ಮನೋರಂಜನೆ

ಬೆಂಗಳೂರಿನ ನವರಂಗ್ ಚಿತ್ರಮಂದಿರ​ ಇನ್ನು ನೆನಪು ಮಾತ್ರ….!!

Pinterest LinkedIn Tumblr


ಸಿಲಿಕಾನ್ ಸಿಟಿಯ ಸಿನಿ ಇತಿಹಾಸಕ್ಕೆ ರಂಗು ತುಂಬಿದ್ದೇ ಇಲ್ಲಿನ ಥಿಯೇಟರ್​ಗಳು. ಮೆಜೆಸ್ಟಿಕ್, ಸಾಗರ್,ಕಲ್ಪನಾ,ಕೈಲಾಶ್,ಕೆಂಪೇಗೌಡ,ಕಪಾಲಿ,ಸುಜಾತಾ ಹೀಗೆ ಒಂದೊಂದು ಚಿತ್ರಮಂದಿರಗಳ ಹಿಂದು ಒಂದೊಂದು ಸುಂದರ ನೆನಪಿನ ಕತೆ ಇದೆ. ಆದರೆ ಇದರಲ್ಲಿ ಬಹುತೇಕ ಚಿತ್ರಮಂದಿರಗಳು ಈಗ ಪ್ರದರ್ಶನ ನಿಲ್ಲಿಸಿದ್ದು, ಇದೀಗ ಈ ಸಾಲಿಗೆ ನವರಂಗ ಚಿತ್ರಮಂದಿರ ಹೊಸ ಸೇರ್ಪಡೆ.

ಹೌದು ಬೆಂಗಳೂರಿನ ರಾಜಾಜಿನಗರದ ಡಾ.ರಾಜ್​ಕುಮಾರ್ ರಸ್ತೆಯಲ್ಲಿರುವ 59 ವರ್ಷಗಳ ಇತಿಹಾಸ ಇರುವ ನವರಂಗ್ ಥಿಯೇಟರ್ ಇನ್ಮುಂದೆ ಪ್ರದರ್ಶನ ನಿಲ್ಲಿಸಲಿದ್ದು, ಮಲ್ಟಿಪ್ಲೆಕ್ಸ್​ ರೂಪದಲ್ಲಿ ಮತ್ತೆ ಕಾರ್ಯಾರಂಭ ಮಾಡಲಿದೆ. ನಗರದಲ್ಲಿ ಮಲ್ಟಿಪ್ಲೆಕ್ಸ್ ಹಾವಳಿಯಿಂದ ನವರಂಗ ಥಿಯೇಟರ್​ ನಷ್ಟ ಅನುಭವಿಸುವ ಪರಿಸ್ಥಿತಿ ಇತ್ತು. ಎಲ್ಲರೂ ಥಿಯೇಟರ್ ಮಾಲೀಕ ಮೋಹನ್ ಅವರಿಗೆ ಥಿಯೇಟರ್ ಕೆಡವಿ ಶಾಪಿಂಗ್ ಮಾಲ್ ಕಟ್ಟಲು ಸಲಹೆ ನೀಡಿದ್ದರಂತೆ.

ಆದರೆ ತಮ್ಮ ತಂದೆಯ ಸವಿ ನೆನಪಿಗಾಗಿ ಥಿಯೇಟರ್​ ಹಾಗೇ ಉಳಿಸಿಕೊಳ್ಳಲು ಮುಂಧಾಗಿರುವ ಮಾಲೀಕ ಮೋಹನ್​, ಮಲ್ಟಿಪ್ಲೆಕ್ಸ್​ ರೂಪದಲ್ಲಿ ರೀ-ಓಪನ್ ಮಾಡಲಿದ್ದಾರೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣವಾಗಲಿದ್ದು, ರಿನೋವೇಶನ್​ ಕೆಲಸ ಮುಗಿಯುವರೆಗೂ ಚಿತ್ರಪ್ರದರ್ಶನ ಸ್ಥಗಿತಗೊಳ್ಳಲಿದೆ.

ಡಾ. ರಾಜ್​ಕುಮಾರ್​, ಶಿವರಾಜ್​ಕುಮಾರ್ , ಪುನೀತ್ ಸೇರಿದಂತೆ ಸ್ಟಾರ್​ಗಳ ಚಿತ್ರಗಳು ಈ ಥಿಯೇಟರ್​ನಲ್ಲಿ ದಾಖಲೆ ಪ್ರದರ್ಶನ ಕಂಡಿವೆ. ಅಲ್ಲದೇ ಮುಂಗಾರು ಮಳೆ ಚಿತ್ರ 25 ವಾರಕ್ಕೂ ಹೆಚ್ಚು ದಿನ ಇಲ್ಲಿ ಪ್ರದರ್ಶನಗೊಂಡಿದೆ.

Comments are closed.