ಮನೋರಂಜನೆ

ಮೂಢನಂಬಿಕೆಯ ಕಾರಣ ಮದುವೆ ಆಗದೆ ಹೋದ ಬಾಲಿವುಡ್ ನ ಈ ಸ್ಟಾರ್​ ನಟ..!

Pinterest LinkedIn Tumblr


ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ಬಂದರೂ ಇನ್ನೂ ಸಾಕಷ್ಟು ಕಡೆಗಳಲ್ಲಿ ಜನರು ಮಾತ್ರ ತಮ್ಮ ನಂಬಿಕೆಗಳಿಂದ ದೂರಾಗಿಲ್ಲ. ಇಂದಿಗೂ ಮೂಢನಂಬಿಕೆಗಳಿಂದಾಗಿ ನಡೆಯುವ ಅನಾಹುತಗಳ ಕುರಿತು ಓದುತ್ತಾ, ಕೇಳುತ್ತಾ ಇರುತ್ತೇವೆ. ಆದರೆ ಇಲ್ಲೊಬ್ಬರು ಖ್ಯಾತ ನಟ ಮೂಢನಂಬಿಕೆಯ ಕಾರಣದಿಂದಲೇ ಇಡೀ ಜೀವನ ಅವಿವಾಹಿತರಾಗಿಯೇ ಉಳಿದಿದ್ದರು.

ಹೌದು, ನಾವು ಯಾವುದೋ ಸಿನಿಮಾ ಕತೆ ಹೇಳುತ್ತಿಲ್ಲ. ಆದರೆ ಈ ನಟನ ಜೀವನ ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ. ಇವರು ಸಿನಿಮಾ ತ್ಯಾಗಮಯಿ ನಾಯಕನಾಗಿ, ರೊಮ್ಯಾಂಟಿಕ್​ ಹೀರೋ ಸೇರಿದಂತೆ ಎಲ್ಲ ರೀತಿಯ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ. ಆದರೆ ಜೀವನದಲ್ಲಿ ಮದುವೆ, ಸಂಸಾರ ಹಾಗೂ ಕೌಟುಂಬಿಕ ಸುಖದಿಂದ ವಂಚಿತರಾಗಿದ್ದರು.

ಬಾಲಿವುಡ್​ನ ಎಪಿಕ್​ ಸಿನಿಮಾ ಎಂದೇ ಕರೆಯಲ್ಪಡುವ ‘ಶೋಲೆ’ಯಲ್ಲಿ ಠಾಕೂರ್​ ಪಾತ್ರದಲ್ಲಿ ಅಭಿನಯಿಸಿದ್ದ ನಟ ಸಂಜೀವ್​ ಕುಮಾರ್​ ಅವರೇ ಜೀವನವಿಡೀ ವಿವಾಹವಾಗದೆ ಇದ್ದ ಆ ಖ್ಯಾತ ನಟ.

ಸಂಜೀವ್​ ಕುಮಾರ್​ ಅವರ ಮನೆಯಲ್ಲಿ ನಡೆದ ಕೆಲವು ಘಟನೆಗಳಿಂದ ಅವರು ವಿವಾಹವಾಗದ ನಿರ್ಧಾರಕ್ಕೆ ಬಂದಿದ್ದರು. ಸಂಜೀವ್​ ಅವರ ಮನೆಯಲ್ಲಿ ಅವರ ತಾತ, ಅಪ್ಪ ಹಾಗೂ ಅಣ್ಣ ವಿವಾಹವಾದ ಹತ್ತು ವರ್ಷಕ್ಕೆ ಸಾವನ್ನಪ್ಪಿದ್ದರು. ಅದಕ್ಕೆ ಸಂಜೀವ್​ ಕುಮಾರ್​ ಸಾಯುವವರೆಗೂ ಮದುವೆಯೇ ಮಾಡಿಕೊಳ್ಳಲಿಲ್ಲ.

ಇನ್ನು ಅವರು ತನ್ನ ಅಣ್ಣನ ಮಗನನ್ನೇ ದತ್ತು ಪಡೆದರು. ಆ ದತ್ತು ಪತ್ರ 10 ವರ್ಷದವನಾಗುತ್ತಿದ್ದಂತೆಯೇ ಸಂಜೀವ್​ ಇಹಲೋಕ ತ್ಯಜಿಸಿದ್ದರು. 47ನೇ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಆದರೆ ಸಂಜೀವ್​ ಅವರಿಗೆ ಹುಟ್ಟಿದಾಗಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇತ್ತಂತೆ.

Comments are closed.