ಮನೋರಂಜನೆ

ಅಮಿತಾಬ್ ಬಚ್ಚನ್ ಜೊತೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಜಯಾ ಬಚ್ಚನ್ ಟ್ರೋಲ್

Pinterest LinkedIn Tumblr

ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ಪತ್ನಿ, ನಟಿ ಜಯಾ ಬಚ್ಚನ್ ತಮ್ಮ ಪತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಟ್ರೋಲ್ ಆಗುತ್ತಿದ್ದಾರೆ.

 

ಅಮಿತಾಬ್ ಬಚ್ಚನ್ ಹಾಗೂ ಜಯಾ ಇಬ್ಬರು ಜೊತೆಯಲ್ಲಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಜಯಾ ತಮ್ಮ ಪತಿ ಅಮಿತಾಬ್ ಭುಜದ ಮೇಲೆ ಮಲಗಿ ಅವರ ಕೈ ಹಿಡಿದುಕೊಂಡಿದ್ದಾರೆ.

 

ಈ ಫೋಟೋವನ್ನು ಅಮಿತಾಬ್ ಆಗಲಿ ಜಯಾ ಆಗಲಿ ಹಂಚಿಕೊಂಡಿಲ್ಲ. ಆದರೆ ಈ ಫೋಟೋ ನೋಡಿ ಜನರು ಜಯಾ ಬಚ್ಚನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಜಯಾ ಅವರಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಸ್ವಲ್ಪ ಕೂಡ ಇಷ್ಟವಿಲ್ಲ. ಅಲ್ಲದೆ ಜಯಾ ತಮ್ಮ ಕೋಪದಿಂದಾಗಿ ಹಲವು ಬಾರಿ ಸುದ್ದಿಯಾಗಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

 

ಈ ಫೋಟೋ ನೋಡಿ ಕೆಲವರು, ಕೊನೆಗೂ ಜಯಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ’ ಎಂದು ಕಮೆಂಟ್ ಮಾಡಿದರೆ, ‘ಈ ಮಹಿಳೆಗೆ ತುಂಬಾ ಸೊಕ್ಕು. ನನಗೆ ಇವರು ಸ್ವಲ್ಪನೂ ಇಷ್ಟ ಇಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಈಗ ಇವರಿಗೆ ತಮ್ಮ ಪತಿ ಜೊತೆ ಕಾಲ ಕಳೆಯಲು ಸಮಯ ಸಿಕ್ತು’ ಎಂದು ಪ್ರತಿಕ್ರಿಯಿಸಿದ್ದಾರೆ.

 

2017ರಲ್ಲಿ ಜಯಾ ಬಚ್ಚನ್ ಗಣೇಶ ಚತುರ್ಥಿಯಂದು ದೇವಾಲಯಕ್ಕೆ ತೆರಳಿದ್ದರು. ದೇವಾಸ್ಥಾನದಿಂದ ಹಿಂತಿರುವಾಗ ಅಭಿಮಾನಿಯೊಬ್ಬ ನಟಿ ಜಯಾ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದನು. ಅದನ್ನು ನೋಡಿದ ಜಯಾ ಕೋಪಗೊಂಡು ಈ ರೀತಿ ಮಾಡಬೇಡಿ (ಡೋನ್ಟ್ ಡು ಡಟ್ ಸ್ಟುಪಿಡ್) ಎಂದು ಗದರಿಸಿ ಮುಂದಕ್ಕೆ ತೆರಳಿದ್ದರು.

 

Comments are closed.