ಮನೋರಂಜನೆ

ಪಂಚತಾರಾ ಹೊಟೇಲ್‌ನಲ್ಲಿ 2 ಬಾಳೆಹಣ್ಣು ಖರೀದಿಸಿದ ಬಾಲಿವುಡ್ ನಟನಿಗೆ ಕಾದಿತ್ತು ಬಿಗ್ ಶಾಕ್..!

Pinterest LinkedIn Tumblr


ಚಂಡೀಘಡ್: ಸೆಲೆಬ್ರಿಟಿಗಳಂದ್ರೆ ಫೈವ್‌ಸ್ಟಾರ್ ಹೊಟೇಲ್‌ನಲ್ಲಿ ಊಟ-ತಿಂಡಿ ತಿನ್ನೋದು ಸರ್ವೇಸಾಮಾನ್ಯ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಂದ್ರೆ ಕೇಳ್ಬೇಕಾ..?ಅವರಿಗೆ ಚಿಕ್ಕ ಪುಟ್ಟ ತಿಂಡಿ ತಿನಿಸುಗಳನ್ನು ಫೈವ್‌ಸ್ಟಾರ್ ಹೊಟೇಲ್‌ಗಳಲ್ಲಿ ತಿನ್ನುವುದೇ ಒಂದು ದೊಡ್ಡ ಪ್ರತಿಷ್ಠೆ. ಹೀಗೆ ಪ್ರತಿಷ್ಠೆಗಾಗಿ ಫೈವ್‌ ಸ್ಟಾರ್ ಹೊಟೇಲ್‌ಗೆ ತೆರಳಿ, ಎರಡೇ ಎರಡು ಬಾಳೆಹಣ್ಣು ಕೊಂಡುಕೊಂಡಿದ್ದಕ್ಕೆ ಬಾಲಿವುಡ್ ನಟ ಕೊಟ್ಟಿದ್ದು ₹.442ರೂಪಾಯಿ.

ಹೌದು.. ಜನಸಾಮಾನ್ಯರು ₹.20ರೂ.ಗೆ ತೆಗೆದುಕೊಳ್ಳುವ 2 ಬಾಳೆಹಣ್ಣಿಗೆ ಬಾಲಿವುಡ್ ನಟ ರಾಹುಲ್ ಬೋಸ್ ₹.442ರೂ. ತೆತ್ತಿದ್ದಾರೆ. ಚಂಡೀಘಡ್‌ನಲ್ಲಿ ಶೂಟಿಂಗ್‌ಗೆ ತೆರಳಿದ್ದ ರಾಹುಲ್, ಇಲ್ಲಿನ ಜೆ.ಡಬ್ಲ್ಯೂ ಮ್ಯಾರಿಯೇಟ್ ಹೊಟೇಲ್‌ನಲ್ಲಿ ತಂಗಿದ್ದಾರೆ.

ಜಿಮ್ ಮುಗಿಸಿ ಬಂದ ರಾಹುಲ್ ಬೋಸ್, ವರ್ಕೌಟ್ ಬಳಿಕ ಬಾಳೆಹಣ್ಣು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ, ಚಂಡೀಘಡ್‌ನಲ್ಲಿರುವ ಫೈವ್‌ಸ್ಟಾರ್ ಹೊಟೇಲ್‌ನಲ್ಲಿ ಬಾಳೆಹಣ್ಣು ಖರೀದಿಸಿದ್ದಾರೆ. ಈ ವೇಳೆ 2 ಬಾಳೆಹಣ್ಣಿಗೆ ಜಿಎಸ್‌ಟಿ ಎಲ್ಲ ಸೇರಿಸಿ ₹.442 ರೂ. ಚಾರ್ಜ್‌ ಮಾಡಲಾಗಿದೆ.

ಈ ಬಗ್ಗೆ ವೀಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಮಾಡಿದ್ದು, ಹಲವರು ಹಲವು ಥರದ ಕಮೆಂಟ್ಸ್ ಮಾಡಿದ್ದಾರೆ. ಬಾಳೆಹಣ್ಣಿಗೇನಾದ್ರೂ ಚಿನ್ನದ ಲೇಪನ ಮಾಡಿದ್ದಾರಾ..? ಎಂದು ಓರ್ವ ಕೇಳಿದ್ರೆ, ಇನ್ನೊಬ್ಬರು ಇದು ಹಗಲುದರೋಡೆ ಎಂದು ಆರೋಪಿಸಿದ್ದಾರೆ.

Comments are closed.