ಮನೋರಂಜನೆ

`ಡಿಯರ್ ಕಾಮ್ರೆಡ್’ ಚಿತ್ರದ ನಟನೆಗೆ ಬೇಷ್ ಎಂದ ರಶ್ಮಿಕಾ ಮಂದಣ್ಣ ಅಮ್ಮ!

Pinterest LinkedIn Tumblr


ಬೆಂಗಳೂರು: ಟಾಲಿವುಡ್ ರೊಮ್ಯಾಂಟಿಕ್ ಜೊಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ `ಡಿಯರ್ ಕಾಮ್ರೆಡ್’ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಮಧ್ಯೆ ರಶ್ಮಿಕಾ ಅವರ ತಾಯಿ `ಡಿಯರ್ ಕಾಮ್ರೆಡ್’ ಚಿತ್ರ ನೋಡಿ ಮಗಳ ನಟನೆಗೆ ಬೇಷ್ ಎಂದಿದ್ದಾರೆ.

ಈ ಸಿನಿಮಾ ಬಿಡುಗಡೆಯಾಗಿ ಕೆಲ ದಿನಗಳು ಕಳೆದಿದೆ. ಚಿತ್ರ ನಿರೀಕ್ಷೆ ಮಾಡಿದಷ್ಟು ಹಣ ಗಳಿಸದಿದ್ದರೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರಕುತ್ತಿದೆ. ರಶ್ಮಿಕಾ, ವಿಜಯ್ ನಟನೆ ಅಭಿಮಾನಿಗಳ ಮನ ಗೆದ್ದಿದೆ. ಗೀತ ಗೋವಿಂದಂ ಚಿತ್ರದ ಬಳಿಕ ಹಲವು ವಿವಾದಗಳಲ್ಲಿ ರಶ್ಮಿಕಾ ಹೆಸರು ಕೇಳಿಬಂದಿತ್ತು. ಆದರೆ ರಶ್ಮಿಕಾ ಮಾತ್ರ ತಮ್ಮ ಸಿನಿಮಾ ಭವಿಷ್ಯಕ್ಕಾಗಿ ತಾವೇ ಒಂದು ದೃಢ ನಿರ್ಧಾರ ಮಾಡಿ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸಿದ್ದಾರೆ. ಡಿಯರ್ ಕಾಮ್ರೆಡ್ ಸಿನಿಮಾ ನೋಡಿದ ನಂತರ ರಶ್ಮಿಕಾ ನಟನೆಗೆ ಅವರ ತಾಯಿ ಸುಮನ್ ಮಂದಣ್ಣ ಫಿದಾ ಆಗಿದ್ದಾರೆ. ತಮ್ಮ ಮಗಳ ನಟನೆ ಬಗ್ಗೆ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಡಿಯರ್ ಲಿಲ್ಲಿ, ನೀನು ನಿನ್ನ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದೀಯ. ನೀನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೀನು ಮಿನುಗುತ್ತಿದ್ದೀಯಾ. ಐ ಲವ್ ಯು ಬೇಬಿ’. ವಿಜಯ್ ನೀವು ಕೂಡ ಅದ್ಭುತವಾಗಿ ಅಭಿನಯಿಸಿದ್ದೀರಿ. ನಿಮ್ಮ ಮುಂದಿನ ಸಿನಿಮಾಗಳಿಗೆ ಆಲ್ ದಿ ಬೆಸ್ಟ್. ಭರತ್ ಅವರು ಬ್ರಿಲಿಯಂಟ್ ಆಲ್ ದಿ ಬೆಸ್ಟ್. ಮೈತ್ರಿ ಎಂಎಂ ಅವರಿಗೆ ಧನ್ಯವಾದ ಎಂದು ಬರೆದು ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ.

`ಗೀತಾ ಗೋವಿಂದಂ’ ಚಿತ್ರದ ಮೂಲಕ ಟಾಲಿವುಡ್ ರೊಮ್ಯಾಂಟಿಕ್ ಜೋಡಿಯಾಗಿ ರಶ್ಮಿಕಾ ಹಾಗೂ ವಿಜಯ್ ಸಖತ್ ಫೇಮಸ್ ಆಗಿದ್ದರು. ಈ ಯುವ ಜೋಡಿ ಇದೀಗ `ಡಿಯರ್ ಕಾಮ್ರೇಡ್’ ಮೂಲಕ ಪ್ರೀತಿ ಸಂದೇಶವನ್ನು ಎತ್ತಿ ಹಿಡಿದಿದೆ. ಜುಲೈ 26ರಂದು `ಡಿಯರ್ ಕಾಮ್ರೇಡ್’ ಸಿನಿಮಾ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದೆ.

ಡಿಯರ್ ಕಾಮ್ರೇಡ್ ಭರತ್ ಕಮ್ಮಾ ನಿದೇರ್ಶನದಲ್ಲಿ ಮೂಡಿ ಬಂದಿದ್ದು, ಚಿತ್ರ ವಿದ್ಯಾರ್ಥಿ ಸಂಘದ ನಾಯಕ ಓರ್ವ ಕ್ರಿಕೆಟ್ ಆಟಗಾರ್ತಿಗೆ ಮನಸೋತು, ಅವರಿಬ್ಬರ ನಡುವಿನ ಪ್ರೀತಿ, ಸಿಟ್ಟು, ಗಲಾಟೆಗಳ ರೋಮ್ಯಾಂಟಿಕ್ ಪ್ರೇಮ ಕಥನವಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ಕೆಮಿಸ್ಟ್ರಿಗೆ ಅಭಿಮಾನಿಗಳು ಮನಸೋತಿದ್ದಾರೆ.

Comments are closed.