ಮನೋರಂಜನೆ

‘ಐ ಲವ್ ಯೂ’ ನೋಡಿ ಕ್ಷಮೆಯಾಚಿಸಿದ ಹುಚ್ಚ ವೆಂಕಟ್!

Pinterest LinkedIn Tumblr


ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಐ ಲವ್ ಯು ಚಿತ್ರ ತೆರೆಕಂಡು ಅದ್ಭುತ ಪ್ರದರ್ಶನ ಕಂಡಿತ್ತು.

ಈ ಮಧ್ಯೆ ಚಿತ್ರತಂಡಕ್ಕೆ ಅವಹೇಳನಕಾರಿ ಶಬ್ದಗಳನ್ನು ಬಳಸುವ ಮೂಲಕ ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಬಾಯಿಗೆ ಬಂದಂತೆ ಬೈದಿದ್ದರು. ಆದರೀಗಾ ಹುಚ್ಚ ವೆಂಕಟ್ ಐ ಲವ್ ಯು ಚಿತ್ರತಂಡಕ್ಕೆ ಕ್ಷಮೆ ಕೇಳಿದ್ದಾರೆ.

ಹೌದು ಕೆಲವು ದಿನಗಳ ಹಿಂದೆ ನಟ ಹುಚ್ಚ ವೆಂಕಟ್​ ಐ ಲವ್ ಯು ಚಿತ್ರತಂಡಕ್ಕೆ ಅವಹೇಳನಕಾರಿ ಶಬ್ದಗಳನ್ನು ಬಳಸುವ ಮೂಲಕ ನಿಂದಿಸಿದ್ದರು. ಇದು ಉಪ್ಪಿ ಅಭಿಮಾನಿಗಳನ್ನ ಕೆರಳಿಸಿತ್ತು. ಇಂದು ಕುಟುಂಬ ಸಮೇತವಾಗಿ ಐಲವ್​ಯು ಸಿನಿಮಾ ವೀಕ್ಷಿಸಿದ ವೆಂಕಟ್ ಚಿತ್ರಮಂದಿರದಿಂದ ಹೊರ ಬರುತ್ತಿದ್ದಂತೆಯೆ ಚಿತ್ರತಂಡಕ್ಕೆ ಕ್ಷಮೆಯಾಚಿಸಿದ್ದಾರೆ. 10 ಸಾವಿರ ಆಸೆಗಾಗಿ ಮಾತನಾಡಿದೆ, ನನ್ನನ್ನ ಕ್ಷಮಿಸಿ ಎಂದು ಕೇಳಿದ್ದಾರೆ. ಐಲವ್​​ಯು ಚಿತ್ರ ಚೆನ್ನಾಗಿದೆ ಕುಟುಂಬ ಸಮೇತ ಬಂದು ನೋಡಿ. ನಾನು ಹೇಳಿಕೆ ಕೊಟ್ಟಿದ್ದು ತುಂಬಾ ಜನರಿಗೆ ನೋವಾಗಿದೆ. ಕೇವಲ ಟ್ರೈಲರ್ ನೋಡಿ ಐ ಲವ್ ಯು ಸಿನಿಮಾ ಬಗೆಗೆ ಹಗುರವಾಗಿ ಮಾತನಾಡಿದ್ದೆ. ಅದಕ್ಕಾಗಿ ಚಿತ್ರತಂಡಕ್ಕೆ, ಉಪ್ಪಿ ಅಭಿಮಾನಿಗಳಿಗೆ, ಹಾಗೂ ನಿರ್ದೇಶಕರಿಗೆ ಕ್ಷಮೆ ಕೇಳುತ್ತೇನೆ. ರಚಿತಾ ರಾಮ್ ಪಾತ್ರ ಕೂಡ ಬಹಳ ಚೆನ್ನಾಗಿ ಮೂಡಿಬಂದಿದೆ. ಐ ಲವ್ ಯು ಚಿತ್ರ ಸೆಂಟಿಮೆಂಟ್ ಸಿನಿಮಾ, ಯಾರು ಮಿಸ್ ಮಾಡದೆ ಸಿನಿಮಾ ನೋಡಿ. ಎಂದು ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ವೆಂಕಟ್ ತಿಳಿಸಿದ್ದಾರೆ.

Comments are closed.