ಮನೋರಂಜನೆ

ಮತ್ತೊಮ್ಮೆ ಬಿಕನಿಯಲ್ಲಿ ಮಿಂಚಿದ ಬಾಲಿವುಡ್ ಚೆಲುವೆ ಕತ್ರಿನಾ ಕೈಫ್​!

Pinterest LinkedIn Tumblr


ಬಾಲಿವುಡ್ ಚೆಲುವೆ ಕತ್ರಿನಾ ಕೈಫ್​ ನಿನ್ನೆಯಷ್ಟೇ ತಮ್ಮ 36 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನೂ ಬರ್ತ್​ ಡೇ ಸೆಲೆಬ್ರೆಷನ್ ಮೂಡ್ ನಲ್ಲಿ ಇರುವ ಕ್ಯಾಟ್ ಸದ್ಯ ತಮ್ಮ ಹಾಲಿಡೇನ ನ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಹೌದು ಇತ್ತೀಚೆಗಷ್ಟೇ ಬಾಲಿವುಡ್ ನ ಭಾರತ್ ಚಿತ್ರದಲ್ಲಿ ಸಲ್ಲು ಬಾಯ್ ಗೆ ಜೋಡಿಯಾಗಿ ನಟಿಸಿ ಸಕ್ಸಸ್ ಖಂಡಿದ್ದ ಕತ್ರಿನಾ ಕೈಫ್​ ಸದ್ಯ ಗೆಳತಿಯರ ಜೊತೆ ಮೆಕ್ಸಿಕೋ ಟ್ರಿಪ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಮೆಕ್ಸಿಕೋ ಬೀಚ್​ ನಲ್ಲಿ ಸ್ವಿಮ್​ವೇರ್​ ಧರಿಸಿಕೊಂಡು ಹಾಟ್ ಆಗಿ ಕಾಣಿಸಿಕೊಂಡಿರುವ ಕತ್ರಿನಾ ಟ್ರಿಪ್​ನಲ್ಲಿ ತಮ್ಮ ಜಾಲಿ ಕ್ಷಣಗಳನ್ನು ಫೋಟೊ ಕ್ಲಿಕ್ಕಿಸಿಕೊಳ್ಳುವ ಮೂಲಕ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ಧಾರೆ.

ಇನ್ನೂ ತಮ್ಮ ಹುಟ್ಟುಹಬ್ಬದ ಬಗೆಗೆ ಮಾತನಾಡಿರುವ ಕ್ಯಾಟ್​ ‘ನನಗೆ ಸುತ್ತಾಟ ಅಂದ್ರೆ ತುಂಬಾ ಇಷ್ಟ ಹೀಗಾಗಿ ನಾನು ನನ್ನ ಕೆಲ ಗೆಳತಿಯರು ಹಾಗೂ ತಂಗಿಯಂದಿರ ಜೊತೆ ಟ್ರಿಪ್ ಗೆ ಬಂದಿದ್ದು, ಇಲ್ಲಿಯೇ ನನ್ನ ಬರ್ತ್​ ಡೇ ಸೆಲೆಬ್ರೆಷನ್ ಕೂಡ ಮಾಡಿಕೊಂಡಿಕೊಂಡಿದ್ದೇನೆ. ನನಗೆ ಸ್ವಲ್ಪ ಬಿಡುವು ಮಾಡಿಕೊಂಡು, ಯಾವುದೋ ಒಂದು ಪ್ರದೇಶಕ್ಕೆ ಹೋಗಿ ಕಾಲ ಕಳೇಯೋದು ಅಂದ್ರೆ ತುಂಬಾ ಇಷ್ಟ’ ಎಂದು ಸಹ ಹೇಳಿಕೊಂಡಿದ್ದಾರೆ.

ಸದ್ಯ ಇದೀಗಾ ಬಾಲಿವುಡ್ ನಟ ಆಕ್ಷಯ್ ಕುಮಾರ್ ಜೊತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸುತ್ತಿರುವ ಕ್ಯಾಟ್ ಟಿಪ್ ಟಿಪ್ ಬರಿಸಾ ಪಾನಿ ರಿಮಿಕ್ಸ್ ಹಾಟ್ ಸಾಂಗ್ ನಲ್ಲಿ ಅಕ್ಕಿ ಜೊತೆ ಸೊಂಟ ಬಳುಕಿಸಿದ್ದಾರೆ.ಅಲ್ಲದೆ ಈ ಫೋಟೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಸುದ್ದಿಯಾಗಿದ್ದರು.

Comments are closed.