ಮನೋರಂಜನೆ

KGF 2 : ಯಶ್​​ ಜಾಗಕ್ಕೆ ವಿಜಯ್​ ದೇವರಕೊಂಡ ಆಗಮನ?

Pinterest LinkedIn Tumblr


ಮಳೆ ನಿಂತ್ರೂ ಹನಿ ನಿಂತಿಲ್ಲ ಅಂತಾರಲ್ಲ, ಹಂಗೆ ಸ್ಯಾಂಡಲ್​ವುಡ್​ ಗೇಮ್​ ಚೇಂಜರ್ ಕೆಜಿಎಫ್​ ಸದ್ದು ಇನ್ನು ಕಮ್ಮಿಯಾಗಿಲ್ಲ. ಈ ಬಾರಿ ಸೈಮಾ ಅವಾರ್ಡ್ಸ್​​​ನಲ್ಲೂ ಕೆಜಿಎಫ್​​​​​ ಚಿತ್ರದ್ದೇ ಸಿಂಹಪಾಲು. ಇನ್ನು ಸೈಮಾದಲ್ಲಿ ಯಶ್​​ಗೆ ಏನೆಲ್ಲಾ ಸರ್​ಪ್ರೈಸ್​ ಕಾದಿತ್ತು..? ಏನದು ಯಶ್​​ ಔಟ್​​ ಆಗಿ, ವಿಜಯ್​​ ದೇವರಕೊಂಡ ಇನ್​ ಆದ ಸ್ಟೋರಿ..? ಇಲ್ಲಿದೆ ನೋಡಿ ಡೀಟೈಲ್ಡ್ ರಿಪೋರ್ಟ್.

ಒಂದು ಸಿನಿಮಾದಿಂದ ಒಬ್ಬ ನಟ, ಹೊರ ಬರೋದು, ಮತ್ತೊಬ್ಬ ನಟ ಆ ಪಾತ್ರವನ್ನ ಮಾಡೋದು ಇದೆಲ್ಲಾ ಮಾಮೂಲು. ಆದ್ರೆ ಎಷ್ಟೋ ಸಲ ಅದು ಸುದ್ದಿಯಾಗೋದಿಲ್ಲ. ಇದೀಗ ಯಶ್​​ ಜಾಗಕ್ಕೆ ವಿಜಯ್​ ದೇವರಕೊಂಡ ಆಗಮನವಾಗಿದೆ. ಹಾಗಂತ ಯಶ್​​​ ಹೊರ ಬಂದಿದ್ದಾರೆ ಅಂತಲ್ಲ.

ಇಸ್ಮಾರ್ಟ್​ ಶಂಕರ್ ಸಿನಿಮಾ ಬ್ಲಾಕ್​ ಬಸ್ಟರ್ ಹಿಟ್​ ನಂತ್ರ ಪೂರಿ ಜಗನ್ನಾಥ್​​, ಜನಗಣಮನ ಚಿತ್ರ ಕೈಗೆತ್ತಿಕೊಳ್ಳೊ ಸುದ್ದಿ ಹೊರಬಂದಿತ್ತು. ಇದು ಅವ್ರ ಡ್ರೀಮ್​ ಪ್ರಾಜೆಕ್ಟ್. ಈ ಹಿಂದೆ ಮಹೇಶ್​ ಬಾಬು ಮತ್ತು ಪೂರಿ ಕಾಂಬಿನೇಷನ್​​ನಲ್ಲಿ ಈ ಸಿನಿಮಾ ಬರತ್ತೆ ಅನ್ನಲಾಗಿತ್ತು. ಬಟ್​ ಅದು ನಿಜವಾಗ್ಲೇಯಿಲ್ಲ. ಇತ್ತೀಚೆಗೆ ಅದೇ ಚಿತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್​ ಹೀರೋ ಆಗಿ ನಟಿಸ್ತಾರೆ. ಈ ಬಗ್ಗೆ ಈಗಾಗಲೇ ಇಬ್ಬರೂ ಮಾತುಕತೆ ನಡೆಸಿದ್ದಾರೆ ಅಂತೆಲ್ಲಾ ಸುದ್ದಿಯಾಯ್ತು. ಕೆಜಿಎಫ್​-2 ನಂತ್ರ ಯಶ್​​-ಪೂರಿ ಜನಗಣಮನ ಹಾಡ್ತಾರೆ ಅಂತ್ಲೇ ಎಲ್ಲಾ ಅಂದುಕೊಂಡಿದ್ರು.

