
ಚೆನ್ನೈ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35ಎ ವಿಧಿ ರದ್ದುಗೊಳಿಸಿದ ಬಳಿಕ ಕಳೆದ ಕೆಲ ವಾರಗಳಿಂದ ಶಾಲೆಗಳನ್ನು ಮುಚ್ಚಿರುವ ಕುರಿತು ನಟಿ ಮತ್ತು ಯುನಿಸೆಫ್ ಸೆಲೆಬ್ರಿಟಿ ಅಡ್ವೊಕೇಟ್ ತ್ರಿಶಾ ಕಣ್ಣನ್ ಕಳವಳ ವ್ಯಕ್ತಪಡಿಸಿದ್ದು, ಕಾಶ್ಮೀರದ ಮಕ್ಕಳ ಅವಸ್ಥೆಯು ಆತಂಕಕಾರಿಯಾಗಿದೆ ಎಂದಿದ್ದಾರೆ.
ಶಾಲೆಗಳನ್ನು ಸ್ಥಗಿತಗೊಳಿಸುವುದು ಕೂಡ ಮಕ್ಕಳ ಮೇಲೆ ಉಂಟಾಗುವ ಮತ್ತೊಂದು ರೀತಿಯ ಹಿಂಸಾಚಾರವಾಗಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಯಾವುದೇ ಆದರೂ ಅದು ಮಕ್ಕಳ ಮೇಲಿನ ದೌರ್ಜನ್ಯವಾಗುತ್ತದೆ. ಮಗುವಿಗೆ ಉತ್ತಮ ಶಿಕ್ಷಣ ದೊರೆತರೆ ಬಹಳಷ್ಟು ವಿಚಾರಗಳನ್ನು ನಿಲ್ಲಿಸಬಹುದು ಮತ್ತು ನಿರ್ಮೂಲನೆ ಮಾಡಬಹುದು ಎಂದು ನನಗನ್ನಿಸುತ್ತದೆ ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 370 ನೇ ಪರಿಚ್ಛೇದದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ತನ್ನ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಅಚ್ಚರಿಯ ಕ್ರಮವನ್ನು ತೆಗೆದುಕೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಬಿಗಿ ಭದ್ರತೆಯಲ್ಲಿಡಲಾಗಿದ್ದು, ಶಾಲೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ತನ್ನ ಯುನಿಸೆಫ್ ಜವಾಬ್ದಾರಿಗಳ ಭಾಗವಾಗಿ ಮಕ್ಕಳೊಂದಿಗೆ ವಿಶೇಷವಾಗಿ ಮಕ್ಕಳ ವಿರುದ್ಧ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳ ಬಗ್ಗೆ ಮಾತನಾಡುತ್ತಾ, ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಮೂಡಿಸಲು ಮನವಿ ಮಾಡಿದರು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳು 2014ರಲ್ಲಿ 9,000 ದಿಂದ 2016 ರಲ್ಲಿ 36,000ಕ್ಕೆ ಏರಿಕೆಯಾಗಿದೆ. ನಾವು ಎಚ್ಚರಗೊಂಡು ಮೌನವನ್ನು ಮುರಿದು ಈ ದೌರ್ಜನ್ಯವನ್ನು ಕೊನೆಗೊಳಿಸಬೇಕು. ಗೆಳೆಯರೊಂದಿಗೆ ಮಾತುಕತೆ ನಡೆಸುವ ಮೂಲಕ ಅಥವಾ ಬಾಲ್ಯವಿವಾಹದ ವಿರುದ್ಧ ಸಾಮಾಜಿಕ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ನಾವು ಧ್ವನಿಯಾಗುವುದರ ಮೂಲಕ ನೊಂದವರಿಗೆ ಸಹಾಯ ಮಾಡಬಹುದು ಎಂದು ತಿಳಿಸಿದರು.
ಸಿನಿಮಾ ನಟಿ ಮತ್ತು ಮಾಡೆಲ್ ಆಗಿರುವ ತ್ರಿಷಾ ಕಣ್ಣನ್ ಅವರು ತಮಿಳು ಚಿತ್ರರಂಗದಲ್ಲಿ ಮೊದಲಿಗೆ ಕಾರ್ಯನಿರ್ವಹಿಸಿದ್ದರು. ಸದ್ಯ ಶರವಣನ್ ನಿರ್ದೇಶನದ ರಾಂಗಿ ಸಿನಿಮಾದಲ್ಲಿ ನಟಿಸುತ್ತಿದ್ದು, ಎ ಆರ್ ಮುರುಗದಾಸ್ ಅವರು ತ್ರಿಷಾಗಾಗಿಯೇ ಚಿತ್ರಕಥೆಯನ್ನು ಬರೆದಿದ್ದಾರೆ.
Comments are closed.