂ. ಎಂದು ಹೇಳಲಾಗಿದೆ.

Comments are closed.