
ರಾಕಿಂಗ್ ಸ್ಟಾರ್ ನಟ ಯಶ್ ಮನೆಯಲ್ಲಿ ಮತ್ತೊಂದು ಸಂಭ್ರಮ ಮನೆ ಮಾಡಿದೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿ ಯಶ್ ದಂಪತಿಯಿದ್ದು, ಈ ಬಗ್ಗೆ ಇನ್ಸ್ ಸ್ಟ್ರಾಗ್ರಾಮ್ ನಲ್ಲಿ ಯಶ್ ದಂಪತಿ ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಮೊದಲ ಮಗಳ ನಾಮಕರಣ ಮಾಡಿದ ಯಶ್ ಮತ್ತು ರಾಧಿಕಾ ಪಂಡಿತ್ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಯಶ್ -ರಾಧಿಕಾ ದಂಪತಿ ತಮ್ಮ ಮಗುವಿನ ಮೂಲಕವೇ ತಿಳಿಸಿದ್ದಾರೆ. ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ ಎಂದು ಐರಾ ಮೂಲಕವೇ ಪೋಸ್ಟ್ ಮಾಡಿಸಿದ್ದಾರೆ. ರಾಧಿಕಾ ಪಂಡಿತ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ರಾಕಿಂಗ್ ಸ್ಟಾರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಮ್ಮ ಕುಟುಂಬದ ಮೇಲೆ ಅಭಿಮಾನಿಗಳ ಹಾರೈಕೆ ಇರಲಿ, ಆಶೀರ್ವಾದ ಇರಲಿ ಎಂದು ನಟ ಯಶ್ ಮತ್ತು ರಾಧಿಕಾ ಕೇಳಿಕೊಂಡಿದ್ದಾರೆ.
Comments are closed.