
ಎರಡೇ ಚಿತ್ರದಲ್ಲಿ ನಟಿಸಿದ್ದರೂ ಸಹ ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಬಾಲಿವುಡ್ ಕ್ಯೂಟ್ ಡಾಲ್ ಝೈರಾ ವಾಸಿಂ ತನ್ನದೇ ಆದ ಫ್ಯಾನ್ಸ್ ಫಾಲೋಯಿಂಗ್ ಕ್ರಿಯೇಟ್ ಮಾಡಿದ್ದ ನಟಿ ಚಿತ್ರರಂಗ ತೊರೆಯುವುದಾಗಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತನ್ನ ನೆಚ್ಚಿನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ .
ಮಿ. ಪರ್ಫೆಕ್ಟ್ ಆಮೀರ್ ಖಾನ್ ಅಭಿನಯದ ಸೂಪರ್ ಹಿಟ್ ‘ದಂಗಲ್’ ಚಿತ್ರದಲ್ಲಿ ಗೀತಾ ಪೋಗತ್ ಪಾತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ನಟಿ ಝೈರಾ ವಾಸಿಂ ಚಿಕ್ಕ ವಯಸ್ಸಿನಲ್ಲೆ ಖ್ಯಾತಿಗಳಿಸಿದವರು. ‘ದಂಗಲ್’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನಟಿ ಝೈರಾ. ಆನಂತರ ‘ಸೀಕ್ರೆಟ್ ಸೂಪರ್ ಸ್ಟಾರ್’ ಮತ್ತು ‘ದಿ ಸ್ಕೈ ಈಸ್ ಪಿಂಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
5 ವರ್ಷದ ಮೊದಲು ನಾನು ಒಂದು ನಿರ್ಧಾರ ಮಾಡಿದೆ. ಆ ನಿರ್ಧಾರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಬಾಲಿವುಡ್‍ಗೆ ಹೆಜ್ಜೆ ಇಟ್ಟಾಗ ನನಗೆ ಪಾಪುಲ್ಯಾರಿಟಿಯ ರಸ್ತೆಯನ್ನು ತೆರೆಯಿತು. ನಿಧಾನವಾಗಿ ನಾನು ಯುವ ಜನತೆಗೆ ರೋಲ್ ಮಾಡಲ್ ಆಗಿ ಕಾಣಲಾರಂಭಿಸಿದೆ.
ನಾನು ಬಾಲಿವುಡ್‍ಗೆ ಪಾದಾರ್ಪಣೆ ಮಾಡಿ 5 ವರ್ಷ ಆಗಿದೆ. ಆದರೆ ನನ್ನ ಕೆಲಸದಲ್ಲಿ ನನಗೆ ಖುಷಿಯಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಇಲ್ಲಿ ಫಿಟ್ ಆಗಿದ್ದೇನೆ ಆದ್ರೆ ನಾನು ಇಲ್ಲಿಯವಳಲ್ಲ. ನಟಿ ಆಗುವ ಕಾರಣದಿಂದ ನಾನು ನನ್ನ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದೇನೆ. ಹಾಗಾಗಿ ನಾನು ಚಿತ್ರರಂಗದಿಂದ ನನ್ನ ಸಂಬಂಧವನ್ನು ಮುರಿಯುತ್ತಿದ್ದೇನೆ. ನಾನು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
Comments are closed.