
ಇತ್ತೀಚಿನ ದಿನಗಳಲ್ಲಿ ಸಿನಿಮಾ ಪ್ರಮೋಷನ್ಗಾಗಿ ಬಾಲಿವುಡ್ ಸ್ಟಾರ್ಗಳು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ‘ಮಿಷನ್ ಮಂಗಳ್’ ಸಿನಿಮಾ. ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್ ಆಗಿರುವ ವಿಡಿಯೋವೊಂದನ್ನು ಹರಿಬಿಡಲಾಗಿತ್ತು. ಆ ಬಳಿಕ ಅದು ‘ಮಿಷನ್ ಮಂಗಳ್’ ಚಿತ್ರದ ಪ್ರೊಮೋಷನ್ಗಾಗಿ ಮಾಡಿದ ಹೊಸ ಉಪಾಯ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದೀಗ ಮತ್ತೊಮ್ಮೆ ‘ಮಿಷನ್ ಮಂಗಳ್’ ಚಿತ್ರದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ತುಣುಕಿನಲ್ಲಿ ನಟ ಅಕ್ಷಯ್ ಕುಮಾರ್ ಅವರನ್ನು ಸೋನಾಕ್ಷಿ ಸಿನ್ಹಾ ತಳ್ಳಿ ಹಾಕಿದ್ದಾರೆ. ಚಿತ್ರದ ಪ್ರಚಾರ ಕಾರ್ಯದ ನಿಮಿತ್ತ ಆ್ಯಕ್ಷನ್ ಕಿಲಾಡಿ ಅಕ್ಷಯ್, ಸೋನಾಕ್ಷಿ, ತಾಪ್ಸಿ ಪನ್ನು, ವಿದ್ಯಾಬಾಲನ್ ಮತ್ತು ನಿತ್ಯಾ ಮೆನನ್ ಮಧ್ಯೆ ಕುಳಿತು ಮಾತನಾಡುತ್ತಿದ್ದರು.
ಈ ವೇಳೆ ಕುರ್ಚಿ ಮೇಲೆ ಕುಳಿತಿದ್ದ ಅಕ್ಷಯ್ ಕುಮಾರ್ರನ್ನು ಸೋನಾಕ್ಷಿ ಏಕಾಏಕಿ ತಳ್ಳಿದ್ದಾರೆ. ಇದರಿಂದ ಕೆಳಗೆ ಬಿದ್ದ ‘ರುಸ್ತುಂ’ ನಟ ಕೆಲವೊತ್ತು ಕೋಪಗೊಂಡಂತೆ ನಟಿಸಿದ್ದಾರೆ.
ಇನ್ನು ಈ ವಿಡಿಯೋ ಚಿತ್ರೀಕರಣದ ವೇಳೆಯೇ ತಾಪ್ಸಿ ಪನ್ನು ನೀವು ಮೊದಲೇ ಹಾಕಿಕೊಂಡ ಪ್ಲ್ಯಾನ್ನಂತೆ ನಮ್ಮನ್ನು ಹೆದರಿಸಲು ಇದನ್ನೆಲ್ಲಾ ಮಾಡಿದ್ದೀರಾ ಎಂದು ಸೋನಾಕ್ಷಿ ಸಿನ್ಹಾರನ್ನು ಕೇಳುತ್ತಿರುವುದು ಕೂಡ ಸೆರೆಯಾಗಿದೆ.
ಈ ವಿಡಿಯೋವನ್ನು ‘ದಬಂಗ್’ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಭಾರೀ ವೈರಲ್ ಆಗಿದೆ. ಒಟ್ಟಿನಲ್ಲಿ ವಿಭಿನ್ನವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನೈಜ ಕಥೆಯಾಧಾರಿತ ಮಿಷನ್ ಮಂಗಳ್ ಚಿತ್ರವು ಇದೇ ಆಗಸ್ಟ್ 15 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಇನ್ನು ಈ ಚಿತ್ರದಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.
Comments are closed.