ಜನಗಣಮನ ಚಿತ್ರಕ್ಕಿಂತ ಮೊದ್ಲು ಪೂರಿ ಜಗನ್ನಾಥ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹಾಗಂತ ಜನಗಣಮನ ಸಿನಿಮಾ ನಿಂತಿಲ್ಲ. ಪೂರಿ ಹೊಸ ಚಿತ್ರದಲ್ಲಿ​ ವಿಜಯ್ ದೇವರಕೊಂಡ ನಟಿಸ್ತಿದ್ದಾರೆ. ಹಾಗಾಗಿ ಪೂರಿ ನೆಕ್ಸ್ಟ್ ಸಿನಿಮಾ ಹೀರೋ ಯಶ್​ ಅಲ್ಲ, ಬದಲಿಗೆ ರೌಡಿ ವಿಜಯ್​ ದೇವರಕೊಂಡ. ಕೆಜಿಎಫ್​​-2 ಶೂಟಿಂಗ್​ ಮುಗ್ದು, ಸಿನಿಮಾ ರಿಲೀಸ್ ಆಗೋಕ್ಕೆ ಸಾಕಷ್ಟು ಟೈಂ ಇದೆ. ಅಲ್ಲಿವರೆಗೂ ಯಶ್​ ಹೊಸ ಸಿನಿಮಾ ಒಪ್ಪಿಕೊಳ್ಳಲ್ಲ. ಈ ಗ್ಯಾಪ್​​ನಲ್ಲೇ ಟಾಲಿವುಡ್ ಸ್ಟಾರ್ ಡೈರೆಕ್ಟರ್ ಒಂದು ಸಿನಿಮಾ ಮಾಡಿ ಮುಗಿಸೋ ಲೆಕ್ಕಚಾರದಲ್ಲಿದ್ದಾರೆ ಅಷ್ಟೆ.

ಬಾಕ್ಸಾಫೀಸ್​ ಮಾತ್ರವಲ್ಲ, ನ್ಯಾಷನಲ್​ ಅವಾರ್ಡ್ಸ್​​​​​, ಸೈಮಾ ಅವಾರ್ಡ್​ ಎಲ್ಲೆಲ್ಲೂ ಕೆಜಿಎಫ್​​ ಹವಾ ಜೋರಾಗಿದೆ. ಕತಾರ್​​ನಲ್ಲಿ ನಡೆದ ಸೌತ್​ ಇಂಡಿಯನ್​​ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​​ ಕಾರ್ಯಕ್ರಮದಲ್ಲಿ ಕೆಜಿಎಫ್​​ ಟೀಂ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಕನ್ನಡದಲ್ಲಿ ಅತ್ಯುತ್ತಮ ನಟನಾಗಿ ಯಶ್, ಅತ್ಯುತ್ತಮ ನಿರ್ದೇಶಕರಾಗಿ ಪ್ರಶಾಂತ್ ನೀಲ್, ಅತ್ಯುತ್ತಮ ಪೋಷಕ ನಟಿಯಾಗಿ ಅರ್ಚನಾ ಜೋಯಿಸ್, ಅತ್ಯುತ್ತಮ ಛಾಯಾಗ್ರಾಹಕನಾಗಿ ಭುವನ್ ಗೌಡ ಹೀಗೆ ​ಅತಿ ಹೆಚ್ಚು ಪ್ರಶಸ್ತಿಗಳು ಕೆಜಿಎಫ್​ ಚಿತ್ರತಂಡದ ಪಾಲಾಗಿದೆ.

ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದ ಯಶ್​ಗೆ ಸರ್​ಪ್ರೈಸ್​ಗಳು ಕಾದಿತ್ತು. ಕಾರ್ಯಕ್ರಮಕ್ಕೆ ತೆರಳಿದ್ದ ಯಶ್​ ಅವ್ರನ್ನ ಸೈಮಾ ಮತ್ತು ಡಬ್ಲೂ ದೋಹಾ ಹೋಟೆಲ್​ ಸಿಬ್ಬಂದಿ ವಿಶೇಷವಾಗಿ ಸ್ವಾಗತಿಸಿದ್ರು. ಕಾದಿರಿಸಿದ್ದ ಹೋಟೆಲ್​​ ಕೋಣೆಯಲ್ಲಿ ಯಶ್​, ಮಡದಿ ಮತ್ತು ಮಗಳ ಜೊತೆಗಿರೋ ಫೋಟೋಗಳನ್ನ ಕೋಣೆಯಲ್ಲಿ ಅಂಟಿಸಲಾಗಿತ್ತು. ಇದನ್ನ ನೋಡಿ ಖುಷಿಯಾದ ಯಶ್​​​ ಫೋಟೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಎಲ್ಲೆಲ್ಲೂ ರಾಕಿ ಭಾಯ್​ ಹವಾ ಜೋರಾಗಿದೆ.

ಮತ್ತೊಂದು ಸರ್​ಪ್ರೈಸ್ ಅಂದ್ರೆ, ಕೆಜಿಎಫ್​ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಮಾತ್ರವಲ್ಲ, ಮತ್ತೊಂದು ಪ್ರಶಸ್ತಿ ಯಶ್​​ಗೆ ಸಿಕ್ಕಿದೆ. ಸೌತ್​ ಸೂಪರ್​ ಸ್ಟಾರ್​ಗಳನ್ನೆಲ್ಲಾ ಹಿಂದಿಕ್ಕಿ ರಾಕಿಂಗ್ ಸ್ಟಾರ್, ಸೈಮಾ ಬೆಸ್ಟ್​​​ ಸ್ಟೈಲ್​​​ ಐಕಾನ್​​ ಆಫ್​​ ದಿ ಇಯರ್ ಅವಾರ್ಡ್​​​ ಪಡ್ಕೊಂಡಿದ್ದಾರೆ. ಇನ್ನು ಚಿರಂಜೀವಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು, ಮತ್ತೊಂದು ವಿಶೇಷ. ಹೀಗೆ ಈ ಬಾರಿ ಸೈಮಾ, ಯಶ್​​ಗೆ ಸರ್​ಪ್ರೈಸ್​ಗಳ ಗುಚ್ಚ ಅನ್ಬೋದು.

Comments are closed.