ಮನೋರಂಜನೆ

ನಟಿ ಕಾಜಲ್​ ನೋಡುವ ಆಸೆಗೆ ಬರೋಬ್ಬರಿ 60 ಲಕ್ಷ ಕಳೆದುಕೊಂಡ!!

Pinterest LinkedIn Tumblr


ಆತ ಸಿನಿಮಾ ನಟಿ ಕಾಜಲ್ ಅಗರವಾಲ್​ ಅಭಿಮಾನಿಯಾಗಿದ್ದ. ಬದುಕಿನಲ್ಲಿ ಒಮ್ಮೆಯಾದರೂ ಆಕೆಯನ್ನು ಭೇಟಿ ಮಾಡಬೇಕು. ಆಕೆಯ ಜೊತೆ ಪೋಟೋ ತೆಗೆಸಿಕೊಳ್ಳಬೇಕು ಎಂದೆಲ್ಲ ಕನಸು ಹೊತ್ತಿದ್ದ. ಆದರೆ ಇದೀಗ ಆತನ ಈ ಕನಸೇ ಅವನಿಗೆ ಮುಳುವಾಗಿದ್ದು, ನೆಚ್ಚಿನ ನಟಿ ನೋಡುವ ನೆಪಕ್ಕೆ ಯುವಕ ಬರೋಬ್ಬರಿ 60 ಲಕ್ಷ ಕಳೆದುಕೊಂಡು ಬೀದಿ ಪಾಲಾಗಿದ್ದಾನೆ.

ಹೌದು ಯಾರಿಗೆ ಆದರೂ ತಮ್ಮ ನೆಚ್ಚಿನ ನಟ ಹಾಗೂ ನಟಿಯನ್ನು ಸುಲಭವಾಗಿ ನೋಡುವ ಚಾನ್ಸ್ ಸಿಗುತ್ತೆ ಅಂದರೆ ಯಾರಾದರೂ ಮಿಸ್ ಮಾಡಿಕೊಳ್ಳಲು ಸಾಧ್ಯವೆ ? ಇಲ್ಲ ಅದೇನೆ ಆದರೂ ಅವನ್ನು ನೋಡಲೇ ಬೇಕೆಂದು ಪ್ರಯತ್ನಿಸುತ್ತಾರೆ. ಹೀಗೆ ಹಲವು ದಿನಗಳಿಂದ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ನ ನೋಡಬೇಕೆಂದು ಪ್ರಯತ್ನಿಸುತ್ತಿದ್ದ ನಟಿ ಕಾಜಲ್ ಅಭಿಮಾನಿಯೊಬ್ಬರು ಬ್ಲಾಕ್ ಮೇಲ್ ತಂತ್ರದಿಂದ ಸೈಬರ್ ಕಳ್ಳರು ಬೀಸಿದ ಬಲೆಗೆ ಸಿಕ್ಕಿ ಬಿದ್ದು, ತನ್ನ ಬಳಿ ಇದ್ದ 60 ಲಕ್ಷ ರೂ ಗಳನ್ನು ಕಳೆದುಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಹೌದು ಯುವಕನೊಬ್ಬ ಕೆಲವು ವೆಬ್ ಸೈಟ್ ಗಳನ್ನು ಫಾಲೋ ಮಾಡುತ್ತಿದ್ದ, ಹೀಗೆ ಒಂದು ದಿನ ವೆಲ್ ಸೈಟ್ ನ ಜಾಹೀರಾತು ಒಂದರಲ್ಲಿ ‘ನಿಮ್ಮ ನೆಚ್ಚಿನ ನಟಿಯನ್ನ ಭೇಟಿ ಮಾಡುವ ಅವಕಾಶ’ ನಿಮಗೆ ಸಿಗಲಿದೆ ಎಂಬ ಪ್ರಕಟಣೆ ಬಂದಿದ್ದು. ಇದನ್ನು ಗಮನಿಸಿದ ಯುವಕ ಓಪನ್ ಮಾಡಿದ್ದಾನೆ. ನಂತರ ಅದರಲ್ಲಿ ಕೆಲವು ನಟಿಯರ ಪೈಕಿ ನಿಮ್ಮ ಕಾಜಲ್ ಅಗರ್ ವಾಲ್ ಅವರ ಫೋಟೋ ಕೂಡ ಹಾಕಲಾಗಿದ್ದು, ಅದರ ಮೇಲೆ ಕ್ಲಿಕ್ ಮಾಡಿದ ಯುವಕ ಮುಂದುವರೆಸುತ್ತಾ ಹೋಗಿದ್ದಾನೆ. ಆ ಪೇಜ್ ನಲ್ಲಿ ವ್ಯಕ್ತಿಗತವಾದ ಕೆಲವು ವಿವರಗಳನ್ನ ಕೇಳಲಾಗಿತ್ತು. ಕಾಜಲ್ ಭೇಟಿ ಮಾಡಬಹುದು ಎಂಬ ಆಸೆಯಿಂದ ಆ ಯುವಕ ತನಗೆ ಸಂಬಂಧಿಸಿದ ವಿವರಗಳನ್ನ ನೀಡಿದ್ದಾರೆ. ಜೊತೆಗೆ ಕೆಲವು ಫೋಟೊಗಳನ್ನು ಸಹ ಶೇರ್ ಮಾಡಿಕೊಂಡಿದ್ದಾನೆ. ಆತನ ಫೋಟೊಗಳನ್ನು ಗಮನಿಸಿದ ಸೈಬರ್ ಕಳ್ಳರು ಈತ ಶ್ರೀಮಂತ ಮನೆತನದ ಎಂಬುವುದನ್ನು ಅರಿತು ಆತನ ಫೋಟೋಗಳನ್ನು ಉಪಯೋಗಿಸಿ ಮಾರ್ಫಿಂಗ್ ಮಾಡಿ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾರೆ.

ಸೈಬರ್ ಕಳ್ಳರು ತಾವು ಕೇಳಿದಷ್ಟು ಹಣ ನೀಡಲಿಲ್ಲ ಎಂದರೆ ಮಾರ್ಫಿಂಗ್ ಮಾಡಿದ ಫೋಟೋಗಳನ್ನು ಇಂಟರ್ ನಟ್ ಗೆ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಾರಂಬದಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟ ಕಳ್ಳರು ಅದನ್ನೇ ಮುಂದುವರೆಸುತ್ತಾ ಇದೀಗಾ 60 ಲಕ್ಷದ ವರೆಗೂ ಹಣ ವಸೂಲಿ ಮಾಡಿದ್ದಾರಂತೆ. ಕೊನೆಗೆ ಹಣ ಕಾಲಿಯಾದಗ, ಯುವಕ ತನ್ನ ಮಾರ್ಯದೆಯನ್ನು ಕಳೆದುಕೊಂಡು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ದೂರನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು ಸದ್ಯ ಸೈಬರ್ ಕಳ್ಳರನ್ನು ಸೆರೆಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

Comments are closed.