
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಾಸ್ ಸಹೋದರ ‘ಜಾಯ್ ಜೊನಾಸ್’ ಮತ್ತು ‘ಸೋಫಿ ಟರ್ನರ್’ ವಿವಾಹ ಸಮಾರಂಭ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೇರವೇರಿತು. ಇತ್ತೀಚೆಗಷ್ಟೇ ಈ ಮದುವೆಗೆ ಹೋಗಿದ್ದ ಪ್ರಿಯಾಂಕ ಮತ್ತು ನಿಕ್ ತೆರಳಿದ್ದರು ಪಾರ್ಟಿಯೊಂದರಲ್ಲಿ ವಿಹಾರ ನೌಕೆಯಲ್ಲಿ ಆಯಾತಪ್ಪಿ ಸಮುದ್ರಕ್ಕೆ ಬೀಳುತ್ತಿದ್ದ ವೇಳೆ ಪ್ರಿಯಾಂಕಾಳನ್ನು ನಿಕ್ ಕಾಪಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗಾ ಮೈದನ ಮದುವೆಯಲ್ಲಿ ಗುಲಾಬಿ ಬಣ್ಣದ ಸೀರೆಯುಟ್ಟು ಮತ್ತೆ ಸುದ್ದಿಯಾಗಿದ್ದಾರೆ.
ಹೌದು ಯಾವಾಗಲೂ ಭಿನ್ನ ವಿಭಿನ್ನ ಗೆಟಪ್ಗಳು, ಮಾದಕ ಉಡುಪಿನಿಂದ ಸುದ್ದಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಸದ್ಯ ಮೈದುನನ ಮದುವೆಯಲ್ಲಿ ಭಾರತೀಯ ಸಂಪ್ರದಾಯದಂತೆ ಸೀರೆಯುಟ್ಟು ಸರಳ ಮೇಕಪ್ನಲ್ಲಿ ಎಲ್ಲರಿಗೂ ಆಕರ್ಷಣೆಯ ಕೇಂದ್ರ ಬಿಂದುವಾಗಿ ಕಂಗೊಳಿಸುತ್ತಿದ್ದರು.
ಇನ್ನೂ ಪ್ರಿಯಾಂಕ ಪಿಕ್ ಕಲರ್ ಸ್ಯಾರಿಯಲ್ಲಿ ಸಾಕ್ಷಾತ್ ರಂಭೆಯಂತೆ ಮಿಂಚುತ್ತಿದ್ದು ಪಿಗ್ಗಿ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಜೊತೆಗೆ ಪ್ರಿಯಾಂಕಾರೊಂದಿಗೆ ಪತಿ ನಿಕ್ ಜೊನಾಸ್ ಕಪ್ಪು ವರ್ಣದ ಸೂಟ್ನಲ್ಲಿ ಮಿಂಚಿದ್ದಾರೆ.
ಇಷ್ಟಲ್ಲದೆ ಭಾರತೀಯ ಧಿರಿಸಿನಲ್ಲೂ ಮಾದಕವಾಗಿ ಕಂಗೊಳಿಸುತ್ತಿದ್ದ ಪ್ರಿಯಾಂಕಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಲ್ಲಿದ್ದ ಜನರು ನಾ ಮುಂದು ತಾ ಮುಂದು ಎಂದು ತುದಿಗಾಲಿನಲ್ಲಿ ನಿಂತಿದ್ದರು. ಇನ್ನೂ ಪ್ರಿಯಾಂಕಾ ಚೋಪ್ರಾ ಅವರ ಫೋಟೋಗಳನ್ನು ಕ್ಲಿಕ್ಕಿಸಲು ಫೋಟೋಗ್ರಾಫರ್ಗಳು ಮುಗಿಬಿದ್ದರು. ಆ ವೇಳೆ ಆಕರ್ಷಕ ಫೋಸ್ಗಳನ್ನು ನೀಡಿ ಎಲ್ಲರೊಂದಿಗೆ ಪ್ರಿಯಾಂಕಾ ಸಂಭ್ರಮಿಸಿದರು.
ಇನ್ನೂ ಈ ವಿವಾಹದ ಸಮಾರಂಭದ ವೇಳೆ ಪ್ರಿಯಾಂಕರವರು ಆನಂದಭಾಷ್ಪ ಸುರಿಸುವ ಮೂಲಕ ಭಾವುಕರಾಗಿದ್ದಾರೆ . ಇದನ್ನು ಕಂಡ ಪ್ರಿಯಾಂಕ ಪತಿ ನಿಕ್ ಪ್ರಿಯಾಂಕರನ್ನು ಸಮಾಧಾನಗೊಳಿಸಿದ್ದಾರೆ. ಇದರ ಕೆಲವು ಫೋಟೊಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Comments are closed.