ಮನೋರಂಜನೆ

ಪುನೀತ್​ರೊಂದಿಗೆ ‘ನಿನ್ನಿಂದಲೆ’ ಚಿತ್ರದಲ್ಲಿ ನಟಿಸಿದ್ದ ನಟಿ ಎರಿಕಾ ಸುತ್ತ ಡೇಟಿಂಗ್​ ಹುತ್ತ!

Pinterest LinkedIn Tumblr


ಮುಂಬೈ: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ‘ನಿನ್ನಿಂದಲೆ’ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ಮುಂಬೈ ಬೆಡಗಿ ಎರಿಕಾ ಫರ್ನಾಂಡೀಸ್​ ಲವ್​ನಲ್ಲಿ ಬಿದ್ದಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದ್ದು, ಸಹನಟನೊಬ್ಬನ ಜತೆ ವಿದೇಶ ಪ್ರವಾಸದಲ್ಲಿರುವುದು ಅದಕ್ಕೆ ಪುಷ್ಟಿ ನೀಡುವಂತಿದೆ.

ಬಾಲಿವುಡ್​ ಕಿರುತೆರೆಯ ಪ್ರಸಿದ್ಧ ‘ಕಸೌತಿ ಜಿಂದಗಿ ಕ್ಯಾ’ ಧಾರಾವಾಹಿಯಲ್ಲಿ ಪ್ರೇರಣ ಮತ್ತು ಅನುರಾಗ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಎರಿಕಾ ಮತ್ತು ಪಾರ್ಥ್​ ಸಮ್ಥಾನ್​ ನಿಜ ಜೀವನದಲ್ಲೂ ಪ್ರೇಯಸಿ ಆಗಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕಾಗಿ ಅವರಿಬ್ಬರು ಪದೇಪದೆ ಡೇಟಿಂಗ್​ ಎಂಬ ವದಂತಿಯ ಸುತ್ತ ಸುತ್ತುತ್ತಿದ್ದಾರೆ. ಎಲ್ಲಿಗೇ ಹೋದರು ಜತೆಯಲ್ಲಿಯೇ ಹೋಗುತ್ತಿರುವುದು ಇಬ್ಬರ ನಡುವೆ ಪ್ರೀತಿ ಇರುವುದು ನಿಜವೆಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಸದ್ಯ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ನಲ್ಲಿ ಈ ಜೋಡಿ ಬೀಡುಬಿಟ್ಟಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಇಬ್ಬರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಅವರಿಬ್ಬರು ಜತೆಯಲ್ಲಿದ್ದ ಫೋಟೊಗಳು ಎಲ್ಲಿಯೂ ಕಂಡಿರಲಿಲ್ಲ. ಆದರೆ, ಇದೀಗ ಮಾಲ್ಡೀವ್ಸ್​ ಬೀಚ್​ನಲ್ಲಿ ಎರಿಕಾ ಮತ್ತು ಪಾರ್ಥ್​ ಎಂಜಾಯ್​ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.​ ಇದೇ ಫೋಟೊಗಳು ಇವರಿಬ್ಬರ ನಡುವೆ ಪ್ರೀತಿ ಇರುವುದನ್ನು ಸಾಬೀತು ಪಡಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಸ್ಯಾಂಡಲ್​ವುಡ್​ನಲ್ಲಿ ಬಿಡುಗಡೆಯಾದ ನಿನ್ನಿಂದಲೆ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ಗೆ ಎರಿಕಾ ಜೋಡಿಯಾಗಿದ್ದರು. ಆದರೆ, ಈ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ವಿಯಾಗಲಿಲ್ಲ. ಇದರೊಂದಿಗೆ 2015ರಲ್ಲಿ ತೆರೆಕಂಡ ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ‘ಬುಗುರಿ’ ಚಿತ್ರದಲ್ಲೂ ನಾಯಕಿಯಾಗಿದ್ದರು. ಈ ಚಿತ್ರವು ಕೂಡ ಯಶಸ್ಸು ಸಾಧಿಸಲಿಲ್ಲ. ನಂತರ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಎರಿಕಾ ದೂರವಾದರು.

Comments are closed.