ಮನೋರಂಜನೆ

ರಮ್ಯಾ ಮದುವೆ ಕುರಿತು ನಟ ಜಗ್ಗೇಶ್ ಹೇಳಿದ್ದೇನು ಗೊತ್ತಾ ?

Pinterest LinkedIn Tumblr


ಚಂದನವನದಲ್ಲಿ ಬದ್ಧ ವೈರಿಗಳಂತೆ ಸದಾ ಒಂದಲ್ಲಾ ಒಂದು ವಿಷಯಕ್ಕೆ ಜಗಳವಾಡುವ ಜೋಡಿ ಎಂದರೆ, ಅದು ನವರಸ ನಾಯಕ ಜಗ್ಗೇಶ್ ಹಾಗೂ ಮೋಹಕ ತಾರೆ ರಮ್ಯಾ. ನಟಿ, ಮಾಜಿ ಸಂಸದೆ ರಮ್ಯಾ ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿದ್ದ ಪೋರ್ಚುಗಲ್ ದೇಶದ ರಾಫೆಲ್​ ಎಂಬ ಉದ್ಯಮಿಯ ಜೊತೆ ವಿವಾಹವಾಗುತ್ತಿರುವ ವಿಷಯ ತಿಳಿದ ಬೆನ್ನಲ್ಲೇ ಜಗ್ಗೇಶ್ ಟ್ವೀಟ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ರಮ್ಯಾ ಮತ್ತು ಜಗ್ಗೇಶ್ ನಡುವಿನ ಕಿತ್ತಾಟ ಇವತ್ತು ನಿನ್ನೆಯದಲ್ಲ. ನೀರ್ ದೋಸೆ ಸಿನಿಮಾ ಸಮಯದಿಂದಲು ಜಗ್ಗೇಶ್ ಮತ್ತು ರಮ್ಯಾ ನಡುವೆ ವಾರ್ ನಡೆಯುತ್ತಲೆ ಇದೆ. ಸದಾ ಟ್ವೀಟ್ ಮೂಲಕ ರಮ್ಯಾಳಿಗೆ ಟಾಂಗ್ ನೀಡುವ ಜಗ್ಗೇಶ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಪಡ್ಡೆ ಹುಡುಗರ ಹಾಟ್ ಫೇವರೆಟ್ ಹಿರೋಹಿನ್ ಆಗಿದ್ದ ಚೆಲುವೆ. ತನ್ನ ಮೋಹಕ ನಟನೆಯಿಂದಾಗೆ ಚಂದನವನದಲ್ಲಿ ಬಹುಕಾಲದವರೆಗೆ ಉತ್ತುಂಗದ ಸ್ಥಾನವವನ್ನ ಅಲಂಕರಿಸಿದ್ದರು.

ನಟನೆಗೆ ಬ್ರೇಕ್ ಹಾಕಿ 2013ರಲ್ಲಿ ಮಂಡ್ಯದಿಂದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ರಮ್ಯಾ ಸಂಸತ್​ ಪ್ರವೇಶಿದ್ದರು. ಆದರೆ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿ ಕಾಂಗ್ರೆಸ್​ ಪಕ್ಷದ ಸೋಷಿಯಲ್ ಮೀಡಿಯಾ ಉಸ್ತುವಾರಿ ವಹಿಸಿಕೊಂಡಿದ್ದರು. ಕೆಲ ವರ್ಷಗಳಿಂದ ರಾಜಕೀಯದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ರಮ್ಯಾಳ ಆಪ್ತ ವಲಯದವರ ಬಳಿಯು ಉತ್ತರವಿಲ್ಲ. ಇಂತಹ ಸಮಯದಲ್ಲೀ ರಮ್ಯಾಳ ಮದುವೆ ಸುದ್ದಿ ಎಲ್ಲೆಡೆ ಹಬ್ಬಿದೆ.

ಇನ್ನು ಸುದ್ದಿ ತಿಳಿದ ಕೂಡಲೇ ಜಗ್ಗೇಶ್ “ಶುಭಮಸ್ತು..ಧೀರ್ಘಸುಮಂಗಲಿಯಾಗಿ ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ..God bless..” ಎಂದು ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ. ಇನ್ನು ಸದಾ ರಮ್ಯಾಳ ಮೇಲೆ ಕಿಡಿಕಾರುತ್ತಿದ್ದ ಜಗ್ಗೇಶ ಹೀಗೆ ಶುಭಹಾರೈಸಿ ಟ್ವಿಟ್ ಮಾಡಿರುವುದು ಎಲ್ಲರಿಗೂ ಶಾಕ್ ನೀಡಿದಂತಾಗಿದೆ.

ರಮ್ಯಾ ಮತ್ತು ರಾಫೆಲ್ ಇಬ್ಬರ ಮದುವೆ ದುಬೈನಲ್ಲಿ ನಡೆಯಲಿದೆಯಂತೆ. ಈಗಾಗಲೇ ಕುಟುಂಬದವರು ಮದುವೆ ತಯಾರಿಯಲ್ಲು ಬ್ಯುಸಿಯಾಗಿದ್ದಾರೆ.

Comments are closed.